By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ಚಿತ್ರದುರ್ಗ ತಾಲ್ಲೂಕು ಪಂಚಾಯತ್
    ಜೂನ್ 16ರಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆಯಲ್ಲಿ KDP ಸಭೆ 
    7 hours ago
    ಶಿಕ್ಷಕರ ಆಯ್ಕೆಗೆ ಜೂನ್ 15ರಂದು ತರಗತಿ ಪ್ರಾತ್ಯಕ್ಷಿಕೆ
    7 hours ago
    ತಳಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ | ನಿರ್ದೇಶಕರಾಗಿ ಶಾಸಕ ಕೆ.ಸಿ ವೀರೇಂದ್ರ (ಪಪ್ಪಿ) ಅವಿರೋಧ ಆಯ್ಕೆ
    ಸಹಕಾರಿ ಕ್ಷೇತ್ರಕ್ಕೆ ವೀರೇಂದ್ರ ಪಪ್ಪಿ ಪ್ರವೇಶ | ತಳುಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆ
    9 hours ago
    ಗರ್ಭನಿರೋಧಕ ಇಂಪ್ಲಾಂಟ್ ತರಬೇತಿ
    ಗರ್ಭ ನಿರೋಧಕ್ಕೆ ಹೊಸ ವಿಧಾನ | ಇಂಪ್ಲಾಂಟ್ ಸುರಕ್ಷಿತ ಡಾ.ಚಂದ್ರಿಕಾ
    19 hours ago
    ತುರುವನೂರು ಕಾಲೇಜಿನಲ್ಲಿ ಪರಿಸರ ದಿನಾಚರಣೆ
    ತುರುವನೂರು ಕಾಲೇಜಿನಲ್ಲಿ ಪರಿಸರ ದಿನಾಚರಣೆ
    21 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    Hosadurga police work
    INSTAGRAM, FECEBOOK ಪರಿಚಯ | ಲೈಂಗಿಕ ದುರ್ಬಳಕೆ ವಂಚನೆ ಮಾಡುತ್ತಿದ್ದ ಆರೋಪಿ ಬಂಧನ | ಚಿನ್ನಾಭರಣ ವಶಕ್ಕೆ
    18 hours ago
    ಚಿತ್ರದುರ್ಗ ಅಪರಾಧ
    ಜಾನುಕೊಂಡ ಬಳಿ ಭೀಕರ ಅಪಘಾತ | ಇಬ್ಬರು ಕುರಿಗಾಯಿಗಳು, 14 ಕುರಿ ಧಾರುಣ ಸಾವು
    1 week ago
    Accident near molakalmuru
    ಮೊಳಕಾಲ್ಮೂರು ಬಳಿ ಮತ್ತೊಂದು ಅಪಘಾತ | ಚಳ್ಳಕೆರೆಯ 5 ಜನ ಸಾವು | ಒಂದೇ ದಿನದ ಅಂತರದಲ್ಲಿ ಜಿಲ್ಲೆಯಲ್ಲಿ ಹತ್ತು ಸಾವು
    2 weeks ago
    ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ | 5 ಜನರ ದುರ್ಮರಣ
    2 weeks ago
    Accident between bike and car
    ಬೈಕ್‌ – ಕಾರು ನಡುವೆ ಅಪಘಾತ | ಸ್ಥಳದಲ್ಲೇ ಇಬ್ಬರು ಮೃತ
    3 weeks ago
  • ತಾಲೂಕು
    ತಾಲೂಕುShow More
    ಸುಜ್ಞಾನ ಸಂಗಮ, ಜೈನ ಸಮಾಜ ಬಾಂಧವರಿಗೆ ಸನ್ಮಾನ ಸಮಾರಂಭ
    ಸಾತ್ವಿಕತೆ ಇರುವಲ್ಲಿ ಸಹಬಾಳ್ವೆ, ಸೌಹಾರ್ದತೆ ಇರುತ್ತದೆ | ಶಾಂತವೀರ ಶ್ರೀ 
    2 days ago
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ 
    2 weeks ago
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    2 weeks ago
    ವಾಲಿಬಾಲ್ ಹೊನಲು ಬೆಳಕಿನ ಪಂದ್ಯಾವಳಿ
    ಸೋಲು ಮುಂದಿನ ಗೆಲುವಿಗೆ ಪ್ರೇರಣೆ | ಸಾಣೇಹಳ್ಳಿ ಶ್ರೀ 
    3 weeks ago
    ರಂಗಶಾಲಾ ನಾಟಕೋತ್ಸವ
    ಸಾಣೇಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ರಂಗಶಾಲಾ ನಾಟಕೋತ್ಸವ
    3 weeks ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    ARECANUT RATE
    ಅಡಿಕೆ ಧಾರಣೆ | 8 ಜೂನ್‌ | ಇಂದಿನ ಅಡಿಕೆ ರೇಟ್‌
    5 days ago
    ARECANUT RATE
    ಅಡಿಕೆ ಧಾರಣೆ | 6 ಜೂನ್‌ | ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ ಹಾಗೂ ರಾಜ್ಯದ ಅಡಿಕೆ ರೇಟ್‌
    7 days ago
    ARECANUT RATE
    ಅಡಿಕೆ ಧಾರಣೆ | 5 ಜೂನ್‌ | ಇಂದಿನ ಅಡಿಕೆ ಮಾರುಕಟ್ಟೆ ವಿವರ
    1 week ago
    ARECANUT RATE
    ಭೀಮಸಮುದ್ರ, ಚನ್ನಗಿರಿ, ತೀರ್ಥಹಳ್ಳಿ, ಸಾಗರ ಹಾಗೂ ರಾಜ್ಯದ ಅಡಿಕೆ ರೇಟ್‌
    1 week ago
    ARECANUT RATE
    ಅಡಿಕೆ ಧಾರಣೆ | 4 ಜೂನ್‌ | ಇಂದಿನ ರಾಶಿ, ಚಾಲಿ, ಕೆಂಪಡಕೆ ರೇಟ್‌
    1 week ago
  • Dina Bhavishya
    Dina BhavishyaShow More
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 13 | ಕೈಗೊಂಡ ಕೆಲಸಗಳಲ್ಲಿ ಅಡಚಣೆಗಳು, ಅರೋಗ್ಯದಲ್ಲಿ ಎಚ್ಚರ
    10 hours ago
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 12 | ಕೈಗೊಂಡ ಕೆಲಸದಲ್ಲಿ ವಿಳಂಬ, ಆರ್ಥಿಕ ಸಂಕಷ್ಟ
    1 day ago
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 11 | ಉದ್ಯೋಗದ ವಾತಾವರಣ ಅನುಕೂಲಕರ, ಹೊಸ ವಾಹನ ಖರೀದಿ
    2 days ago
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 10 | ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿರುತ್ಸಾಹ ವಾತಾವರಣ, ಹಠಾತ್ ಪ್ರಯಾಣದ ಸೂಚನೆ
    3 days ago
    ದಿನ ಭವಿಷ್ಯ
    ದಿನ ಭವಿಷ್ಯ | ಜೂನ್ 09 | ಹಠಾತ್ ಆರ್ಥಿಕ ಲಾಭ, ನಿರುದ್ಯೋಗಿಗಳಿಗೆ ಶುಭ ಸುದ್ದಿ
    4 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಜೂನ್ 12 | ರಾಗಿ, ಮೆಕ್ಕೆಜೋಳ ರೇಟ್….
    1 day ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಜೂನ್ 11 | ಹತ್ತಿ ರೇಟ್ ಎಷ್ಟಿದೆ?
    2 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಜೂನ್ 10 | ಮೆಕ್ಕೆಜೋಳ, ರಾಗಿ ರೇಟ್ ಎಷ್ಟಿದೆ?
    3 days ago
    ಮಾರುಕಟ್ಟೆ ಧಾರಣೆ
    ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್..
    4 days ago
    ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆ | ಜೂನ್ 08 | ಶೇಂಗಾ, ರಾಗಿ ರೇಟ್ ಎಷ್ಟಿದೆ?
    5 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    ಆರೋಗ್ಯ ಕ್ಷೇಮ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
    ನೂತನ ಆರೋಗ್ಯ ಕ್ಷೇಮ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಭೂಮಿಪೂಜೆ 
    1 week ago
    ಸಿ.ಸಿ.ರಸ್ತೆ ಕಾಮಗಾರಿಗೆ ಭೂಮಿ ಪೂಜೆ
    ಮೂರ್ನಾಲ್ಕು ದಿನಗಳಲ್ಲೇ ತಾಳಿಕಟ್ಟೆ ಕೆರೆಗೆ‌ ನೀರು | ಶಾಸಕ‌ ಎಂ.ಚಂದ್ರಪ್ಪ
    2 weeks ago
    ಪೂರ್ವಭಾವಿ ಸಭೆ
    ಹೊಳಲ್ಕೆರೆ ಜಿಲ್ಲೆಯಲ್ಲಿಯೇ ಮಾದರಿ ಕ್ಷೇತ್ರ | ಶಾಸಕ ಎಂ.ಚಂದ್ರಪ್ಪ 
    1 month ago
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ
    ಹೊಳಲ್ಕೆರೆಯಲ್ಲಿ ಭಾನುಮೂರ್ತಿ ನುಡಿನಮನ | ಸಿದ್ಧಯ್ಯನಕೋಟೆ ಶ್ರೀ, ಎಚ್.ಆಂಜನೇಯ ಭಾಗೀ 
    2 months ago
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ
    ಶಾಸಕ ಎಂ.ಚಂದ್ರಪ್ಪ, ರೈತ ಮುಖಂಡರಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ 
    2 months ago
  • ಹಿರಿಯೂರು
    ಹಿರಿಯೂರುShow More
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    3 weeks ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    2 months ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    4 months ago
    Power Cut chitradurga News (3)
    ಹಿರಿಯೂರು | ಇಂದು ವಿದ್ಯುತ್ ವ್ಯತ್ಯಯ
    4 months ago
    Shree SHADAKSHARAMUNI SWAMIJI
    ಆದಿಜಾಂಬವ ಶಾಖಾ ಮಠದ ಹೆಸರಿನ ಸಭೆಗೆ ನಮ್ಮ ಸಮ್ಮತಿ ಇಲ್ಲ | ದಾವಣಗೆರೆಯಲ್ಲಿ ಫೆ.14 ರಂದು ಕರೆದಿರುವ ಸಭೆಗೆ ಸ್ಪಷ್ಟೀಕರಣ | ಶ್ರೀ ಷಡಾಕ್ಷರಮುನಿ ಸ್ವಾಮೀಜಿ
    4 months ago
  • ಹೊಸದುರ್ಗ
    ಹೊಸದುರ್ಗShow More
    ಸುಜ್ಞಾನ ಸಂಗಮ, ಜೈನ ಸಮಾಜ ಬಾಂಧವರಿಗೆ ಸನ್ಮಾನ ಸಮಾರಂಭ
    ಸಾತ್ವಿಕತೆ ಇರುವಲ್ಲಿ ಸಹಬಾಳ್ವೆ, ಸೌಹಾರ್ದತೆ ಇರುತ್ತದೆ | ಶಾಂತವೀರ ಶ್ರೀ 
    2 days ago
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ
    ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ 
    2 weeks ago
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    ಹೊಸದುರ್ಗದಿಂದ ಶೃಂಗೇರಿಗೆ ನೂತನ KSRTC ಬಸ್ ಸೇವೆಗೆ ಚಾಲನೆ
    2 weeks ago
    ವಾಲಿಬಾಲ್ ಹೊನಲು ಬೆಳಕಿನ ಪಂದ್ಯಾವಳಿ
    ಸೋಲು ಮುಂದಿನ ಗೆಲುವಿಗೆ ಪ್ರೇರಣೆ | ಸಾಣೇಹಳ್ಳಿ ಶ್ರೀ 
    3 weeks ago
    ರಂಗಶಾಲಾ ನಾಟಕೋತ್ಸವ
    ಸಾಣೇಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ರಂಗಶಾಲಾ ನಾಟಕೋತ್ಸವ
    3 weeks ago
  • Life Style
    Life StyleShow More
    pregnant women to eat pumpkin seeds
    ಗರ್ಭಿಣಿಯರು ಕುಂಬಳಕಾಯಿ ಬೀಜಗಳನ್ನು ತಿನ್ನುವುದು ಸುರಕ್ಷಿತವೇ? 
    8 hours ago
    green chilies
    ಹಸಿರು ಮೆಣಸಿನಕಾಯಿ ಕತ್ತರಿಸುವಾಗ ಕೈ ಖಾರವಾಗಬಾರದಂತಿದ್ದರೆ ಈ ಟ್ರಿಕ್ಸ್ ಫಾಲೋ ಮಾಡಿ
    9 hours ago
    ad habits of yours are increasing your debt burden
    ನಿಮ್ಮ ಈ ನಾಲ್ಕು ಕೆಟ್ಟ ಅಭ್ಯಾಸಗಳು ನಿಮ್ಮ ಸಾಲದ ಹೊರೆಯನ್ನು ಹೆಚ್ಚಿಸುತ್ತಿವೆಯಂತೆ 
    1 day ago
    trawberry-honey
    ಕಳೆದುಹೋದ ತೇವಾಂಶವನ್ನು ಮರಳಿ ತರಲು ಹಚ್ಚಿ ಸ್ಟ್ರಾಬೆರಿ-ಜೇನುತುಪ್ಪದ ಫೇಸ್ ಪ್ಯಾಕ್
    1 day ago
    Shoe Stains From Your Feet
    ಪಾದಗಳಲ್ಲಿ ಮೂಡಿರುವ ಚಪ್ಪಲಿಯ ಕಲೆಗಳನ್ನು ಹೋಗಲಾಡಿಸಲು ಮನೆಯಲ್ಲೇ ಈ ಪ್ಯಾಕ್ ತಯಾರಿಸಿ ಹಚ್ಚಿ
    2 days ago
Reading: ಜ್ಞಾನಭಾರತಿ ಶಾಲೆ ಸುವರ್ಣ ಮಹೋತ್ಸವ | ಖ್ಯಾತ ನಟ ದತ್ತಣ್ಣ ಭಾಗೀ | ಹಳೆಯ ಗೆಳೆಯರ ಮಿಲನ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ಜ್ಞಾನಭಾರತಿ ಶಾಲೆ ಸುವರ್ಣ ಮಹೋತ್ಸವ | ಖ್ಯಾತ ನಟ ದತ್ತಣ್ಣ ಭಾಗೀ | ಹಳೆಯ ಗೆಳೆಯರ ಮಿಲನ

chitradurganews.com
Last updated: 3 February 2025 07:03
chitradurganews.com
1 year ago
Share
JnanaBharathi school Golden jubilee
ಜ್ಞಾನಭಾರತಿ ಶಾಲೆ ಸುವರ್ಣ ಮಹೋತ್ಸವ
SHARE

CHITRADURGA NEWS | 03 FEBRUARY 2025

ಚಿತ್ರದುರ್ಗ: ಹೇಯ್, ಇಲ್ಲೇ ಅಲ್ವಾ ನಮ್ಮ ಆಟದ ಮೈದಾನ ಇದ್ದಿದ್ದು, ಆ ಕಡೆ ಬಾಲ್ ಹೋದಾಗ ಅಜ್ಜಿ ಬೈತಿದ್ರು ನೆನಪಿದ್ಯಾ. ಅವನೆಲ್ಲೋ ಡುಮ್ಮಾ ಬಂದಿಲ್ವಾ.

ಈಗ ಏನ್ ಮಾಡ್ಕೊಂಡಿದಿಯಾ ಮಗಾ, ಹೋ ಹೌದಾ ಅಷ್ಟೊಳ್ಳೆ ಪೊಸಿಷನ್‍ನಲ್ಲಿ ಇದ್ದಿಯಾ, ನಮ್ದು ಏನಾದರೂ ಬಂದಾಗ ಸೈನ್ ಹಾಕೋದನ್ನು ಮರಿಬೇಡಪ್ಪ.

ಇದನ್ನೂ ಓದಿ: ಕೇಂದ್ರದ ಬಜೆಟ್‍ನಿಂದ ಯಾರಿಗೆ ಅನುಕೂಲ | ಹಾಲಿ, ಮಾಜಿ ಸಂಸದರು ಏನು ಹೇಳಿದ್ರು ?

ಏನಿದು ಸಂಭಾಷಣೆ ಅಂತೀರಾ. ದಶಕಗಳ ನಂತರ ತಾವು ಓದುತ್ತಿದ್ದ ಶಾಲೆಗೆ ಬಂದು, ಸಹಪಾಠಿಗಳನ್ನು ಭೇಟಿಯಾದ ಅಂಕಲ್‍ಗಳ ಮಾತುಕತೆಯ ಝಲಕ್ ಇದು.

JnanaBharathi school Golden Jubilee
ಜ್ಞಾನಭಾರತಿ ಶಾಲೆ ಸುವರ್ಣ ಮಹೋತ್ಸವ

ಹೌದು, ನಗರದ ಜ್ಞಾನಭಾರತಿ ಶಾಲೆಯ ಆವರಣ ಇಂದು ಹಳೆಯ ವಿದ್ಯಾರ್ಥಿಗಳಿಂದ ತುಂಬಿ ಹೋಗಿತ್ತು. ಗೆಳೆಯ, ಗೆಳತಿಯರು ಸೇರಿ ಹರಟೆ ಹೊಡೆದಿದ್ದೇ ಹೊಡೆದಿದ್ದು,

ವೇದಿಕೆಯಲ್ಲಿ ಗಣ್ಯರು ಭಾಷಣ ಮಾಡುತ್ತಿದ್ದರು, ಅದನ್ನು ಕೇಳಿಸಿಕೊಳ್ಳುವ ತಾಳ್ಮೆ ಇರಲಿಲ್ಲ. ಕಾರಣ ಹತ್ತು, ಇಪ್ಪತ್ತು ವರ್ಷಗಳ ನಂತರ ಹಳೆಯ ಗೆಳೆಯ, ಗೆಳತಿಯರು ಒಟ್ಟಿಗೆ ಸೇರಿದ್ದಾರೆ. ಅಕ್ಕಪಕ್ಕ ಕುಳಿತಿದ್ದಾರೆ.

ಇದನ್ನೂ ಓದಿ:  ನಗರಸಭೆ | ಅರ್ಹ ಮಹಿಳಾ ಸ್ವ-ಸಹಾಯ ಸಂಘಗಳನ್ನು ಆಯ್ಕೆ ಮಾಡಲು ಅರ್ಜಿ

ಜ್ಞಾನಭಾರತಿ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಅಷ್ಟೂ ವರ್ಷಗಳ ಹಳೆಯ ಬ್ಯಾಚ್‍ನ ಅನೇಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾಷ್ಟ್ರೋತ್ಥಾನ ಪರಿಷತ್ತಿನ ಈ ಶಾಲೆ 50 ವರ್ಷ ಪೂರೈಸಿರುವುದು ಬಹಳ ಸಂತೋಷದ ವಿಷಯ. ಸಮಾಜಕ್ಕೆ ಬೇಕಾದ ಎಲ್ಲ ತ್ಯಾಗಕ್ಕೆ ಸಿದ್ಧವಿರುವ ವಿದ್ಯಾರ್ಥಿಗಳನ್ನು ಈ ಶಾಲೆ ರೂಪಿಸಿದೆ. ಇದಕ್ಕೆ ಸಹಕಾರ ನೀಡಿದ ಪೋಷಕರು, ದಾನಿಗಳಿಗೆ ಅಭಿನಂದನೆಗಳು ಸಲ್ಲಬೇಕು.

| ನಿರ್ಮಲಕುಮಾರ್, ಚನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದ ಕಾರ್ಯದರ್ಶಿ.

ಶಾಲೆಯಲ್ಲಿ ಪಾಠ ಮಾಡಿ ನಿವೃತ್ತಿ ಹೊಂದಿರುವ ಅಧ್ಯಾಪಕರು, ಮಾತಾಜಿಗಳು ಆಗಮಿಸಿದ್ದರು. ಶಾಲೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.

ತಾವು ಕುಳಿತು ಪಾಠ ಕೇಳುತ್ತಿದ್ದ ಕೊಠಡು, ಡೆಸ್ಕು, ಬೆಂಚುಗಳ ಮೇಲೆ ಗಂಟೆಗಟ್ಟಲೆ ಕುಳಿತು ಹರಟೆ ಹೊಡೆದರು. ಪ್ರಾರ್ಥನೆ ಮಾಡುತ್ತಿದ್ದ ಹಾಲ್‍ನಲ್ಲೇ ಕಾಲು ನೋವು ಬರುವವರೆಗೆ ನಿಂತು ಮಾತಾಡಿದರು.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಫೆ.7, 8 ರಂದು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ | ಜಿಲ್ಲೆಯ ಐತಿಹಾಸಿಕ ಸ್ಥಳಗಳ ಮಹತ್ವ ತಿಳಿಸಿ | ಡಿಸಿ ಟಿ.ವೆಂಕಟೇಶ್ 

ತಾವು ಆಟವಾಡುತ್ತಿದ್ದ ಮೈದಾನದಲ್ಲಿ ಕಟ್ಟಡ ಕಟ್ಟಿದ್ದಾರೆಂದು ಕೆಲವರು ಬೇಜಾರಾದರು. ತಮಗೆ ಕಲಿಸಿದ ಗುರುಗಳಿಗೆ ಮಾಡಿದ್ದ ತರಲೆಯನ್ನು ನೆನೆದು ಮುಸಿ ಮುಸಿ ನಗುತ್ತಾ, ಒಟ್ಟಿಗೆ ಊಟ ಮಾಡಿ ಅಲ್ಲಿಂದ ಹೊರಟಾಗ ಅರ್ಧ ದಿನ ಕಳೆದು ಹೋಗಿತ್ತು.

ಇಷ್ಟರಲ್ಲಿ, ಪರಸ್ಪರ ಫೋನ್ ನಂಬರ್‍ಗಳು ಶೇರ್ ಆಗಿದ್ದವು. ವಾಟ್ಸಪ್ ಗ್ರೂಪ್ ರಚನೆಯಾಗಿ ತಮ್ಮ ಬ್ಯಾಚ್‍ನವರನ್ನು ಸೇರಿಸುವ ಕೆಲಸವೂ ನಡೆದಿತ್ತು.

ಚಿತ್ರದುರ್ಗ ಬರೀ ಊರಲ್ಲ, ಒಂದು ಶಕ್ತಿ:

ಖ್ಯಾತ ಚಿತ್ರನಟ, ಚಿತ್ರದುರ್ಗ ಮೂಲದ ಎಚ್.ಜಿ.ದತ್ತಾತ್ರೇಯ(ದತ್ತಣ್ಣ) ಜ್ಞಾನ ಭಾರತಿ ಶಾಲೆಯ ಸುವರ್ಣ ಮಹೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಇದನ್ನೂ ಓದಿ: ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ ಕಲಿಸಿ | ನ್ಯಾಯಾಧೀಶರಾದ ಉಜ್ವಲ ವೀರಣ್ಣ ಸಿದ್ದಣ್ಣ

ಚಿತ್ರದುರ್ಗದ ಕುರಿತು ತಮ್ಮ ನೆನಪುಗಳನ್ನು ಬಿಟ್ಟಿಟ್ಟ ದತ್ತಣ್ಣ, ತಾವು ಕೋಟೆಯಲ್ಲಿ ಸುತ್ತಾಡಿದ್ದು, ಗೋಪಾಲಸ್ವಾಮಿ ಹೊಂಡದಲ್ಲಿ ಈಜಿದ್ದು ಹೀಗೆ ಒಂದು ಕ್ಷಣಕ್ಕೆ ತಾವು ಜೀವಿಸಿದ್ದ ಚಿತ್ರದುರ್ಗವನ್ನು ಕಣ್ಮುಂದೆ ತಂದುಕೊಟ್ಟರು.

ಕಳೆದ 50 ವರ್ಷದಲ್ಲಿ ಈ ಸಂಸ್ಥೆ ಸಮಾಜಕ್ಕೆ ಅನೇಕ ಸದೃಢ ವ್ಯಕ್ತಿಗಳನ್ನು ಕೊಡುಗೆಯಾಗಿ ನೀಡಿದೆ. ಇಲ್ಲಿ ಕಲಿತವರು ದೇಶ, ವಿದೇಶಗಳಲ್ಲಿದ್ದಾರೆ. ವೈದ್ಯರು, ವಕೀಲರು, ನ್ಯಾಯಾಧೀಶರು, ಇಂಜಿನಿಯರ್, ಪೊಲೀಸ್ ಅಧಿಕಾರಿಗಳು ಹೀಗೆ ನಾನಾ ವೃತ್ತಿಗಳಲ್ಲಿ ಸಮಾಜವನ್ನು ಪ್ರಭಾವಿಸುತ್ತಿದ್ದಾರೆ.

| ಡಾ.ಕೆ.ರಾಜೀವಲೋಚನ, ಜ್ಞಾನಭಾರತಿ ವಿದ್ಯಾಮಂದಿರದ ಕಾರ್ಯದರ್ಶಿ

ಈ ವೇಳೆ ಮಾತನಾಡುತ್ತಾ, ಚಿತ್ರದುರ್ಗ ಬರೀ ಒಂದು ಊರಲ್ಲ. ಇದೊಂದು ಶಕ್ತಿ. ನಾವೆಲ್ಲಾ ಮದಕರಿ ನಾಯಕರ ವಂಶಸ್ಥರು. ತರಾಸು. ಹುಲ್ಲೂರು ಶ್ರೀನಿವಾಸ ಜೋಯಿಸರಂತಹ ಅದ್ಬುತ ಬರಹಗಾರರು ಹುಟ್ಟಿದ ಊರು ಇದು. ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಜನಿಸಿದ ಊರು ಚಿತ್ರದುರ್ಗ ಎಂದು ದತ್ತಣ್ಣ ತಮ್ಮ ಶಾಲಾ ದಿನಗಳನ್ನು ಸ್ಮರಿಸಿಕೊಂಡರು.

ಜ್ಞಾನಭಾರತಿ ಶಾಲೆ ಸುವರ್ಣ ಮಹೋತ್ಸವ
ಜ್ಞಾನಭಾರತಿ ಶಾಲೆ ಸುವರ್ಣ ಮಹೋತ್ಸವ

ಶಿಕ್ಷಣದಿಂದ ಮನುಷ್ಯನ ಅಂತಃಸತ್ವದ ಅನಾವರಣ ಆಗಬೇಕು. ವಿದ್ಯಾರ್ಥಿಗಳಲ್ಲಿ ಕೌಶಲ ಬೆಳೆಸಬೇಕು. ಆತ್ಮವಿಶ್ವಾಸ ವೃದ್ಧಿಸಬೇಕು. ವ್ಯಕ್ತಿತ್ವ ವಿಕಸನ ಮಾಡುವಂತಹ ಶಿಬಿರಗಳು ಹೆಚ್ಚಾಗಬೇಕು ಎಂದು ಆಶಿಸಿದರು.

ಇದನ್ನೂ ಓದಿ: ಜಂಗಮಯ್ಯರಿಗೆ ಪುತ್ರೋತ್ಸವ

ದೇಶಕ್ಕೆ, ರಾಜ್ಯಕ್ಕೆ ಅನೇಕರು ಕೊಡುಗೆಗಳನ್ನು ಕೊಟ್ಟಿದ್ದಾರೆ. ನಾವು ಅವರನ್ನು ಮರೆಯುತ್ತಿದ್ದೇವೆ. ಹಾಗಾಗದಂತೆ ನೋಡಿಕೊಳ್ಳುವುದೇ ನಮ್ಮ ಕರ್ತವ್ಯ. ಒಳ್ಳೆಯ ಕೆಲಸ ಮಾಡಿದವರು ಶ್ರೇಷ್ಠರು. ಅವರನ್ನು ಆಗಾಗ ಸ್ಮರಿಸುವುದೇ ನಿಜವಾದ ನಮ್ಮ ಬೆಳವಣಿಗೆ. ಸಮಾಜದಿಂದ ಇಷ್ಟು ದಿನ ಸಾಕಷ್ಟು ಪಡೆದುಕೊಂಡಿದ್ದೇವೆ. ಅದರ ಋಣ ತೀರಿಸುವ ಕೆಲಸ ಆಗಬೇಕು. ಸಮಾಜದ ಋಣ ಸಂದಾಯ ಆಗದಿದ್ದರೆ ಇಡೀ ಜೀವನ ಕೊರಗಬೇಕಾಗುತ್ತದೆ. ಆದಷ್ಟು ಬೇಗ ಅದನ್ನು ಮಾಡಬೇಕು ಎಂದರು.

ಶಾಲೆಯ ಆಡಳಿತ ಮಂಡಳಿ ಸದಸ್ಯರಾದ ಓಂಕಾರಪ್ಪ, ಹಿಂದಿನ ಅಧ್ಯಕ್ಷರಾಗಿದ್ದ ರಂಗಪ್ಪ, ಪ್ರಾಚಾರ್ಯ ಪ್ರಜ್ವಲ್ ವೇದಿಕೆಯಲ್ಲಿದ್ದರು.

ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಎಂಎಲ್ಸಿ ಕೆ.ಎಸ್.ನವೀನ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದರೀನಾಥ್, ಉದ್ಯಮಿ ದೀಪಾನಂದ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಾಲೆ ಸಮಾಜದ ಪರಿವರ್ತನಾ ಕೇಂದ್ರ ಆಗಬೇಕು ಎನ್ನುವುದು ನಮ್ಮ ಆಶಯ. ಸಮಾಜದಿಂದ ಪಡೆದುಕೊಂಡ ವಿಧ್ಯೆಯನ್ನು ಸಮಾಜಕ್ಕೆ ಧಾರೆ ಎರೆಯುವ ಕೆಲಸ ಆಗಬೇಕು.

| ಬಸವನಗೌಡ, ರಾಷ್ಟ್ರೋತ್ಥಾನ ಪರಿಷತ್ ರಾಜ್ಯಪಠ್ಯಕ್ರಮ ವಿಭಾಗದ ಸಂಚಾಲಕ.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:ChitradurgaChitradurga FortChitradurga LatestChitradurga newsCinemaDattannafeaturedJnanabharati SchoolKannada NewsRashtrothtana ParishadSuvarna Mahotsavaಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ಕೋಟೆಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಲೇಟೆಸ್ಟ್ಜ್ಞಾನಭಾರತಿ ಶಾಲೆದತ್ತಣ್ಣರಾಷ್ಟ್ರೋತ್ಥಾನ ಪರಿಷತ್‌ಸಿನಿಮಾಸುವರ್ಣ ಮಹೋತ್ಸವ
Share This Article
Facebook Email Print
Previous Article ಪ್ರೊ.ಎಂ.ಜಿ.ರಂಗಸ್ವಾಮಿ ರಚಿಸಿರುವ ಐದು ಕೃತಿಗಳ ಲೋಕಾರ್ಪಣೆ
Next Article today bhavishya Astrology: ದಿನ ಭವಿಷ್ಯ | ಫೆಬ್ರವರಿ 03 | ನಿರುದ್ಯೋಗಿಗಳಿಗೆ ಶುಭ ಸುದ್ದಿ, ಹಠಾತ್ ಆರ್ಥಿಕ ಲಾಭದ ಸೂಚನೆ
Leave a Comment

Leave a Reply Cancel reply

Your email address will not be published. Required fields are marked *

ಚಿತ್ರದುರ್ಗ ತಾಲ್ಲೂಕು ಪಂಚಾಯತ್
ಜೂನ್ 16ರಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆಯಲ್ಲಿ KDP ಸಭೆ 
ಮುಖ್ಯ ಸುದ್ದಿ
ಶಿಕ್ಷಕರ ಆಯ್ಕೆಗೆ ಜೂನ್ 15ರಂದು ತರಗತಿ ಪ್ರಾತ್ಯಕ್ಷಿಕೆ
ಮುಖ್ಯ ಸುದ್ದಿ
pregnant women to eat pumpkin seeds
ಗರ್ಭಿಣಿಯರು ಕುಂಬಳಕಾಯಿ ಬೀಜಗಳನ್ನು ತಿನ್ನುವುದು ಸುರಕ್ಷಿತವೇ? 
Life Style
green chilies
ಹಸಿರು ಮೆಣಸಿನಕಾಯಿ ಕತ್ತರಿಸುವಾಗ ಕೈ ಖಾರವಾಗಬಾರದಂತಿದ್ದರೆ ಈ ಟ್ರಿಕ್ಸ್ ಫಾಲೋ ಮಾಡಿ
Life Style
© Chitradurga News 2025 | Powered By Karnatakabest.com

Loading Comments...

    Welcome Back!

    Sign in to your account

    Username or Email Address
    Password

    Lost your password?

    Not a member? Sign Up