CHITRADURGA NEWS | 19 NOVEMBER 2024
ಹೊಳಲ್ಕೆರೆ: ವೀರಶೈವ ಲಿಂಗಾಯತ ಸಮಾಜದ ಬಂಧುಗಳು ಒಳಪಂಗಡಗಳೆಂಬ ವೈಮನಸ್ಸು ಮರೆತು ಒಂದಾಗಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ (Shankar Bidari)ಶಂಕರ್ ಬಿದರಿ ಕರೆ ನೀಡಿದರು.
ಹೊಳಲ್ಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಮಾಜದ ಕುಂದು ಕೊರತೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮಾಜ ಅತಿ ದೊಡ್ಡ ಸಮಾಜವಾಗಿದ್ದರೂ ಒಗ್ಗಟ್ಟಿನ ಕೊರತೆಯಿಂದ ರಾಜಕೀಯ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ಇದನ್ನೂ ಓದಿ: ಎಪಿಎಂಸಿ ಆವರಣದಲ್ಲಿ ನ.19ರಂದು ವಿಚಾರ ಸಂಕಿರಣ
ನಮ್ಮಲ್ಲಿನ ಮನಸ್ತಾಪಗಳು ನಮ್ಮ ಹಾಗೂ ಸಮಾಜದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿವೆ. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ನಾವು ಶ್ರಮಿಸಬೇಕಿದೆ.
ವಿದ್ಯೆ ಜತೆಗೆ ವಚನ ಸಂಸ್ಕøತಿ, ಸಂಸ್ಕಾರಗಳನ್ನು ರೂಢಿಸಬೇಕು. ಎಲ್ಲ ಒಳ ಪಂಗಡಗಳು ಒಟ್ಟಾಗಿ ರಾಜ್ಯದ ಪ್ರತಿ ತಾಲೂಕಿನಲ್ಲೂ ತಲಾ ಹತ್ತು ಸಾವಿರಕ್ಕಿಂತ ಹೆಚ್ಚಿನ ಬಂಧುಗಳನ್ನು ವೀರಶೈವ ಲಿಂಗಾಯತ ಸಂಘಟನೆ ಗಟ್ಟಿಗೊಳಿಸಬೇಕು ಎಂದರು.
ಇದನ್ನೂ ಓದಿ: ಭದ್ರಾದಿಂದ ಮುಂದುವರೆದ ಒಳಹರಿವು | ವಿವಿ ಸಾಗರ ಜಲಾಶಯ ಮಟ್ಟ ಎಷ್ಟಾಯ್ತು ?
ಸಮಾಜದ ಕುರಿತು ಕಳಕಳಿ, ಸೇವಾ ಭಾವನೆ ಇರುವವರು ಸಂಘಟನೆಯಲ್ಲಿ ಕೆಲಸ ಮಾಡಲು ಮುಂದೆ ಬರಬೇಕು. ವಿದ್ಯಾರ್ಥಿಗಳಿಗೆ ವಸತಿ ನಿಲಯ ಸ್ಥಾಪನೆ, ಸಮಾಜದ ಸಮಾರಂಭಗಳಿಗೆ ಸಮುದಾಯ ಭವನ ನಿರ್ಮಾಣಕ್ಕೆ ಮಹಾಸಭಾ ಪದಾಧಿಕಾರಿಗಳು ತನು, ಮನ, ಧನ ಅರ್ಪಿಸುವ ಮೂಲಕ ಸಹಕಾರ ನೀಡಬೇಕು. ಸ್ಥಳೀಯವಾಗಿ ಸಮಾಜದ ಬಂಧುಗಳ ಕಷ್ಟ, ದುಃಖಗಳು ತಮ್ಮ ಗಮನಕ್ಕೆ ಬಂದಾಗ, ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವು ನೀಡುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಮಹಾಸಭಾದ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಸಮಾಜದ ಬಂಧುಗಳ ತಂಟೆ ತಕರಾರು, ಆಸ್ತಿ ಪಾಲು, ಯಾವುದೇ ವ್ಯಾಜ್ಯಗಳು ಅನಗತ್ಯವಾಗಿ ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲು ಏರದಂತೆ, ಸಮಾಜದ ಬಂಧುಗಳು ಅಲೆಯದಂತೆ, ಹಣ ಪೋಲು ಮಾಡದಂತೆ ಮುಖಂಡರು ಗಮನ ಹರಿಸಬೇಕು. ಸಮಸ್ಯೆ, ವ್ಯಾಜ್ಯಗಳನ್ನು ಮುಖಂಡರೇ ಆಲಿಸಿ, ಎರಡೂ ಕಡೆಯವರ ಮನವೊಲಿಸಿ ಪರಿಹರಿಸುವ ಪ್ರಯತ್ನ ಮಾಡಬೇಕು ಎಂದು ತಿಳಿ ಹೇಳಿದರು.
ಇದನ್ನೂ ಓದಿ: ಚಿತ್ರದುರ್ಗದಲ್ಲೂ ಬಾಂಗ್ಲಾ ವಲಸಿಗರ ಜಾಲ | ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು
ಈ ವೇಳೆ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ನುಲೇನೂರು ಪ್ರಭಾಕರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಪುರದ ಶಿವಕುಮಾರ್, ಮುಖಂಡರಾದ ಎ.ಸಿ.ಗಂಗಾಧರಪ್ಪ, ಚಂದ್ರಶೇಖರ, ಉಮೇಶ್, ಗುಂಡೇರಿ ಬಸವರಾಜ, ವಕೀಲರಾದ ಕೆ.ಈ.ಚಂದ್ರಶೇಕರ್, ಜಿ.ಈ.ರಂಗಸ್ವಾಮಿ, ಪ್ರಕಾಶ್ ಇತರರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number