ಹೊಳಲ್ಕೆರೆ
ಜಾತ್ರೆಗಳು ಜಾಗೃತಿಯ ಪ್ರತೀಕ | ಶ್ರೀ ಶಾಂತವೀರ ಸ್ವಾಮೀಜಿ
CHITRADURGA NEWS | 22 MARCH 2025
ಹೊಳಲ್ಕೆರೆ: ಜಾತ್ರೆಗಳು ಜಾಗೃತಿಯ ಪ್ರತೀಕವಾಗಿದ್ದು, ಜಾತ್ರೆಯ ನೆಪದಲ್ಲಿ ಸಂಘಟನೆಯಾಬೇಕು, ಸಂಸ್ಕಾರವಂತರಾಗಬೇಕು, ಸಾಂಸ್ಕೃತಿಕ ರಾಯಬಾರಿಯಾಗಿ ನಾವೆಲ್ಲರೂ ಬೆಳೆಯಬೇಕು ಎಂದು ಕುಂಚಿಟಿಗ ಸಂಸ್ಥಾನದ ಶ್ರೀ ಶಾಂತವೀರ ಮಹಾಸ್ವಾಮೀಜಿ ಮಾತನಾಡಿದರು.
Also Read: ತಳ ಸಮುದಾಯ ಒಗ್ಗಟ್ಟಾಗಿದ್ದರೆ ಅಭಿವೃದ್ಧಿ ಸಾಧ್ಯ | ಈಶ್ವರಾನಂದಪುರಿ ಸ್ವಾಮಿಜಿ
ತಾಲೂಕಿನ ತಾಳಿಕಟ್ಟೆ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರಸ್ವಾಮಿ ತೋಪು ಜಾತ್ರೆ ಶುಕ್ರವಾರ ರಾತ್ರಿ 6ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದೆ ನಾವೆಲ್ಲ ಗಮನಿಸಿದಂತೆ ಹಳ್ಳಿಗಳಲ್ಲಿ ಮಳೆ, ಬೆಳೆ ಕೊರತೆ, ರೈತರ ಸಂತಸದ ಸಂಧರ್ಭದಲ್ಲಿ ಊರಿನ ದೇವರಿಗೆ ಪರೇವು ಮಾಡಲಾಗುತಿತ್ತು. ಆದರೆ ಈಗ ಪರೇವುಗಳು ಪಾರ್ಟಿಗಳಾಗಿ ಪರಿವರ್ತನೆಗೊಂಡಿದ್ದು, ಪ್ರತಿ ಹಳ್ಳಿಗಳಲ್ಲಿ ಬಾರ್, ರೆಸಾರ್ಟಗಳು ತಲೆ ಎತ್ತುತ್ತಿವೆ.
ಪರೇವು ಮಾಡುವಾಗ ಅಲ್ಲಿ ಜಾಗೃತಿ, ಕಾಳಜಿ, ಅಲೋಚನೆ ಇತ್ತು. ಆದರೆ ಪಾರ್ಟಿಯಲ್ಲೇನಿದೆ ಮೋಜು, ಮಸ್ತಿ, ಸಂಸಾರಗಳು ದಿವಾಳಿಯಾಗುತ್ತಿವೆ. ಯಾವುದರಿಂದ ಜೀವನ ವಿಕಾಸವಾಗುತ್ತೆ,ಯಾವುದರಿಂದ ಬದುಕಿನ ಜೀವನದ ವಿಕಾರವಾಗುತ್ತದೆ ಎಂಬ ಅರಿವು ನಮಗಿರಬೇಕು. ನಾವು ಮಾನವರಾಗದೆ ಇದ್ರೆ, ನಮ್ಮ ಶಿಕ್ಷಣ ಮೌಲ್ಯ, ನಮ್ಮ ಹಣದ ಮೌಲ್ಯವನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ ಎಂದರು.
Also Read: ತಾಳಿಕಟ್ಟೆ ಗ್ರಾಮದ ಬೀರಲಿಂಗೇಶ್ವರ ಸ್ವಾಮಿ ತೋಪು ಜಾತ್ರೆಯ 4ನೇ ದಿನದಲ್ಲಿ ಮಠಾಧೀಶರು ಭಾಗೀ
ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಮಾತನಾಡಿ, ತೋಪು ಜಾತ್ರೆ ಅದ್ಧೂರಿಯಾಗಿ ನಡೆಸಿದ್ದೀರಿ. ತೋಪು ಜಾತ್ರೆ ನೆನಪು ಶಾಶ್ವತವಾಗಿ ಉಳಿಯಬೇಕಾದರೆ. ಕನಕ ಗುರುಪೀಠದಲ್ಲಿ ಶೈಕ್ಷಣೀಕ ಕಟ್ಟಡಗಳ ನಿರ್ಮಾಣಕ್ಕೆ ನೀವೆಲ್ಲರೂ ಕೈಜೋಡಿಸಬೇಕು.
ನಿಮಗೆಲ್ಲ ನೃತ್ಯ, ಹಾಸ್ಯ, ಮನೋರಂಜನೆ ಎಷ್ಟು ಮುಖ್ಯವೋ ಅಗತ್ಯ ಜ್ಞಾನ ದಾಸೋಹ ಕೂಡ ಅಷ್ಟೆ ಮುಖ್ಯ. ಮಕ್ಕಳು ತನ್ನ ಹದಿನಾರನೇ ವಯಸ್ಸಿನಲ್ಲಿಯೇ ಮದ್ಯಪಾನ, ದೂಮಪಾನ, ಗುಟ್ಕಾಗಳ ದಾಸರಾಗುತಿದ್ದಾರೆ.
ಮಕ್ಕಳು ದುಶ್ಚಟಗಳಿಗೆ ಬಲಿಯಾಗುತ್ತಿರುವುದನ್ನು ಕಾಣುತಿದ್ದೇವೆ. ಪೋಷಕರಾದವರು ತಮ್ಮ ಮಕ್ಕಳು ಮನಸ್ಸು ಎತ್ತ ಸಾಗುತ್ತಿದೆ ಎಂಬುದನ್ನು ಗಮನಿಸಬೇಕಿದೆ. ಸಂಸ್ಕೃತಿ, ಸಂಯಮ, ಸದ್ಘುಣಗಳನ್ನು ಕಲಿಸಬೇಕಾದ ಅನಿವಾರ್ಯತೆ ಇದೆ ಎಂದರು.
Also Read: ನೀರು ಹಾಯಿಸಲು ಹೋಗಿದ್ದ ರೈತರ ಮೇಲೆ ಕರಡಿ ದಾಳಿ | ಗಂಭೀರ ಗಾಯ
ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಮಾತನಾಡಿ, ತ್ರಿಮೂರ್ತಿ ಸ್ವರೂಪಗಳನ್ನು ಆರಾಧಿಸುವ ಹಾಲುಮತ ಸಮಾಜ ಅತ್ಯಂತ ಶ್ರೇಷ್ಠವಾದದ್ದು, ಭಾರತೀಯ ಸಂಸ್ಕೃತಿಯಲ್ಲಿ ಜಾತ್ರೆ, ಹಬ್ಬಗಳು ನಾವೆಲ್ಲರೂ ಧಾರ್ಮಿಕವಾಗಿ, ಲೋಕಕಲ್ಯಾಣಕ್ಕಾಗಿ ಹಿರಿಯರು ಮಾಡಿರುವ ಆಚರಣೆಗಳು ಇವು ಅರ್ಥ ಪೂರ್ಣವಾಗಿರಬೇಕು ಎಂದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ನಂಬಿಕೆ, ವಿಶ್ವಾಸಕ್ಕೆ ಮತ್ತೊಂದು ಹೆಸರೇ ಹಾಲುಮತ, ಒಬ್ಬ ಕುರಿ ಕಾಯುವ ಮಗ ಈ ರಾಜ್ಯದ ದೊರೆಯಾಗಿರುವುದು ವಿಸ್ಮಯ, ದೇವರಾಜ್ ಅರಸ್ ಅವರ ಹೆಗ್ಗಳಿಕೆಯ ದಾಖಲೆಯನ್ನು ಮುರಿಯುವಂತಹ ವ್ಯಕ್ತಿ ಸಿದ್ದರಾಮಯ್ಯ. ದೇಶದ ಆರ್ಥಿಕ ತಜ್ಙ ಎಂದು ಕರೆಸಿಕೊಂಡ ಮನೊಮೋಹನ್ ಸಿಂಗ್ ಅವರನ್ನು ಹೊರತುಪಡಿಸಿದರೆ.
ಎರಡನೇ ಆರ್ಥಿಕ ತಜ್ಙ ಸಿದ್ದರಾಮಯ್ಯ ಎಂದರೆ ತಪ್ಪಾಗಲಾರದು. ಎಲ್ಲಾ ವರ್ಗದಲ್ಲಿಯೂ ಬಡವರಿದ್ದು, ಸರ್ವ ಜನಾಂಗದ ತೋಟವಾಗಿದ್ದಾರೆ ಎಂದರು.
Also Read: ಏಪ್ರಿಲ್ 13 | ಹಿರೇಗುಂಟನೂರು ದ್ಯಾಮಲಾಂಬ ಜಾತ್ರೆ
ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ರಾಜಕಾರಿಣಿಯಾದವರು ತಮ್ಮ ಶ್ರೇಯಸ್ಸಿಗಿಂತ ಜನರ ಶ್ರೇಯಸ್ಸನ್ನು ಬಯಸಬೇಕು. ಜಾತ್ರ ಆರಂಭದಿಂದ ಕಡಿಮೆ ಅವಧಿಯಲ್ಲಿ ಗ್ರಾಮದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ.
ಸಿದ್ದರಾಮಯ್ಯ ನವರು ನಾವು ಹತ್ತು ವರ್ಷ ಒಂದೇ ಪಕ್ಷದಲ್ಲಿದ್ದು, ಕೆಲಸ ಮಾಡಿದ್ದೇವೆ. ನನಗೆ ರಾಜಕೀಯ ಮೊದಲು ಗುರು ಸಿದ್ದರಾಮಯ್ಯ ಎಂದರೆ ತಪ್ಪಾಗಲಾರದು. ನಮ್ಮಿಬ್ಬರ ಉದ್ದೇಶ ಒಂದೇ ಅಭಿವೃದ್ದಿ, ಹಿಂದುಳಿದ ವರ್ಗಗಳ ಶ್ರೇಯಸ್ಸು, ಪ್ರತಿ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ ಎಂದರು.
Also Read: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ತರಿಕೆರೆ ಶಾಸಕ ಶ್ರೀನಿವಾಸ್, ಜಿಪಂ ಮಾಜಿ ಉಪಾಧ್ಯಕ್ಷ ಬಿ.ಗಂಗಾಧರ್, ತಾಪಂ ಮಾಜಿ ಸದಸ್ಯ ಆರ್. ಹಳ್ಳಪ್ಪ, ಎಂ.ಎಸ್.ನಾಗಪ್ಪ, ಎಪಿಎಂಸಿ ಮಾಜಿ ಸದಸ್ಯ ಗೋವಿಂದಪ್ಪ, ಅಬಕಾರಿ ಜಂಟಿ ಆಯುಕ್ತ ಟಿ.ನಾಗರಾಜ್, ಡಿವೈಎಸ್ಪಿ ಶೇಖರ್, ಕೆ.ಸೋಮಶೇಖರ್, ಗ್ರಾಪಂ ಅಧ್ಯಕ್ಷ ಬಸವರಾಜಪ್ಪ, ಮಾಜಿ ಅಧ್ಯಕ್ಷ ಡಿ.ಚಂದ್ರಪ್ಪ, ಜಿಪಂ ಮಾಜಿ ಸದಸ್ಯರು, ತಾಪಂ ಮಾಜಿ ಸದಸ್ಯರು, ಗ್ರಾಪಂ ಸದಸ್ಯರು, ಗುಡಿಗೌಡರು, ಕೋಲ್ಕಾರರು ಮತ್ತಿತರರಿದ್ದರು.