Connect with us

ಹೊಸಪೇಟೆಗೆ ಪ್ರಧಾನಿ ನರೇಂದ್ರ ಮೋದಿ | ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭದ್ರತೆ

ಲೋಕಸಮರ 2024

ಹೊಸಪೇಟೆಗೆ ಪ್ರಧಾನಿ ನರೇಂದ್ರ ಮೋದಿ | ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭದ್ರತೆ

CHITRADURGA NEWS | 28 APRIL 2024
ಚಿತ್ರದುರ್ಗ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಒಂದೇ ದಿನ ನಾಲ್ಕು ಕಡೆ ‘ವಿಕಸಿತ ಭಾರತ ವಿಜಯ ಸಂಕಲ್ಪ ಸಮಾವೇಶ’ವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈಗಾಗಲೇ ಬೆಳಗಾವಿಯಲ್ಲಿ ನಡೆಯುವ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ ಶಿರಸಿಗೆ ಪ್ರಯಾಣ ಬೆಳೆಸಿದ್ದಾರೆ. ಮಧ್ಯಾಹ್ನ 3ಕ್ಕೆ ದಾವಣಗೆರೆಗೆ ಆಗಮಿಸಲಿದ್ದಾರೆ. ಬಳಿಕ 4ಗಂಟೆಗೆ ಹೊಸಪೇಟೆಗೆ ಪ್ರಯಾಣ ಬೆಳೆಸಲಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಹಾವೇರಿ ಜಿಲ್ಲೆಗಳಿಂದ ಪೊಲೀಸರನ್ನು ನಿಯೋಜಿಸಲಾಗಿದೆ.

ದಾವಣಗೆರೆಯಿಂದ ಹೊಸಪೇಟೆಗೆ ಪ್ರಧಾನಿ ಮೋದಿ ತೆರಳುವ ಕಾರಣ ಚಿತ್ರದುರ್ಗದಲ್ಲಿ ಹಾದು ಹೋಗುವ ಎರಡು ಹೆದ್ದಾರಿಗಳಲ್ಲಿ ಮುಂಜಾಗ್ರತ ಕ್ರಮವಾಗಿ ಭದ್ರತೆ ಕಲ್ಪಿಸಲಾಗಿದೆ. ದಾವಣಗೆರೆಯಿಂದ ಹೊಸಪೇಟೆವರೆಗೂ ಪೊಲೀಸರು ಬೀಡು ಬಿಟ್ಟಿದ್ದಾರೆ.

ಕ್ಲಿಕ್ ಮಾಡಿ ಓದಿ: ಮುರುಘಾಮಠದಲ್ಲಿ ಸಮಾಲೋಚನಾ ಸಭೆ | ಸೂಕ್ತ ಸಲಹೆ–ಸೂಚನೆಗೆ ಮನವಿ

ದಾವಣಗೆರೆಯಲ್ಲಿ ಸಮಾವೇಶ ಮುಗಿದ ಕೂಡಲೇ ಭದ್ರತೆಯಲ್ಲಿ ಹೆಲಿಕಾಪ್ಟರ್‌ನಲ್ಲಿ ಹೊಸಪೇಟೆಗೆ ಪ್ರಯಾಣ ಬೆಳೆಸಲಿದ್ದಾರೆ. ಕೊನೆ ಕ್ಷಣದಲ್ಲಿ ಏನಾದರೂ ಬದಲಾವಣೆಗೊಂಡು ರಸ್ತೆ ಮಾರ್ಗದಲ್ಲಿ ಪ್ರಯಾಣ ನಿಗಧಿಯಾಗದರೆ ಸಮಸ್ಯೆಯಾಗದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಹೊಸಪೇಟೆಯ ಭಟ್ರಹಳ್ಳಿ ಆಂಜನೇಯ ದೇವಸ್ಥಾನ ಸಮೀಪದ ಹೆಲಿಪ್ಯಾಡ್‌ಗೆ ಸಂಜೆ 6 ಗಂಟೆಗೆ ಬಂದಿಳಿಯಲಿದ್ದಾರೆ. ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಅಳವಡಿಸಲಾಗಿರುವ ಬೃಹತ್ ವೇದಿಕೆಯಲ್ಲಿ ಮಾತನಾಡಲಿದ್ದಾರೆ. ಪ್ರಧಾನಿ ಅವರು ಭಾನುವಾರ ರಾತ್ರಿ ತಂಗಲಿರುವ ರಾಯಲ್ ಆರ್ಕಿಡ್ ಹೋಟೆಲ್‌ನ ಸುತ್ತಮುತ್ತ ಸಹ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ.

ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, 200 ಸಿ.ಸಿ.ಟಿ.ವಿ.ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಭಾನುವಾರದ ಕಾರ್ಯಕ್ರಮದ ಸಲುವಾಗಿ 1,200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಗರಕ್ಕೆ ಬಳ್ಳಾರಿ, ಕೊಪ್ಪಳ, ರಾಯಚೂರುಗಳಿಂದ ನಾಲ್ವರು ಎಸ್‌ಪಿ, ನಾಲ್ವರು ಎಎಸ್‌ಪಿ, 17 ಡಿವೈಎಸ್‌ಪಿ, 37 ಸಿಪಿಐ, 73 ಪಿಎಸ್‌ಐ, 113 ಎಎಸ್‌ಐ, 1,100 ಎಚ್‌ಸಿ/ಪಿಸಿ, 500 ಗೃಹರಕ್ಷಕ ದಳ ಸಿಬ್ಬಂದಿ, 8 ಎಎಸ್‌ಸಿ ತಂಡ, 4 ಕೆಎಸ್ಆರ್‌ಪಿ, 8 ಡಿಎಆರ್‌ ತುಕಡಿಗಳು ಒಳಗೊಂಡು ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ ಎಂದು ಎಸ್‌ಪಿ ಶ್ರೀಹರಿಬಾಬು ಬಿ.ಎಲ್‌.ತಿಳಿಸಿದ್ದಾರೆ.

ಕ್ಲಿಕ್ ಮಾಡಿ ಓದಿ: ಈ ವರ್ಷ ಬಹಳ ಬಿಸಿಲು ಸ್ವಾಮೀಜಿ | ಕರುನಾಡ ಚಕ್ರವರ್ತಿ ಡಾ.ಶಿವರಾಜ್‌ ಕುಮಾರ್‌

ಎಸ್‌ಪಿಜಿ ತಂಡದವರು ಈಗಾಗಲೇ ಹಲವು ಸುತ್ತಿನ ಭದ್ರತಾ ಏರ್ಪಾಡುಗಳನ್ನು ಪರಿಶೀಲಿಸಿದ್ದಾರೆ. ಬಾಂಬ್‌ ಶೋಧನಾ ದಳ, ಶ್ವಾನದಳಗಳು ನಿರಂತರ ಪಹರೆ ನಡೆಸುತ್ತಿವೆ. ಪ್ರಧಾನಿ ಅವರು ಬಂದು ಹೋಗುವ ಹೆಲಿಪ್ಯಾಡ್‌ ಸಮೀಪದಲ್ಲಿ ರೈಲು ನಿಲ್ದಾಣ ಇದ್ದು, ಲ್ಯಾಂಡಿಂಗ್, ಟೇಕಾಫ್ ಸಮಯದಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಭಾನುವಾರ ಸಂಜೆ ಪ್ರಧಾನಿ ಆಗಮನದ ವೇಳೆ ಸುಮಾರು 45 ನಿಮಿಷ ಹಾಗೂ ಸೋಮವಾರ ಪ್ರಧಾನಿ ನಿರ್ಗಮಿಸಲಿರುವ 10.30ರಿಂದ 11.15ರವರೆಗೆ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ.

ಪ್ರಧಾನಿ ಅವರ ಭದ್ರತೆಯ ದೃಷ್ಟಿಯಿಂದ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ರೈಲ್ವೆ ನಿಲ್ದಾಣ ರಸ್ತೆ, ಪುನೀತ್ ರಾಜ್‌ಕುಮಾರ್ ಸರ್ಕಲ್‌, ಕಾಲೇಜ್ ರಸ್ತೆ, ಸಾಯಿಬಾಬಾ ಸರ್ಕಲ್‌ ಮೂಲಕ ಓಡಾಡುವ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಸಾಯಿಬಾಬಾ ಸರ್ಕಲ್‌, ಎಪಿಎಂಸಿ, ವಾಲ್ಮೀಕಿ ಸರ್ಕಲ್‌ ಮೂಲಕ ಸಂಚರಿಸಲು ಸೂಚಿಸಲಾಗಿದೆ.

ಮರಿಯಮ್ಮನಹಳ್ಳಿ ಕಡೆಯಿಂದ ಸಮಾವೇಶಕ್ಕೆ ಜನರನ್ನು ಕರೆತರುವ ವಾಹನಗಳು ಬಸವೇಶ್ವರ ವೃತ್ತದಲ್ಲಿ ಜನರನ್ನು ಇಳಿಸಿ ನ್ಯಾಷನಲ್‌ ಕಾಲೇಜು ಮೈದಾನ, ಗುರು ಕಾಲೇಜು ಎದುರು ಗಡೆಯ ಖಾಲಿ ಜಾಗ, ಪಿಡಿಐಟಿ ಕಾಲೇಜು ಮೈದಾನ, ಭವರ್‌ಲಾಲ್ ಲೇಔಟ್‌, ಸಿದ್ಧಾರ್ಥೆ ಎನ್‌ಕ್ಲೇವ್‌ ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಬೇಕು.

ಕೊಪ್ಪಳ ಕಡೆಯ ವಾಹನಗಳು ಸಾಯಿಬಾಬಾ ವೃತ್ತದಲ್ಲಿ ಜನರನ್ನು ಇಳಿಸಿ ಟಿ.ಬಿ.ಡ್ಯಾಂ ಪಾರ್ಕಿಂಗ್, ಜೂನಿಯರ್ ಕಾಲೇಜಜು ಮೈದಾನ ಮತ್ತು ಡಿಎಆರ್ ಮೈದಾನದಲ್ಲಿ ನಿಲುಗಡೆ ಮಾಡಬೇಕು. ಸಂಡೂರು ಕಡೆಯ ವಾಹನಗಳು ಮಾರ್ಕಂಡೇಶ್ವರ ವೃತ್ತದಲ್ಲಿ ಜನರನ್ನು ಇಳಿಸಿ ಎಲ್‌ಎಫ್‌ಎಸ್‌ ಶಾಲೆ, ವಾಲ್ಮೀಕಿ ಶಾಲೆ, ದೀಪಾಯನ ಶಾಲೆ ಮೈದಾನಗಳಲ್ಲಿ ನಿಲುಗಡೆ ಮಾಡಬೇಕು.

ಕ್ಲಿಕ್ ಮಾಡಿ ಓದಿ: ಏಕನಾಥೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ | ಮೇಲುದುರ್ಗದಲ್ಲಿ ಭಂಡಾರ ಪೂಜೆ

ಬಳ್ಳಾರಿ ಕಡೆಯ ವಾಹನಗಳು ಗಾಂಧಿ ಚೌಕ ಬಳಿ ಜನರನ್ನು ಇಳಿಸಿ ತ್ರಿಶಾಪ್‌, ಎಸ್‌.ಎಲ್‌.ಚೌಕಿ, ಬಳ್ಳಾರಿ ರೋಡ್‌ ಸರ್ಕಲ್‌ ಮೂಲಕ ಪಟೇಲ್ ಹೈಸ್ಕೂಲ್‌ ಮೈದಾನ ದಲ್ಲಿ ನಿಲುಗಡೆ ಮಾಡಬೇಕು. ಗಂಗಾವತಿ–ಕಂಪ್ಲಿ ಕಡೆಯ ವಾಹನಗಳು ಪುಣ್ಯಮೂರ್ತಿ ಮತ್ತು ತ್ರಿಶಾಪ್‌ ಸರ್ಕಲ್‌ಗಳಲ್ಲಿ ಜನರನ್ನು ಇಳಿಸಿ ಲಕ್ಷ್ಮಿ ಸರ್ಕಲ್‌, ಮಲ್ಲಿಗೆ ಕ್ರಾಸ್‌ ಮೂಲಕ ಪಿಬಿಎಸ್‌ ಖಾಲಿ ಜಾಗ ಮತ್ತು ವಾಸವಿ ಶಾಲೆ ಮೈದಾನದಲ್ಲಿ ನಿಲುಗಡೆ ಮಾಡಬೇಕು.

Click to comment

Leave a Reply

Your email address will not be published. Required fields are marked *

More in ಲೋಕಸಮರ 2024

To Top
Exit mobile version