Training: ನಿರುದ್ಯೋಗಿಗಳಿಗೆ ಶುಭ ಸುದ್ದಿ | ಕಂಪ್ಯೂಟರ್ ರಿಪೇರಿ, ಕುರಿ ಸಾಕಾಣಿಕೆ, ಮಶ್ರೂಮ್ ಕೃಷಿ, ಇನ್ನಿತರೆ ತರಬೇತಿಗೆ ಅರ್ಜಿ ಆಹ್ವಾನ

apply now

CHITRADURGA NEWS | 11 DECEMBER 2024

ಚಿತ್ರದುರ್ಗ: ಚಿತ್ರದುರ್ಗದ ರುಡ್‌ಸೆಟ್ ಸಂಸ್ಥೆಯಿಂದ ಗ್ರಾಮೀಣ ಭಾಗದ ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ಮಾಡಲು ತರಬೇತಿ ನೀಡಲಿದ್ದು, ತರಬೇತಿಗೆ ಅರ್ಜಿ ಆಹ್ವಾನಿಸಿದೆ.

ಕ್ಲಿಕ್ ಮಾಡಿ ಓದಿ: ಡಿ.25ಕ್ಕೆ ಹೊಳಲ್ಕೆರೆಗೆ ವೀರೇಂದ್ರ ಹೆಗ್ಗಡೆ ಭೇಟಿ | ನೂತನ ಕಟ್ಟಡ ವಿಕಾಸ ಸೌಧ ಉದ್ಘಾಟನೆ

ಸ್ವ-ಉದ್ಯೋಗ ತರಬೇತಿಗಳು:

ಕಂಪ್ಯೂಟರ್ ಹಾರ್ಡ್ವೇರ್ ಮತ್ತು ನೆಟ್‌ವರ್ಕಿಂಗ್-45 ದಿನ, ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ 10 ದಿನ, ಕುರಿ ಸಾಕಾಣಿಕೆ 10 ದಿನ, ಫಾಸ್ಟ್ ಫುಡ್ ಸ್ಟಾಲ್ ಉದ್ಯಮ 10 ದಿನ, ಹಪ್ಪಳ, ಉಪ್ಪಿನಕಾಯಿ, ಮಸಾಲೆ ಪದಾರ್ಥಗಳ ತಯಾರಿಕೆ 10 ದಿನ, ಅಣಭೆ(ಮಶ್ರೂಮ್) ಬೇಸಾಯ 10 ದಿನ, ಗೊಂಬೆ ತಯಾರಿಕೆ 13 ದಿನ, ಕಂಪ್ಯೂಟರೈಸ್ಡ್ ಅಕೌಂಟಿಂಗ್ 30 ದಿನ, ಜೂಟ್ ಬ್ಯಾಗ್ ತಯಾರಿಕೆ 13 ದಿನ ಮೋಟಾರ್ ರಿವೈಂಡಿಂಗ್ ಮತ್ತು ಪಂಪ್‌ಸೆಟ್ ರಿಪೇರಿ 30 ದಿನ ತರಬೇತಿ ನೀಡಲಿದ್ದಾರೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಅರ್ಹತೆ :

19 ರಿಂದ 45 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು. ಕನ್ನಡ ಓದಲು ಬರೆಯಲು ಬರಬೇಕು, ತರಬೇತಿಗೆ ಸಂಬಂಧಿಸಿದಂತೆ ಪ್ರಾಥಮಿಕ ಜ್ಞಾನ ಹೊಂದಿರಬೇಕು. ಈ ತರಬೇತಿಗೆ ಸಂಬಂದಪಟ್ಟ ಕೌಶಲ್ಯ ಕುರಿತು ಪ್ರಾರ್ಥಮಿಕ ಜ್ಞಾನ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ತರಬೇತಿಗೆ ಬರುವ ಅಭ್ಯರ್ಥಿಗಳಗೆ ಊಟ ಮತ್ತು ವಸತಿ ಉಚಿತವಾಗಿರುತ್ತದೆ.

ಕ್ಲಿಕ್ ಮಾಡಿ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ ರೇಟ್

ಆಸಕ್ತ ಅಭ್ಯರ್ಥಿಗಳು ತಮ್ಮ ಮೊಬೈಲ್ ನಂಬರ್‌ವುಳ್ಳ ಸ್ವ-ವಿಳಾಸದ ಅರ್ಜಿಯೊಂದಿಗೆ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಪ್ರತಿಗಳೊಂದಿಗೆ ಡಿ.30ರ ರೊಳಗಾಗಿ ರುಡ್‌ಸೆಟ್ ಸಂಸ್ಥೆಯಲ್ಲಿ ನೇರವಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ 8618282445,9481778047, 9019299901, 8660627785 ಗೆ ಸಂಪರ್ಕಿಸಬಹುದು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

Share This Article
Leave a Comment

Leave a Reply

Your email address will not be published. Required fields are marked *

Exit mobile version