ಹೊಳಲ್ಕೆರೆ
ISRO: ಇಸ್ರೋಗೆ ಭೇಟಿ ನೀಡಿದ ಹೊಳಲ್ಕೆರೆ ಸ್ನೇಹ ಪಬ್ಲಿಕ್ ಶಾಲೆ ಮಕ್ಕಳು
CHITRADURGA NEWS | 17 NOVEMBER 2024
ಹೊಳಲ್ಕೆರೆ: ತಾಲೂಕಿನ ಸ್ನೇಹ ಪಬ್ಲಿಕ್ ಶಾಲೆಯ 45 ಮಕ್ಕಳು ಹಾಗೂ ಶಾಲೆಯ ಸಿಬ್ಬಂದಿಗಳು ಬೆಂಗಳೂರಿನ ವಿಜ್ಞಾನ ಸಂಸ್ಥೆ ಇಸ್ರೋ(ISRO)ಗೆ ಭೇಟಿ ನೀಡಿದರು.
ಕ್ಲಿಕ್ ಮಾಡಿ ಓದಿ: ನಿರುದ್ಯೋಗಿಗಳಿಗೆ GOOD NEWS | ನ.21 ರಂದು ನೇರ ನೇಮಕಾತಿ ಸಂದರ್ಶನ
ಈ ವೇಳೆ ಸ್ನೇಹ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಜೆ ಎಸ್.ಮಂಜುನಾಥ್ ಮಾತನಾಡಿ, ಇಸ್ರೋ ಸಂಸ್ಥೆಯನ್ನು ಸ್ಥಾಪನೆ ಮಾಡಿದ ಯುವರ್ ರಾವ್ ನಮ್ಮ ಕರ್ನಾಟಕದಲ್ಲಿ ಸ್ಥಾಪನೆ ಮಾಡಿದ್ದು ನಮಗೆ ಹೆಮ್ಮೆಯ ತರುವ ವಿಷಯ. ನಮ್ಮ ಶಾಲೆಯ ಮಕ್ಕಳು ಇಸ್ರೋ ಸಂಸ್ಥೆಗೆ ಭೇಟಿ ನೀಡಿದ್ದು ಇಸ್ರೋ ಸಂಸ್ಥೆಗೆ ನಮ್ಮ ಶಾಲೆಯ ಪರವಾಗಿ ಕೃತಜ್ಞತೆಗಳು ತಿಳಿಸಿದರು.
ಶಿಕ್ಷಕ ವೇಣುಗೋಪಾಲ್ ಮಾತನಾಡಿ, ನಾವು ಇಸ್ರೋ ಸಂಸ್ಥೆಗೆ ಪ್ರವಾಸ ಬಂದಿದ್ದು ನಿಜಕ್ಕೂ ಹೆಮ್ಮೆಯ ವಿಚಾರ. ಬೇರೆ ಯಾರಿಗೂ ದೊರೆಯದ ಅವಕಾಶ ನಮಗೆ ದೊರೆತಿದೆ. ಇಸ್ರೋ ಇಲ್ಲಿಯವರೆಗೂ ಕೃತಕ ಉಪಗ್ರಹಗಳನ್ನು ತಯಾರಿಸಿರುವ ಬಗ್ಗೆ ತಿಳಿದು ನೋಡಿ ತುಂಬಾ ಖುಷಿ ಆಯ್ತು. ಭವಿಷ್ಯದಲ್ಲಿ ಮಾನವ ಸಹಿತ ಉಪಗ್ರಹಗಳನ್ನು ತಯಾರಿಸುತ್ತಿದ್ದದನ್ನು ಸಹಾ ನೋಡಿ ನಮಗೆ ಖಗೋಳ ವಿಜ್ಞಾನದ ಬಗ್ಗೆ ಆಸಕ್ತಿ, ಕುತೂಹಲ ಹೆಚ್ಚಾಯಿತು ಎಂದರು.
ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | 17 ನವೆಂಬರ್ 2024 | ನಿರುದ್ಯೋಗಿಗಳಿಗೆ ಉದ್ಯೋಗ, ವ್ಯಾಪಾರದಲ್ಲಿ ಲಾಭ, ಅನಾವಶ್ಯಕ ಖರ್ಚು
ನಿವೃತ್ತ ಶಿಕ್ಷಕರು ಸ್ವಾಮಿ ಮಾತನಾಡಿ, ಹೊಳಲ್ಕೆರೆಯ ಸ್ನೇಹಾ ಪಬ್ಲಿಕ್ ಸ್ಕೂಲ್ ಮಕ್ಕಳ ಜೊತೆ, ಇಸ್ರೋ ಸಂಸ್ಥೆಗೆ ಭೇಟಿ ನೀಡಿದ್ದು, ನನಗೆ ತುಂಬಾ ಸಂತಸ ತಂದಿತ್ತು. ಆ ಮಕ್ಕಳು ಇಸ್ರೋದಲ್ಲಿ ಇಲ್ಲಿಯವರೆಗೆ ನಡೆದ ಮತ್ತು ಭವಿಷ್ಯದಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು, ವಿಜ್ಞಾನಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಿಜಕ್ಕೂ ಶ್ಲಾಘನೀಯ ವಿಷಯ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಪ್ರವಾಸ ಅಗತ್ಯ ಎಂದರು.