
CHITRADURGA NEWS | 06 NOVEMBER 2024
ಚಳ್ಳಕೆರೆ: ಮನೆಯಲ್ಲಿ ಅಕ್ರಮವಾಗಿ ಬಚ್ಚಿಟ್ಟಿದ್ದ ಸುಮಾರು 13ಕೆಜಿ ಗಾಂಜಾ(Ganja seized)ವನ್ನು ಅಬಕಾರಿ ಅಧಿಕಾರಿಗಳು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ಚಳ್ಳಕೆರೆ ನಗರದ ಸೂಜಿಮಲ್ಲೇಶ್ವರ ಬಡಾವಣೆಯ ಮನೆಯಲ್ಲಿ ನಡೆದಿದೆ.
ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | ನವೆಂಬರ್ 06 | ಈ ರಾಶಿಯವರಿಗೆ ಆದಾಯ ಸಾಕಾಗುವುದಿಲ್ಲ
ಒಟ್ಟು 13 ಕೆಜಿ ಸುಮಾರು 3 ಲಕ್ಷದ ಗಾಂಜಾ ಜಪ್ತಿ ಪಡಿಸಿಕೊಂಡಿದ್ದಾರೆ.

ತಳಕು ಮೂಲದ ಮೆಹಬೂಬ್ ಎನ್ನುವ ವ್ಯಕ್ತಿ ಗಾಂಜಾ ಶೇಖರಣೆ ಮಾಡಲಾಗಿತ್ತು ಎಂಬ ಮಾಹಿತಿ ತಿಳಿದು ಬಂದಿದೆ.
ಮನೆಯಲ್ಲಿ ಗಾಂಜಾ ವನ್ನು ಪ್ಲಾಸ್ಟಿಕ್ ಚೀಲದ ಮೇಲೆ ಒಣ ಹಾಕಲಾಗಿದ್ದು, ಮಾರಾಟ ಮಾಡಲು ರೆಡಿಯಾಗಿದ್ದ ಒಣ ಗಾಂಜಾ ಎಂಬ ಮಾಹಿತಿ ತಿಳಿದು ಬಂದಿದೆ.
ಕ್ಲಿಕ್ ಮಾಡಿ ಓದಿ: Death: ತೊಡರನಾಳು ಗೌಡ್ರು ಮಲ್ಲಿಕಾರ್ಜುನಪ್ಪ ನಿಧನ
ಅಬಕಾರಿ ಡಿಸಿ ಮಹದೇವ್ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳಾದ ವನಿತಾ ಮತ್ತು ನಾಗರಾಜ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ದಾಳಿ ಮಾಡಿದ ಸಮಯದಲ್ಲಿ ಮನೆಯಲ್ಲಿ ಯಾರ ಇಲ್ಲದ ಕಾರಣ ನ್ಯಾಯಾಧೀಶರ ಅನುಮತಿ ಮೇರೆಗೆ ಮನೆ ಬೀಗ ಹೊಡೆದು ಶೋಧಕಾರ್ಯ ನಡೆಸಲಾಗಿದೆ.
ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಲಿಕ್ ಮಾಡಿ ಓದಿ: ಅಡಿಕೆ ಧಾರಣೆ | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
