Connect with us

ವಿವಿ ಸಾಗರಕ್ಕೆ ನೀರಿನ ಹರಿವಿನ ಪ್ರಮಾಣ ಹೆಚ್ಚಳ | ಇಂದು ಜಲಾಶಯಕ್ಕೆ ಬಂದ ನೀರೆಷ್ಟು ಗೊತ್ತಾ

ವಾಣಿವಿಲಾಸ ಸಾಗರ ಜಲಾಶಯ

ಮುಖ್ಯ ಸುದ್ದಿ

ವಿವಿ ಸಾಗರಕ್ಕೆ ನೀರಿನ ಹರಿವಿನ ಪ್ರಮಾಣ ಹೆಚ್ಚಳ | ಇಂದು ಜಲಾಶಯಕ್ಕೆ ಬಂದ ನೀರೆಷ್ಟು ಗೊತ್ತಾ

CHITRADURGA NEWS | 21 MAY 2024

ಚಿತ್ರದುರ್ಗ: ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಯ ಪ್ರಮುಖ ಜಲಾಶಯ ವಾಣಿವಿಲಾಸ ಸಾಗರಕ್ಕೆ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ.

ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ಸುರಿದಿದ್ದು, ಪೂರ್ವ ಮುಂಗಾರಿನಲ್ಲೇ ವಿವಿ ಸಾಗರಕ್ಕೆ ನೀರು ಹರಿಯುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

ಇದನ್ನೂ ಓದಿ: ವಿವಿಸಾಗರ ತಲುಪಿದ ವೇದಾವತಿ | ಒಂದೇ ದಿನಕ್ಕೆ ಡ್ಯಾಂ ಸೇರಿದ ನೀರೆಷ್ಟು ಗೊತ್ತಾ

ವಿವಿ ಸಾಗರಕ್ಕೆ ನೀರು ಮೇ.20 ರಿಂದ ಹರಿಯಲು ಆರಂಭಿಸಿದೆ. ಮೇ.20 ರಂದು 3800 ಕ್ಯೂಸೆಕ್ ನೀರು ಹರಿದಿತ್ತು. ಇಂದು ಎರಡನೇ ದಿನದ ಮಾಪನ ಚಿತ್ರದುರ್ಗ ನ್ಯೂಸ್‍ಗೆ ಲಭ್ಯವಾಗಿದ್ದು, ಮೇ.21 ರಂದು ಬೆಳಗ್ಗೆ 8 ಗಂಟೆಗೆ ವಿವಿ ಸಾಗರಕ್ಕೆ ಒಳಹರಿವಿನ ಪ್ರಮಾಣ 5100 ಕ್ಯೂಸೆಕ್ ಆಗಿದೆ.

ಹೊರ ಹರಿವು ನಿಂತಿದ್ದು, ಜಲಾಶಯಕ್ಕೆ ಹೊಸದುರ್ಗ, ಚಿಕ್ಕಮಗಳೂರು ಭಾಗದಿಂದ ವೇದಾವತಿ ಮೂಲಕ ನೀರು ಹರಿದು ಬರುತ್ತಿದೆ.

ಇದನ್ನೂ ಓದಿ: ಜಿಲ್ಲೆಯಾದ್ಯಂತ‌ ಉತ್ತಮ ಮಳೆ | ಮನೆಗಳಿಗೆ ಹಾನಿ

30 ಟಿಎಂಸಿ ಸಾಮಥ್ರ್ಯದ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಸದ್ಯ 17.44 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಸದ್ಯ 112.70 ಅಡಿ ನೀರು ಸಂಗ್ರಹವಾಗಿದೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version