CHITRADURGA NEWS | 30 JUNE 2024
ಚಿತ್ರದುರ್ಗ: ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಅವರ 50ನೇ ಜನ್ಮ ದಿನಾಚರಣೆಯನ್ನು ಅವರ ಅಭಿಮಾನಿಗಳು, ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಚಿತ್ರದುರ್ಗ ಹಾಗೂ ಚಳ್ಳಕೆರೆಯಲ್ಲಿ ಅದ್ದೂರಿಯಾಗಿ ಆಚರಿಸಿದರು.
ಕಳೆದ ಹತ್ತು ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಕೆ.ಸಿ.ವೀರೇಂದ್ರ(ಪಪ್ಪಿ) ಜನ್ಮ ದಿನಾಚರಣೆಯ ಕೌಂಟ್ ಡೌನ್ ಪೋಸ್ಟರ್‍ಗಳು ರಾರಾಜಿಸುತ್ತಿದ್ದವು.
ಇದನ್ನೂ ಓದಿ: ಬಯಲು ಸೀಮೆಯ ಊಟಿ | ಸ್ವರ್ಗವ ನಾಚಿಸುವ ಜೋಗಿಮಟ್ಟಿ ಬಗ್ಗೆ ನಿಮಗೆಷ್ಟು ಗೊತ್ತು..!
ಜೂ.30 ಭಾನುವಾರ ಪಪ್ಪಿ ಜನ್ಮ ದಿನಾಚರಣೆ ಅಂಗವಾಗಿ ಅವರ ಅಭಿಮಾನಿಗಳು ಹಲವೆಡೆ ಕೇಕ್ ಕಟ್ ಮಾಡಿ, ಪಟಾಕಿ ಸಿಡಿಸಿ ಜನ್ಮ ದಿನಾಚರಣೆ ಆಚರಿಸಿದ್ದಾರೆ.
ಬರ್ತ್ ಡೇ ಹಿನ್ನೆಲೆಯಲ್ಲಿ ವೀರೇಂದ್ರ(ಪಪ್ಪಿ) ಅವರ ಚಳ್ಳಕೆರೆ ನಿವಾಸದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಮನೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ನೂರಾರು ಬೆಂಬಲಿಗರು ಮನೆಯ ಬಳಿಗೆ ಕೇಕ್ ತೆಗೆದುಕೊಂಡು ಹೋಗಿ ಕಟ್ ಮಾಡಿಸಿ ಸಂಭ್ರಮಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ಕರ್ನಾಟಕದ ರೋಹಿತ್ ಶರ್ಮಾ, ವಿರಾಟ್ ಕೋಹ್ಲಿ ಇದ್ದಂತೆ..
ಭಾನುವಾರ ಬೆಳಗ್ಗೆ ವೀರೇಂದ್ರ ಪಪ್ಪಿ ಅವರು ಚಿತ್ರದುರ್ಗಕ್ಕೆ ಬರುವ ಮಾರ್ಗದಲ್ಲಿ ಮದಕರಿಪುರದಲ್ಲಿ ಅವರ ಬೆಂಬಲಿಗರು ಶಾಲು, ಹಾರ ಹಾಕಿ ಸನ್ಮಾನಿಸಿ ಕೇಕ್ ತಿನ್ನಿಸಿದರು. ಕ್ಯಾದಿಗೆರೆಯಲ್ಲಿ ನಡೆಯುತ್ತಿದ್ದ ಎನ್‍ಎಸ್‍ಎಸ್ ಶಿಬಿರದ ಬಳಿಯೂ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಶಾಸಕರ ಜನ್ಮ ದಿನಾಚರಣೆ ಆಚರಿಸಿದರು.
ಚಿತ್ರದುರ್ಗದ ಕಾಂಗ್ರೆಸ್ ಕಚೇರಿಯಲ್ಲಿ ಬೆಳಗ್ಗೆಯೇ ಶಾಸಕರ ಜನ್ಮ ದಿನಾಚರಣೆ ಆಚರಿಸಿದ ನಂತರ, ಮದಕರಿ ನಾಯಕರ ಪ್ರತಿಮೆ ಬಳಿ ಇರುವ ಮೆಜೆಸ್ಟಿಕ್ ವೃತ್ತದ ಬಳಿ ಮಧ್ಯಾಹ್ನ ಅದ್ದೂರಿ ಸೆಲೆಬ್ರೇಷನ್ ನಡೆಯಿತು.
ಇದನ್ನೂ ಓದಿ: ಬಜರಂಗದಳ ಕಾರ್ಯಕರ್ತರಿಂದ ಸೇವಾ ಸಪ್ತಾಹ | ಉಚಿತ ಆರೋಗ್ಯ ತಪಾಸಣೆ
ನಗರದ ವಿವಿಧೆಡೆ ಶಾಸಕರ ಅಭಿಮಾನಿಗಳು, ಬೆಂಬಲಿಗರು, ಕಾಂಗ್ರೆಸ್ ಮುಖಂಡರು ಫ್ಲೆಕ್ಸ್ ಹಾಕಿ ಶುಭ ಕೋರಿದ ದೃಶ್ಯಗಳು ಕಂಡು ಬಂದವು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
