Connect with us

Murugha math; ಸಮಾಜಮುಖಿಯಾಗಿ ಆಲೋಚಿಸಿದವರು ಜಯದೇವ ಶ್ರೀಗಳು | ಡಾ.ವೀರಭದ್ರ ಚನ್ನಮಲ್ಲ ಸ್ವಾಮೀಜಿ 

ಶ್ರೀ ಜಯದೇವ ಜಗದ್ಗುರುಗಳ 150ನೇ ಜಯಂತ್ಯುತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮ

ಮುಖ್ಯ ಸುದ್ದಿ

Murugha math; ಸಮಾಜಮುಖಿಯಾಗಿ ಆಲೋಚಿಸಿದವರು ಜಯದೇವ ಶ್ರೀಗಳು | ಡಾ.ವೀರಭದ್ರ ಚನ್ನಮಲ್ಲ ಸ್ವಾಮೀಜಿ 

CHITRADURGA NEWS | 12 OCTOBER 2024

ಚಿತ್ರದುರ್ಗ: ಕೆಲವು ಅಂಶಗಳನ್ನು ಚಾರಿತ್ರಿಕ ನೆಲೆಯೊಳಗೆ ಗ್ರಹಿಸಬೇಕಾಗುತ್ತದೆ. ಪೀಠಪರಂಪರೆಯ ಮಠಗಳಲ್ಲಿ ಹೆಚ್ಚು ಜ್ಞಾನಿಗಳು, ಹೆಚ್ಚು ಕ್ರಿಯಾಶೀಲರು, ಸಮಾಜಮುಖಿಯಾಗಿ ಆಲೋಚಿಸಿದವರು ಜಯದೇವ ಶ್ರೀಗಳು(jayadeva sri ). ಕರ್ನಾಟಕದಲ್ಲಿ ಮೊದಲು ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿದವರು ಜಯದೇವ ಶ್ರೀಗಳು ಎಂದು ಬೆಂಗಳೂರು ನಿಡುಮಾಮಿಡಿ ಮಠದ ಡಾ.ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಕ್ಲಿಕ್ ಮಾಡಿ ಓದಿ: MOLAKALMURU: ಬರದ ನಾಡಿನಲ್ಲಿ ಭರ್ಜರಿ ಮಳೆ | ರಂಗಯ್ಯನದುರ್ಗ ಜಲಾಶಯ ಭರ್ತಿ

ಮುರುಘಾ ಮಠ(Murugha math)ದಿಂದ ಅನುಭವ ಮಂಟಪದಲ್ಲಿ ಆಯೋಜಿಸಿರುವ ಶ್ರೀ ಜಯದೇವ ಜಗದ್ಗುರುಗಳ 150ನೇ ಜಯಂತ್ಯುತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ,

ಶ್ರೀಗಳು ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದರು. ಅವರ ವ್ಯಕ್ತಿತ್ವ, ವಿದ್ವತ್ತು ಆಯಸ್ಕಾಂತ ಇದ್ದ ಹಾಗೆ ಇತ್ತು. ಜಯದೇವ ಶ್ರೀಗಳ ಕಾಲಮಾನ ಕೇವಲ ಮುರುಘಮಠಕ್ಕೆ ಸೀಮಿತವಾಗಿರಲಿಲ್ಲ. ಅವರ 150ನೇ ಜಯಂತ್ಯುತ್ಸವವನ್ನು ಶ್ರೀಮಠದ ಆಡಳಿತಮಂಡಳಿ ಅರ್ಥಪೂರ್ಣವಾಗಿ ಆಚರಿಸುತ್ತಿದೆ ಎಂದು ನುಡಿದರು.

ಬೆಂಗಳೂರು ಬೇಲಿಮಠದ ಶ್ರೀ ಮ.ನಿ.ಪ್ರ. ಶಿವರುದ್ರಸ್ವಾಮಿಗಳು ಮಾತನಾಡಿ, ಜಯದೇವ ಶ್ರೀ ಕಾಲದ ಮಹಾಬೆಳಕಾಗಿ ಬಂದವರು. ಅವರಿಗೆ ಪ್ರೇರಣೆಯಾಗಿ ಬಂದವರು ಅಥಣ ಶ್ರೀಗಳು. ಅಂದಿನ ಕಾಲದಲ್ಲಿ ಪೀಠಾಧಿಪತಿಗಳೆಂದರೆ ಗರ್ಭದಲ್ಲಿರುವ ಶಿಶುವಿನಂತೆ. ಜನರಿಗೆ ದರ್ಶನ ಭಾಗ್ಯ ಅಪರೂಪವಾಗಿತ್ತು.

ಕ್ಲಿಕ್ ಮಾಡಿ ಓದಿ: Navratri; ನವರಾತ್ರಿ ಪ್ರಯುಕ್ತ ಚಂಡಿಕಾಹೋಮ | ಶಾಂತವೀರ ಶ್ರೀ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಭಾಗೀ 

ಈ ಸಂದರ್ಭದಲ್ಲಿ ಜಯದೇವ ಶ್ರೀಗಳು ತಮ್ಮ ಗುರುಗಳ ಆದೇಶದಂತೆ ಸುತ್ತು ಮತ್ತು ಕಟ್ಟು ಎಂಬಂತೆ ಮಠವನ್ನು ಬಿಟ್ಟು ಸಮಾಜವನ್ನು ಕಟ್ಟಲು ಸುತ್ತಿದರು. ಶಿಕ್ಷಣ, ಊಟ, ವಸತಿಗೆ ಜಯದೇವ ಶ್ರೀಗಳು ಹೆಚ್ಚು ಒತ್ತು ಕೊಟ್ಟರು. ಜಯದೇವ ಶ್ರೀಗಳ ಬಗ್ಗೆ ಮಾತನಾಡಿದರೆ ಮಾತು ಮೌನವಾಗುತ್ತದೆ. ಅವರು ಮತ್ತಷ್ಟು ಎತ್ತರದಲ್ಲಿ ಕಾಣಿಸುತ್ತಾರೆ ಎಂದು ನುಡಿದರು.

ಬೀದರ್ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜ್ ಧನ್ನೂರು ಮಾತನಾಡಿ, ಪ್ರತಿವರ್ಷದಂತೆ ಮುರುಘಾಮಠದಲ್ಲಿ ಶರಣಸಂಸ್ಕೃತಿ ಉತ್ಸವದ ಜೊತೆಗೆ ಈ ವರ್ಷ ವಿಶೇಷವಾಗಿ ತಿವಿಧ ದಾಸೋಹಿ ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವ ಆಚರಿಸಲಾಗುತ್ತಿದೆ.

ಬಸವಣ್ಣನವರು ತಮ್ಮ ವಚನಗಳಲ್ಲಿ ಅನೇಕ ಬಾರಿ ಹೇಳಿದ್ದಾರೆ. ನಮ್ಮ ಕೂಡಲಸಂಗಮದ ಶರಣರನ್ನು ಹೋಲಿಕೆ ಮಾಡಲು ಪ್ರತಿಯಿಲ್ಲ. ಪೂಜ್ಯರಾದ ಜಯದೇವ ಶ್ರೀಗಳಿಗೆ ಈ ಮಾತು ಅನ್ವಯವಾಗುತ್ತದೆ. ಶ್ರೀಗಳು ಉಪಮಾತೀತರು. ಅವರಿಗೆ ಅವರೇ ಸಾಟಿ. ದೇವರು ನಮಗೆ ಜ್ಞಾನ ಮತ್ತು ಸಾರ್ಮರ್ಥ್ಯ ನೀಡಿದ್ದಾನೆ. ಜ್ಞಾನ ನಮಗಾಗಿ ಬಳಸಬೇಕು. ಸಾಮರ್ಥ್ಯವನ್ನು ಇತರ ಒಳಿತಿಗಾಗಿ ಬಳಸಬೇಕು.

ಕ್ಲಿಕ್ ಮಾಡಿ ಓದಿ: Reservation: ಒಳಮೀಸಲು ಜಾರಿಗೆ ಪಟ್ಟು | ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಸಮಾವೇಶ | ರಾಜ್ಯ ಸರ್ಕಾರದ ವಿರುದ್ಧ ಮಾದಿಗ ಮುಖಂಡರ ಅಸಮಧಾನ

ನದಿ ಹರಿದು ಭೂಮಿಯನ್ನು ಫಲವತ್ತಾಗಿ ಮಾಡುತ್ತದೆ. ಮಾವಿನಗಿಡ ಸಾವಿರಾರು ಹಣ್ಣು ಬಿಟ್ಟು ಮಾನವನಿಗೆ ಕೊಡುಗೆ ನೀಡುವಂತೆ ನಾವು ನಮ್ಮ ಸಾಮರ್ಥ್ಯವನ್ನು ಬಳಸಬೇಕು. ಆದರೆ ನಾವು ಜ್ಞಾನ ಮತ್ತು ಸಾಮರ್ಥ್ಯವನ್ನು ಸಾರ್ಥಕ್ಕಾಗಿ ಬಳಸುತ್ತಿದ್ದೇವೆ. ಜಯದೇವಶ್ರೀಗಳು ತಮ್ಮ ಸಾಮರ್ಥ್ಯವನ್ನು ಸಮಾಜಕ್ಕೆ ಧಾರೆಯೆರೆದರು.

ಶರಣಸಂಸ್ಕೃತಿ ವಿಶಿಷ್ಟ ಹಾಗು ಜಗತ್ತಿನ ಅತ್ಯಂತ ಶ್ರೇಷ್ಠ ಸಂಸ್ಕೃತಿ. ಮಾನವೀಯ ಸಂಸ್ಕೃತಿ ಶರಣ ಸಂಸ್ಕೃತಿ. ಶ್ರೀಮಠ ಈ ಸಂಸ್ಕೃತಿಯನ್ನು ಉಳಿಸಿ ಬೆಳಸುವ ಕಾರ್ಯ ಮಾಡುತ್ತಿದೆ. ಬಸವಣ್ಣನವರ ಜ್ಯೋತಿ ನಿರಂತರವಾಗಿ ಬೆಳಗುತ್ತಿರಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ತಮಿಳುನಾಡು ಜಂಗಮಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಗಳು, ಶಾಸಕರಾದ ಶ್ರೀ ಕೆ.ಸಿ.ವೀರೇಂದ್ರ (ಪಪ್ಪಿ), ಶ್ರೀ ಕೆ.ಎಂ.ವೀರೇಶ್, ತಿಪಟೂರಿನ ಶ್ರೀ ಜಯದೇವ ವಿದ್ಯಾರ್ಥಿನಿಲಯದ ಆಡಳಿತಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಕ್ಲಿಕ್ ಮಾಡಿ ಓದಿ: Colours kannada: ನಟ ಹುಲಿ ಕಾರ್ತಿಕ್‍ಗೆ ಇಮ್ಮಡಿ ಶ್ರೀ ಅಭಯ | ಬಡವರ ಮಕ್ಕಳು ಬೆಳೆಯಬೇಕು ಎಂದ ಶ್ರೀಗಳು

ಈ ವೇಳೆ ಮಹಾದಾನಿಗಳಾದ ಶ್ರೀ ಯಜಮಾನ್ ಮೋತಿವೀರಣ್ಣ, ಅಂಬಲಿ ಚನ್ನಬಸಪ್ಪನವರ ಸುಪುತ್ರರಾದ ಶ್ರೀ ಎ.ಸಿ.ಷಡಕ್ಷರಿ, ನಿವೃತ್ತ ಇಂಜಿನಿಯರ್ ಶ್ರೀ ಚನ್ನವೀರಪ್ಪ ಎಸ್, ಜಯದೇವ ಪ್ರೆಸ್ ಮಾಲೀಕರಾದ ಶ್ರೀ ಕಣಕುಪ್ಪಿ ಮುರುಘೇಶಪ್ಪ, ದಾವಣಗೆರೆ ವರ್ತಕರಾದ ಶ್ರೀ ಮುರುಘರಾಜೇಂದ್ರ ಚಿಗಟೇರಿ ಇವರುಗಳನ್ನು ಸನ್ಮಾನಿಸಲಾಯಿತು.

ಸಾಂಸ್ಕೃತಿಕ ಸಂಭ್ರಮದಲ್ಲಿ ಖ್ಯಾತ ಹಿನ್ನಲೆ ಗಾಯಕರಾದ ಶ್ರೀ ರಾಜೇಶ್ ಕೃಷ್ಣನ್ ಮತ್ತು ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಗಾನಯೋಗಿ ಬಳಗದವರು ಜಯದೇವ ಜಗದ್ಗುರುಗಳ ಜೀವನಾಧರಿಕ ಜಯದೀಪ ಜ್ಯೋತಿ ರೂಪಕ ನಡೆಸಿಕೊಟ್ಟರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version