ಮುಖ್ಯ ಸುದ್ದಿ
ಕೋಟೆನಾಡಲ್ಲಿ ತಡರಾತ್ರಿ ಅಬ್ಬರಿಸಿದ ಮಳೆ | ಕೊಚ್ಚಿ ಹೋದ ರಸ್ತೆ, ಕುಸಿದು ಬಿದ್ದ ಮನೆ
CHITRADURGA NEWS | 21 MAY 2024
ಚಿತ್ರದುರ್ಗ: ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಉತ್ತಮ ಮಳೆಯಾಗಿದ್ದು, ರೈತರು ಸಂತಸಗೊಂಡಿದ್ದಾರೆ. ಕೆರೆ, ಕಟ್ಟೆಗಳಿಗೆ ಜೀವಕಳೆ ಬಂದಿದೆ.
ಚಿಕ್ಕಜಾಜೂರಿನಲ್ಲಿ ಬಡಾವಣೆಗಳು ಜಲಾವೃತಗೊಂಡಿವೆ. ಇತ್ತ ಧರ್ಮಪುರ ಹೋಬಳಿಯಲ್ಲಿ ಧರ್ಮಪುರ- ಅರಳೀಕೆರೆ ಸಂಪರ್ಕ ರಸ್ತೆ ಕುಸಿದಿದ್ದು ಕಾರೊಂದು ಜಖಂಗೊಂಡಿದೆ. ಧರ್ಮಸ್ಥಳಕ್ಕೆ ಹೋಗಿ ತಡರಾತ್ರಿ ಅರಳೀಕೆರೆ ಪಾಳ್ಯಕ್ಕೆ ಬರುತ್ತಿದ್ದಾಗ ಕಾರು ಗುಂಡಿಯಲ್ಲಿ ಇಳಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕ್ಲಿಕ್ ಮಾಡಿ ಓದಿ: ತೆರೆದಿದೆ ಉದ್ಯೋಗಾವಕಾಶದ ಬಾಗಿಲು | 22ರಂದು ನೇರ ನೇಮಕಾತಿ ಸಂದರ್ಶನ
ಚಿತ್ರದುರ್ಗ ನಗರದ ರಸ್ತೆಗಳು ಜಲಾವೃತಗೊಂಡಿದ್ದವು. ಬ್ಯಾಂಕ್ ಕಾಲೊನಿ, ಮೇದೆಹಳ್ಳಿ, ಜೆಸಿಆರ್ ಅಂಡರ್‌ಪಾಸ್, ಚಳ್ಳಕೆರೆ ಟೋಲ್‌ಗೇಟ್‌ನಲ್ಲಿ ನೀರು ಹಳ್ಳದಂತೆ ಹರಿದ ಪರಿಣಾಮ ವಾಹನ ಸವಾರರು ಸಮಸ್ಯೆ ಅನುಭವಿಸಿದರು. ಜಿಲ್ಲಾ ಆರೋಗ್ಯ ಕುಟುಂಬ ಮತ್ತು ಕಲ್ಯಾಣ ಇಲಾಖೆ (ಡಿಎಚ್‌ಒ) ಕಚೇರಿ ಮುಂಭಾಗದ ಬೇವಿನ ಮರ ಉರುಳಿ ಬಿದ್ದಿದೆ.