ಲೋಕಸಮರ 2024
ಯರೇಹಳ್ಳಿಯಲ್ಲಿ ಮರು ಮತದಾನಕ್ಕೆ ಕರುನಾಡ ವಿಜಯಸೇನೆ ಆಗ್ರಹ
CHITRADURGA NEWS | 28 APRIL 2024
ಚಿತ್ರದುರ್ಗ: ಯರೇಹಳ್ಳಿ ಗ್ರಾಮಸ್ಥರು ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಿರುವುದರಿಂದ ಮರು ಮತದಾನ ನಡೆಸುವಂತೆ ಕರುನಾಡ ವಿಜಯ ಸೇನೆ ಶನಿವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಸೊರಬ ಮಾರುಕಟ್ಟೆಯಲ್ಲಿ 54 ಸಾವಿರ ದಾಟಿದ ಅಡಿಕೆ ರೇಟ್
ವಿದ್ಯುತ್ ಇಲ್ಲದೆ ರಾತ್ರಿ ಕತ್ತಲೆಯಲ್ಲಿ ಕಾಲ ಕಳೆಯುತ್ತಿರುವ ಯರೇಹಳ್ಳಿಯಲ್ಲಿ ರೈತರಿಗೆ ಕೃಷಿ ವಿದ್ಯುತ್ ತೊಂದರೆಯಾಗಿದೆ, ಮೊಬೈಲ್ ನೆಟ್ವರ್ಕ್ ಇಲ್ಲದ ಕಾರಣ ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಪೊಲೀಸರಿಗೆ ಕರೆ ಮಾಡಲು ಆಗುತ್ತಿಲ್ಲ, ಗುಡ್ಡದ ತುತ್ತ ತುದಿಗೇರಿ ಮೊಬೈಲ್ ನಲ್ಲಿ ಮಾತನಾಡಬೇಕು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾಗಿದ್ದರು ಇನ್ನು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಸ್ಥರು ಮತದಾನ ಬಹಿಷ್ಕರಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಜನರ ಜೊತೆ ಚಹಾ ಕುಡಿದು, ಹರಟೆ ಹೊಡೆದ ಗೋವಿಂದ ಕಾರಜೋಳ
180 ಕ್ಕೆ ಹೆಚ್ಚು ಮನೆಗಳುಳ್ಳ ಈ ಗ್ರಾಮದಲ್ಲಿ 557 ಮತದಾರರಿದ್ದು, ಕೇವಲ 27 ಜನ ಮಾತ್ರ ಮತದಾನ ಮಾಡಿದ್ದಾರೆ, ಒಂದು ವಾರದೊಳಗಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿದಿದ್ದರೆ, ಯರೇಹಳ್ಳಿ ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಲಾಗುವುದೆಂದು ಎಂದು ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಎಚ್ಚರಿಸಿದರು.
ಇದನ್ನೂ ಓದಿ : 29 ರಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ | 9 ಕೇಂದ್ರಗಳಲ್ಲಿ ಸಜ್ಜು
ಪ್ರತಿಭಟನೆಯಲ್ಲಿ ಕರುನಾಡ ವಿಜಯ ಸೇನೆ ಯುವ ಘಟಕದ ಅಧ್ಯಕ್ಷ ನಾಗರಾಜ್ ಮುತ್ತು, ಕಾರ್ಯದರ್ಶಿ ಅಣ್ಣಪ್ಪ, ವಿದ್ಯಾರ್ಥಿ ಘಟಕದ ಅಖಿಲೇಶ್, ಸಂಚಾಲಕ ಪಿ. ಆರ್. ಹರೀಶ್ ಕುಮಾರ್, ರಾಜ್ಯ ಸಮಿತಿಯ ನಿಸಾರ್ ಅಹ್ಮದ್ ಇದ್ದರು.