ಮುಖ್ಯ ಸುದ್ದಿ
ರಾಜ್ಯ ಸರ್ಕಾರದ ವಿರುದ್ಧ ಲಿಂಗಾಯತ ಯುವ ಪಡೆಯಿಂದ ಪ್ರತಿಭಟನೆ | ಸರ್ಕಾರ ವಜಾಕ್ಕೆ ಆಗ್ರಹ
CHITRADURGA NEWS | 12 DECEMBER 2024
ಚಿತ್ರದುರ್ಗ: ಪ್ರತಿಭಟಿಸಿದವರ ಮೇಲೆ ಲಾಠಿ ಚಾರ್ಜ್ ಮಾಡಿಸಿರುವ ವೀರಶೈವ, ಲಿಂಗಾಯತ ವಿರೋಧಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಜಾ ಮಾಡಲು ಆಗ್ರಹಿಸಿ ಲಿಂಗಾಯತ ಯುವ ಪಡೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಕ್ಲಿಕ್ ಮಾಡಿ ಓದಿ: ಎಸ್.ನಿಜಲಿಂಗಪ್ಪ ಮನೆ ಖರೀದಿ ಮಾಡಿದ ಸರ್ಕಾರ | ದಶಕಗಳ ಗೊಂದಲಕ್ಕೆ ಇತಿಶ್ರೀ | ತಹಶೀಲ್ದಾರ್ ಹೆಸರಿಗೆ ನೊಂದಣಿ
ಪಂಚಮಸಾಲಿ ಸಮಾಜದ ಬಂಧುಗಳು ಪ್ರವರ್ಗ-2ಎ ಮೀಸಲಾತಿ ಬೇಡಿಕೆಗಾಗಿ ಶಾಂತಿಯುತವಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನದಲ್ಲಿ ಮನವಿ ಸಲ್ಲಿಸಲು ಆಗಮಿಸಿದ್ದರು. ನ್ಯಾಯಾಲಯದ ಆದೇಶದ ಅನುಮತಿ ಪಡೆದಿದ್ದರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಪ್ರತಿಭಟನಾನಿರತರ ಮೇಲೆ ದೌರ್ಜನ್ಯ ನಡೆಸಿದ್ದಾರೆ.
ಹೋರಾಟವನ್ನು ಹತ್ತಿಕ್ಕಲು ಲಾಠಿ ಚಾರ್ಜ್ ಮೂಲಕ ನೂರಾರು ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಕೈ ಕಾಲುಗಳನ್ನು ಮುರಿಯಲಾಗಿದೆ. ಮುರಿಯಲಾಗಿದೆ. ಜೊತೆಗೆ ಹೋರಾಟಗಾರರ ಮೇಲೆ ಮೊಕದ್ದಮೆ ದಾಖಲಿಸಿ ಬಂಧಿಸಲಾಗಿದೆ ಎಂದು ದೂರಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವೀರಶೈವ ಲಿಂಗಾಯುತ ಜನಾಂಗದ ಮೇಲೆ ಪದೇ ಪದೇ ದೌರ್ಜನ್ಯ ವೆಸಗುತ್ತಿದೆ. ಈ ಹಿಂದೆ ನಮ್ಮ ಸಮಾಜವನ್ನು ಹೊಡೆಯಲು ಪ್ರತ್ಯೇಕ ಲಿಂಗಾಯುತ ಧರ್ಮದ ಹೋರಾಟವನ್ನು ಅಧಿಕಾರದಾಹಕ್ಕಾಗಿ ಬಳಸಿಕೊಂಡಿದ್ದು ದುರಂತ.
ಕ್ಲಿಕ್ ಮಾಡಿ ಓದಿ: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಪ0ಚಮಸಾಲಿ ಮೀಸಲಾತಿ ಹೋರಾಟವನ್ನು ಹತ್ತಿಕ್ಕುವ ಮತ್ತು ಮುಖಂಡರ ಮೇಲೆ ದೌರ್ಜನ್ಯ ಮಾಡಿರುವ ಸಂವಿಧಾನ ವಿರೋಧಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಈ ಕೂಡಲೆ ವಜಾ ಮಾಡಬೇಕೆಂದು ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಜೀತೇಂದ್ರ ಹುಲಿಕುಂಟೆ, ಪಿ.ರುದ್ರೇಶ್ ವಿ.ಹೆಚ್.ಪಿ, ತಿಪ್ಪೇಶ್ ಗಾರೇಹಟ್ಟಿ, ಮಂಜುನಾಥ್, ವೀರೇಶ್, ಸಂಜಯ್ ಜಾಲಿಕಟ್ಟೆ, ಗುರುರಾಜ್, ಅಭಿಲಾಶ್, ದೀಲಿಪ್, ಮಲ್ಲಿಕಾರ್ಜುನ್ ಮತ್ತಿತರರಿದ್ದರು.