
CHITRADURGA NEWS | 11 JULY 2026
ಚಿತ್ರದುರ್ಗ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ 2026-27ನೇ ಸಾಲಿನ ಮುಂಗಾರು ಹಂಗಾಮಿನ ತೋಟಗಾರಿಕೆ ಬೆಳೆಗಳಾದ ಮಳೆಯಾಶ್ರಿತ ಈರುಳ್ಳಿ, ನೀರಾವರಿ ಈರುಳ್ಳಿ, ಮಳೆಯಾಶ್ರಿತ ಟೊಮ್ಯಾಟೋ ಮತ್ತು ಕೆಂಪು ಮೆಣಸಿನಕಾಯಿ ವಿಮಾ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಜುಲೈ 16ರಂದು ಉದ್ಯೋಗ ಮೇಳ | 8ಕ್ಕೂ ಹೆಚ್ಚು ಖಾಸಗಿ ಕಂಪನಿ ಭಾಗಿ
ಜಿಲ್ಲೆಯ ವಿವಿಧ ತಾಲೂಕುಗಳಿಗೆ ಬೆಳೆಗಳನ್ನು ಅಧಿಸೂಚಿಸಲಾಗಿದೆ. ಹೋಬಳಿಗಳಲ್ಲಿ ಇಪ್ಕೋ ಟೋಕಿಯೋ ಜನರಲ್ ಇನ್ಸೂರೆನ್ಸ್ ಕಂಪನಿಯ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ನೀರಾವರಿ ಈರುಳ್ಳಿ ಬೆಳೆಗೆ ಜುಲೈ 15 ಮತ್ತು ಉಳಿದ ಅಧಿಸೂಚಿತ ಬೆಳೆಗಳ ನೋಂದಣಿಗೆ ಜುಲೈ 31 ಕೊನೆಯ ದಿನಾಂಕವಾಗಿರುತ್ತದೆ.
ಟೊಮ್ಯಾಟೋ ಬೆಳೆಗೆ ಶೇಕಡಾ 90 ರಷ್ಟು ಇಂಡೆಮ್ಮಿಟಿ ಮಟ್ಟವಿದ್ದು, ಪ್ರತಿ ಹೆಕ್ಟೇರ್‍ಗೆ 1,69,800 ರೂ. ವಿಮಾ ಮೊತ್ತ ನಿಗದಿಯಾಗಿದೆ. ಇದಕ್ಕೆ ರೈತರು ಶೇ.5 ರಂತೆ 8,490 ರೂ. ವಿಮಾ ಕಂತು ಪಾವತಿಸಬೇಕು.
ನೀರಾವರಿ ಈರುಳ್ಳಿ ಬೆಳೆಗೆ ಶೇ.90 ರಷ್ಟು ಇಂಡೆಮ್ಮಿಟಿ ಮಟ್ಟವಿದ್ದು, 93,900 ರೂ. ವಿಮಾ ಮೊತ್ತಕ್ಕೆ ರೈತರ ಕಂತು 4,695 ರೂ. ಆಗಿರುತ್ತದೆ.
ಮಳೆಯಾಶ್ರಿತ ಈರುಳ್ಳಿ ಬೆಳೆಗೆ ಶೇ.80 ರಷ್ಟು ಇಂಡೆಮ್ಮಿಟಿ ಮಟ್ಟ ಹಾಗೂ 85,600 ರೂ. ವಿಮಾ ಮೊತ್ತವಿದ್ದು, ರೈತರು 4,280 ರೂ. ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: SIR | ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 2.68 ಲಕ್ಷಕ್ಕೂ ಅಧಿಕ ಮತದಾರರ ಗಣತಿ ನಮೂನೆ ವಿತರಣೆ
ಮಳೆಯಾಶ್ರಿತ ಕೆಂಪು ಮೆಣಸಿನಕಾಯಿ ಬೆಳೆಗೆ ಶೇ.80 ರಷ್ಟು ಇಂಡೆಮ್ಮಿಟಿ ಮಟ್ಟವಿದ್ದು, 90,800 ರೂ. ವಿಮಾ ಮೊತ್ತಕ್ಕೆ ಪ್ರತಿಯಾಗಿ ರೈತರು ಶೇ.5 ರಂತೆ 4,540 ರೂ. ವಿಮಾ ಕಂತನ್ನು ಕಟ್ಟಬೇಕಾಗುತ್ತದೆ.
ಅರ್ಹ ರೈತರು ನಿಗದಿತ ಅವಧಿಯೊಳಗೆ ತಮ್ಮ ಹತ್ತಿರದ ಬ್ಯಾಂಕುಗಳು, ಸಾಮಾನ್ಯ ಸೇವಾ ಕೇಂದ್ರಗಳು ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ವಿಮೆಯನ್ನು ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿ ಹಾಗೂ ಮಾರ್ಗದರ್ಶನಕ್ಕಾಗಿ ತೋಟಗಾರಿಕೆ ಇಲಾಖೆಯ ಕಚೇರಿ ಸಂಪರ್ಕಿಸಬಹುದು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

