ಮುಖ್ಯ ಸುದ್ದಿ
Fengal: ಕಡಲೆ ಬೆಳೆಗಾರರಿಗೆ ಆತಂಕ ಸೃಷ್ಟಿಸಿದ ಮಳೆರಾಯ
CHITRADURGA NEWS | 04 DECEMBER 2024
ಚಿತ್ರದುರ್ಗ: ಫೆಂಗಾಲ್ (Fengal) ಚಂಡಮಾರುತ ಸೃಷ್ಟಿಸಿದ ಅಕಾಲಿಕೆ ಮಳೆಯಿಂದಾಗಿ ಚಿತ್ರದುರ್ಗ ಜಿಲ್ಲೆಯ ಕಡಲೆ ಬೆಳೆಗಾರ ರೈತರು ಆತಂಕಕ್ಕೀಡಾಗಿದ್ದಾರೆ.
ತೋಟಗಾರಿಕೆ ಬೆಳೆಗಾರರು ಮಳೆಯಿಂದ ಸಂತಸಗೊಂಡಿದ್ದಾರೆ. ಮೆಕ್ಕೆಜೋಳ ಮತ್ತಿತರೆ ಬೆಳೆ ಬೆಳೆದಿದ್ದ ರೈತರು ಬಹುತೇಕ ಕಟಾವು ಮುಗಿಸಿದ್ದು, ಮಳೆಯ ಬಗ್ಗೆ ಹೆಚ್ಚೇನು ತಲೆಕೆಡಿಸಿಕೊಂಡಿಲ್ಲ.
ಇದನ್ನೂ ಓದಿ: ಚನ್ನಗಿರಿ ಮಾರುಕಟ್ಟೆಯಲ್ಲಿ ಸ್ಥಿರವಾದ ರಾಶಿ ಅಡಿಕೆ ಬೆಲೆ
ಆದರೆ, ಕಳೆದೆರಡು ತಿಂಗಳಿಂದ ಜಿಲ್ಲೆಯ ಕಪ್ಪು ಮಣ್ಣು ಹೊಂದಿರುವ ರೈತರು ಕಡಲೆ ಬಿತ್ತನೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಸಾಂಪ್ರದಾಯಿಕ ಕಡಲೆ ಬೆಳೆಗಾರರಿದ್ದಾರೆ.
ಈ ರೈತರು ಮಳೆಯ ಬಗ್ಗೆ ತುಸು ಆತಂಕಗೊಂಡಿದ್ದಾರೆ. ಕಡಲೆ ಬಿತ್ತನೆಯಾಗಿ ಒಂದು, ಒಂದೂವರೆ ತಿಂಗಳಾಗಿರುವ ರೈತರಿಗೆ ಮಳೆ ಬೇಕು ಅನ್ನಿಸಿದರೆ, ಹೂವು ಕಾಣಿಸಿಕೊಂಡಿರುವ ಕಡಲೆ ಬೆಳೆಗಾರರು ಎಲ್ಲಿ ಹೂವು ಉದುರಿ ಹೋಗುತ್ತದೊ ಎನ್ನುವ ಚಿಂತೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ರೈತ ಉತ್ಪಾದಕ ಸಂಸ್ಥೆಗಳಿಂದ ಮೈಸೂರು ಕಿಸಾನ್ ಮಾಲ್ ಸ್ಥಾಪನೆ | ಅರ್ಜಿ ಸಲ್ಲಿಸಲು ಡಿ.16 ರವರೆಗೆ ವಿಸ್ತರಣೆ
ಕಡಲೆಯ ಹುಳಿ ಹೋದರೆ ಹುಳುವಿನ ಆತಂಕ:
ಕಡಲೆ ಕಾಯಿಗಟ್ಟುವಾಗ ಸಾಕಷ್ಟು ಹುಳಿಯ ಅಂಶವಿರುತ್ತದೆ. ಬೆಳೆಯ ಒಳಗೆ ಓಡಾಡಿದರೂ ತುರಿಕೆ ಬರುತ್ತದೆ. ಹಸಿ ಕಾಯಿ ಮುಟ್ಟಿ ರುಚಿ ನೋಡಿದರೆ ಹುಳಿಯಿರುತ್ತದೆ. ಹೀಗಿರುವುದೇ ಕಡಲೆಯ ಆರೋಗ್ಯದ ಗುಟ್ಟು. ಆದರೆ, ಮಳೆ ಹೆಚ್ಚಾದರೆ ಈ ಹುಳಿ ಅಂಶ ಹೋಗುತ್ತದೆ. ಆಗ ಕಡಲೆ ಬೆಳೆ ಕೆಟ್ಟು ಹೋಗುವ ಸಾಧ್ಯತೆ ಹೆಚ್ಚು ಎಂದು ರೈತರು ಅಂದಾಜಿಸುತ್ತಿದ್ದಾರೆ.