ಹೊಳಲ್ಕೆರೆ
Subsidy; ನೀರಾವರಿ ಸಬ್ಸೀಡಿ ಕಡಿತ ವಿರೋಧಿಸಿ ರೈತರ ಪ್ರತಿಭಟನೆ
CHITRADURGA NEWS | 08 AUGUST 2024
ಹೊಳಲ್ಕೆರೆ: ಸರ್ಕಾರದಿಂದ ಹನಿ ನೀರಾವರಿಗೆ ಬರುವ ಸಬ್ಸಿಡಿಯನ್ನು(Subsidy) ಕಡಿತ ಮಾಡಿರುವುದನ್ನು ವಿರೋಧಿಸಿ ರೈತ ಸಂಘದ ವತಿಯಿಂದ ಬುಧವಾರ ತೋಟಗಾರಿಕೆ ಸಚಿವರಿಗೆ ತೋಟಗಾರಿಕೆ ಸಹಾಯಕ ನಿರ್ದೇಶಕರ ಮುಖಾಂತರ ಮನವಿ ಸಲ್ಲಿಸಲಾಯಿತು.
ಕ್ಲಿಕ್ ಮಾಡಿ ಓದಿ: warden suspended: ವಿದ್ಯಾರ್ಥಿ ನಿಲಯದ ವಾರ್ಡನ್ ಅಮಾನತು | ಜಿಪಂ ಸಿಇಒ ಆದೇಶ
ರಾಜ್ಯ ಸರ್ಕಾರವು ಹನಿ ನೀರಾವರಿಗೆ ಬರುವ ಸಹಾಯ ಧನವನ್ನು ಇಲ್ಲಿಯವರೆಗೂ ಶೇ 75 ರಷ್ಟು ನೀಡುತ್ತಿತ್ತು ರಾಜ್ಯ ಸರ್ಕಾರದ 5 ಗ್ಯಾರಂಟಿಗಳಿಗೆ ಹಣ ಹೊಂದಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದೇಶ ನೀಡಿದ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆಯು ಎಲ್ಲಾ ಮೂಲಗಳಿಂದ ಹಣ ಹೊಂದಿಸಲು ಹನಿ ನೀರಾವರಿಗೆ ಬರುತ್ತಿದ್ದ ಶೇ 75 ರಿಂದ 55ಕ್ಕೆ ಕಡಿತಗೊಳಿಸುವ ಮೂಲಕ ರೈತರಿಗೆ ಅನ್ಯಾಯ ಎಸೆಗಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಸರ್ಕಾರವು ಹನಿ ನೀರಾವರಿಗೆ ಬರುವ ಸಹಾಯ ಧನವನ್ನು ಶೇ.90 ಕ್ಕೆ ಏರಿಸುತ್ತೇವೆಂದು ಭರವಸೆ ನೀಡಿದ್ದರು. ಆದರೆ ಈಗ ಶೇ. 55 ಕೈ ಇಳಿಸಿದೆ, ಮೊದಲಿನಂತೆ ಶೇ. 75 ರ ಸಹಾಯ ಧನವನ್ನು ಮುಂದುವರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮನವಿ ಮಾಡಿದರು.
ಕ್ಲಿಕ್ ಮಾಡಿ ಓದಿ: Lok Adalat: ಲೋಕ ಅದಾಲತ್‌ನಲ್ಲಿ 4,973 ಪ್ರಕರಣ ಇತ್ಯರ್ಥ | ಪ್ರಧಾನ ಜಿಲ್ಲಾ ನ್ಯಾಯಾಧೀಶ ರೋಣ ವಾಸುದೇವ
ಈ ಸಂದರ್ಭದಲ್ಲಿ ಅಧ್ಯಕ್ಷ ಸಿದ್ದರಾಮಪ್ಪ, ಪ್ರಧಾನ ಕಾರ್ಯದರ್ಶಿಕೆ.ಎನ್.ಅಜಯ್. ಅಣ್ಣಪ್ಪ, ಶಿವಮೂರ್ತಿ, ಶ್ರೀಧರ್, ಪ್ರಭು, ಮಲ್ಲಿಕಪ್ಪ, ಹಾಲೇಶ್, ಸಂಜೀವಪ್ಪ, ಕೆರೆಗುಂಡಿ ನಾಗರಾಜ ಇದ್ದರು.