CHITRADURGA NEWS | 21 JULY 2024
ಚಿತ್ರದುರ್ಗ: ಜಿಲ್ಲಾ ಯೋಗ ಸಂಸ್ಥೆ, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ಇನ್ನರ್ ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಹಾಗೂ ರೋಟರಿ ಕ್ಲಬ್ ಚಿತ್ರದುರ್ಗ ಇವರ ವತಿಯಿಂದ ನಗರದ ಎಸ್.ಆರ್.ಬಿ.ಎಂ.ಎಸ್ ರೋಟರಿ ಬಾಲ ಭವನದಲ್ಲಿ ಗುರುವಂದನಾ(GURUVANDANA) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: ಕಲ್ಲು ತೂರಿದ ಕಳ್ಳರ ಗ್ಯಾಂಗ್ | ಗಾಳಿಯಲ್ಲಿ ಗುಂಡು ಹಾರಿಸಿದ ಪೊಲೀಸರು | ಸ್ಥಳಕ್ಕೆ SP ಭೇಟಿ
ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಈ. ಸಂಪತ್ ಕುಮಾರ್ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಯೋಗವಿದ್ಯೆ ಧಾರೆ ಎರೆದ, ಬುದ್ಧನಿಗೆ ಜ್ಞಾನೋದಯವಾದ ದಿನ, ಜೈನ ಧರ್ಮದ 24ನೇ ತೀರ್ಥಂಕರರ ಸ್ಮರಣೆಯ ಸಂದರ್ಭ, ಅಂಬೇಡ್ಕರ್ ಬೌದ್ಧ ಧರ್ಮದ ಶಿಷ್ಯತ್ವ ಪಡೆದ ದಿನ ಇವುಗಳೆಲ್ಲ ಅಪರೂಪದ ಮತ್ತು ಗುರುವಿನ ಮಹತ್ವದ ಸ್ಥಾನವನ್ನು ಎತ್ತಿ ಹಿಡಿದ ದ್ಯೋತಕವಾಗಿವೆ ಎಂದರು.
ವಿಶ್ವ ಪರಂಪರೆಯಲ್ಲಿ ಅಷ್ಟೇ ಏಕೆ ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ ಸ್ಥಾನ ಮಹತ್ವವಾದದ್ದು. ಗ್ರೀಕ್ ದೇಶದಲ್ಲಿನ ಅನೇಕ ತತ್ವಜ್ಞಾನಿಗಳು ಸಹ ಗುರುವಿನ ಸ್ಥಾನವನ್ನು ಎತ್ತರಕ್ಕೆ ಏರಿಸಿರುವುದನ್ನು ಸ್ಮರಿಸಬಹುದಾಗಿದೆ.
ದೇಹ ಮತ್ತು ಮನಸ್ಸು ಸದಾ ಉಲ್ಲಾಸಭರಿತವಾಗಿರಲು ಯೋಗ ಒಂದು ಶಕ್ತಿ ಇದ್ದಂತೆ. ಯೋಗ ಮಾಡುವುದರಿಂದ ನಮ್ಮಲ್ಲಿ ಸದಾ ಲವಲವಿಕೆ ಮತ್ತು ಉತ್ತೇಜನ ಇಮ್ಮಡಿಯಾಗಲು ಸಹಕಾರಿ ಯಾಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: Police; ತಡರಾತ್ರಿ ಪೊಲೀಸರ ಆಪರೇಷನ್ ಹೇಗಿತ್ತು | ಕಳ್ಳರನ್ನು ಚೇಸಿಂಗ್ ಮಾಡಿದ್ದೇಗೆ | ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಮಾಹಿತಿ
ಯೋಗಾಚಾರ್ಯ ಎಲ್.ಎಸ್.ಚಿನ್ಮಯಾನಂದ ಮಾತನಾಡಿ, ನಾವು ನಮ್ಮ ಜೀವನದಲ್ಲಿ ಸಾಧ್ಯವಾದಷ್ಟು ಭಾಗುವಿಕೆಯನ್ನು ಅಂದರೆ ವಿನಯ, ದಯೆ, ಕರುಣೆ, ಹೃದಯ ವೈಶಾಲ್ಯತೆ ಮೆರೆದು ಬೇರೆಯವರಿಗೆ ಮಾರ್ಗದರ್ಶಿ ಆಗಬೇಕಿದೆ. ನಮ್ಮ ಯೋಗ ಉಪಶಾಖೆಗಳ ಮುಖ್ಯಸ್ಥರುಗಳು ಸಹ ಈ ರೀತಿಯ ಸದ್ಗುಣಗಳನ್ನು ಬಿತ್ತುವ ಮೂಲಕ ಸಾರ್ವಜನಿಕ ಜೀವನದಲ್ಲಿರುವ ಮನುಷ್ಯರ ಜೀವನದ ಹಸನಿಗೆ ಪ್ರೇರಣೆಯಾಗಿ ಮಾದರಿಯಾಗಬೇಕು ಎಂದರು.
ಯೋಗ ಸಂಸ್ಥೆಯ ಅಧ್ಯಕ್ಷ ಎಸ್.ಜಿ ರಂಗನಾಥ್ ಮಾತನಾಡಿ, ಮನುಷ್ಯನೇನಾದರೂ ಸಾಧನೆ ಮಾಡಬೇಕೆಂದರೆ ಆರೋಗ್ಯ ಅತ್ಯವಶ್ಯಕ. ನಮ್ಮ ದೇಹದ ಎಲ್ಲಾ ಅವಯವಗಳು ಸರಿಯಾಗಿ ಕೆಲಸ ಮಾಡಬೇಕೆಂದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗಿದೆ. ಶುಂಠಿ, ಕರಿಬೇವು, ಬೆಳ್ಳುಳ್ಳಿ, ಬಿಸಿನೀರು ಇವುಗಳನ್ನು ಬೆಳಗಿನ ಹೊತ್ತು ಸರಿಯಾದ ಕ್ರಮದಲ್ಲಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶರಣ ಸಾಹಿತ್ಯ ಪರಿಷತ್ತಿನ ಹಾಗೂ ಜಿಲ್ಲಾ ಯೋಗ ಸಂಸ್ಥೆಯ ಕಾರ್ಯದರ್ಶಿ ಹುರುಳಿ ಬಸವರಾಜ ವಿಶೇಷ ಉಪನ್ಯಾಸ ನೀಡಿದರು.
ಇದನ್ನೂ ಓದಿ: LOkayuktha; ಲೋಕಾಯುಕ್ತರು ಬರ್ತಾರೆ | ದೂರುಗಳಿದ್ರೆ ಸಲ್ಲಿಸಿ
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಜಿ.ಎಂ. ವೀರಣ್ಣ, ಕಾರ್ಯದರ್ಶಿಗಳಾದ ಕೆ.ಮಧುಪ್ರಸಾದ್, ಜಿ.ಎಸ್. ಶಿವಣ್ಣ, ರೋಟೇರಿಯನ್ ರಾಜಕುಮಾರ್, ಇನ್ನರ್ವೀಲ್ ಕಾರ್ಯದರ್ಶಿ ದೀಪಾ ಸಂತೋಷ್, ಎಂ.ಕೆ. ರವೀಂದ್ರ ಸೇರಿದಂತೆ ಇತರರು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

