ಮುಖ್ಯ ಸುದ್ದಿ
Chitradurga: ಚಿತ್ರದುರ್ಗ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ | ಜಿಲ್ಲಾಧಿಕಾರಿ ಆದೇಶ

Published on
CHITRADURGA NEWS | 03 DECEMBER 2024
ಚಿತ್ರದುರ್ಗ: ಫೆಂಗಾಲ್ ಚಂಡಮಾರುತದ ಎಫೆಕ್ಟ್ ಕೋಟೆನಾಡು ಚಿತ್ರದುರ್ಗ (Chitradurga) ಜಿಲ್ಲೆಯ ಮೇಲೆಯೂ ಬಿದ್ದಿದ್ದು, ನಿನ್ನೆಯಿಂದ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ ಇಂದು (ಡಿಸೆಂಬರ್ 3) ರಂದು ಶಾಲೆಗಳಿಗೆ ರಜೆ ಘೊಷಣೆ ಮಾಡಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆದೇಶಿಸಿದ್ದಾರೆ.

ಇದನ್ನೂ ಓದಿ: ಕಾನೂನು ಕಾಲೇಜುಗಳ ಚೆಸ್ ಸ್ಪರ್ಧೆ | ಬೆಂಗಳೂರು, ಹುಬ್ಬಳ್ಳಿ ತಂಡಗಳಿಗೆ ಪ್ರಶಸ್ತಿಯ ಗರಿ
ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ, ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಮುಂದಿನ ಎರಡು ಶನಿವಾರಗಳಂದು ಪೂರ್ಣ ತರಗತಿಗಳನ್ನು ನಡೆಸುವ ಮೂಲಕ ಈ ರಜೆ ಸರಿದೂಗಿಸಲು ಆದೇಶಿಸಲಾಗಿದೆ.
ಅಂಗನವಾಡಿ, ಪಿಯು ಕಾಲೇಜುಗಳಿಗೂ ರಜೆ:
ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಈ ರಜೆಯನ್ನು ಅಂಗನವಾಡಿ ಮಕ್ಕಳು ಹಾಗೂ ಪದವಿ ಪೂರ್ವ ತರಗತಿಗಳಿಗೂ ಅನ್ವಯಿಸಿದ್ದು, ಅಂಗನವಾಡಿ ಹಾಗೂ ಪಿಯು ಕಾಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿದೆ.
Continue Reading
Related Topics:Chitradurga, Chitradurga Latest, Chitradurga news, Chitradurga Updates, Education Department, featured, Fengal Cyclone, Kannada News, Rain, School Holiday, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಲೇಟೆಸ್ಟ್, ಫೆಂಗಾಲ್ ಚಂಡಮಾರುತ, ಮಳೆ, ಶಾಲೆಗಳಿಗೆ ರಜೆ, ಶಿಕ್ಷಣ ಇಲಾಖೆ

Click to comment