ಮುಖ್ಯ ಸುದ್ದಿ
Horticulture: ರೈತ ಉತ್ಪಾದಕ ಸಂಸ್ಥೆಗಳಿಂದ ಮೈಸೂರು ಕಿಸಾನ್ ಮಾಲ್ ಸ್ಥಾಪನೆ | ಅರ್ಜಿ ಸಲ್ಲಿಸಲು ಡಿ.16 ರವರೆಗೆ ವಿಸ್ತರಣೆ
CHITRADURGA NEWS | 02 DECEMBER 2024
ಚಿತ್ರದುರ್ಗ: ರಾಜ್ಯ ಸರ್ಕಾರ ಬಜೆಟ್‍ನಲ್ಲಿ ಪ್ರಸ್ತಾಪಿಸಿದಂತೆ, 2024-25ನೇ ಸಾಲಿನಲ್ಲಿ ಸಮಗ್ರ ತೋಟಗಾರಿಕೆ(Horticulture) ಅಭಿವೃದ್ಧಿ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮೈಸೂರು ಕಿಸಾನ್ ಮಾಲ್ ಸ್ಥಾಪಿಸಲು ಅರ್ಹ ರೈತ ಉತ್ಪಾದಕ ಸಂಸ್ಥೆಗಳಿಂದ ಆಸಕ್ತಿ ಅಭಿವ್ಯಕ್ತಪಡಿಸುವಿಕೆಯನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಡಿ.16 ರವರೆಗೆ ವಿಸ್ತರಿಸಲಾಗಿದೆ.
ಕ್ಲಿಕ್ ಮಾಡಿ ಓದಿ: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಮೆಕ್ಕೆಜೋಳ, ಶೇಂಗಾ, ತೊಗರಿಬೆಳೆ ರೇಟ್ ಎಷ್ಟಿದೆ?
ಕರ್ನಾಟಕ ಪಬ್ಲಿಕ್ ಪ್ರೊಕ್ಯುರ್‍ಮೆಂಟ್ ಪೋರ್ಟ್‍ಲ್‍ನಲ್ಲಿ ಆಸಕ್ತ ರೈತರ ಉತ್ಪಾದಕ ಸಂಘಗಳು ಡಿ.16 ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9449103240 ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: ಕುರಿ, ಮೇಕೆ ಪೂರೈಕೆ ಯೋಜನೆ | ಪರಿಶಿಷ್ಟ ಪಂಗಡದ ಸದಸ್ಯರಿಂದ ಅರ್ಜಿ ಆಹ್ವಾನ