Connect with us

ತಾಳಿಕಟ್ಟೆ ಗ್ರಾಮದ ಬೀರಲಿಂಗೇಶ್ವರ ಸ್ವಾಮಿ ತೋಪು ಜಾತ್ರೆಯ 4ನೇ ದಿನದಲ್ಲಿ ಮಠಾಧೀಶರು ಭಾಗೀ 

ಹೊಳಲ್ಕೆರೆ

ತಾಳಿಕಟ್ಟೆ ಗ್ರಾಮದ ಬೀರಲಿಂಗೇಶ್ವರ ಸ್ವಾಮಿ ತೋಪು ಜಾತ್ರೆಯ 4ನೇ ದಿನದಲ್ಲಿ ಮಠಾಧೀಶರು ಭಾಗೀ 

CHITRADURGA NEWS | 20 MARCH 2025

ಹೊಳಲ್ಕೆರೆ: ತಾಲೂಕಿನ ತಾಳಿಕಟ್ಟೆ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಬೀರಲಿಂಗೇಶ್ವರ ಸ್ವಾಮಿ ( ಹಳ್ಳದ ಜಂಗಮ ) ತೋಪು ಜಾತ್ರೆಯ 4 ನೇ ದಿನವಾದ ಬುಧವಾರ ಕಾರ್ಯಕ್ರಮದಲ್ಲಿ ವಿವಿಧ ಮಠದ ಮಠಾಧೀಶರು ಭಾಗವಹಿಸಿದ್ದರು.

Also Read: ಅಪ್ಪರ್ ಭದ್ರಾ ಯೋಜನೆ | ಅನುದಾನ ಬಿಡುಗಡೆಗೆ ಸಂಸತ್‌ನಲ್ಲಿ ಗೋವಿಂದ ಕಾರಜೋಳ ಒತ್ತಾಯ

ಈ ವೇಳೆ ಸಾನಿದ್ಯ ವಹಿಸಿದ್ದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ಪಶುಪಾಲನೆ, ಕುರಿ ಕಾಯುವ ಕಾಯಕ ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿರುವ ಕುರುಬ ಸಮಾಜ ಆರ್ಥಿಕವಾಗಿ ಸಭಲರಾಗಿದ್ದಾರೆ, ಆದರೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದೆ ಎಂದು ಹೇಳಿದರು.

ಹಿಂದುಳಿದ ಈ ಕುರುಬ ಸಮಾಜವು ಶೈಕ್ಷಣಿಕವಾಗಿ ಪ್ರಬಲಗೊಳ್ಳಬೇಕಾದ ಅನಿವಾರ್ಯತೆ ಇದೆ. ಜಾತ್ರೆ , ಪರಿಸೆ, ಮಾರಿ ಹಬ್ಬಗಳನ್ನು ಅದ್ಧೂರಿಯಾಗಿ ಮಾಡುವ ನೆಪದಲ್ಲಿ ಹಣ ವ್ಯಯ ಮಾಡುವುದರಿಂದ ಬದುಕು ಕಷ್ಟಕ್ಕೆ ಸಿಲುಕುತ್ತದೆ.

ಸಮಯ ಮತ್ತು ಹಣದ ಮಹತ್ವವನ್ನು ಅರಿತು ಜನ ಬದುಕಬೇಕಿದೆ ತಾಳಿಕಟ್ಟೆಯು ಒಂದು ಕಲೆ, ಸಾಹಿತ್ಯ, ಸಾಂಸ್ಕೃತಿಕ, ಐತಿಹಾಸಿಕ ಮಹತ್ವವುಳ್ಳಂತಹ ಗ್ರಾಮವಾಗಿದ್ದು, ಜನರು ಇನ್ನಾದರು ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ ಜೀವನ ಸಾಗಿಸಬೇಕು. ಉಳಿತಾಯ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

Also Read: ಒಳಮೀಸಲು ವಿಳಂಬ ಸಹಿಸಲು ಆಗದು | ಎಚ್. ಆಂಜನೇಯ

ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮಿಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೀಡುವಷ್ಟು ಪ್ರಾತಿನಿಧ್ಯವನ್ನು ಶ್ರೀಗಳ ಆಶಿರ್ವಚನಗಳು, ಉಪನ್ಯಾಸಗಳು, ಚಿಂತನ-ಮಂತನಗಳಿಗೆ, ಚರ್ಚಾ ಕಾರ್ಯಕ್ರಮಗಳಿಗೆ ನೀಡುತ್ತಿಲ್ಲ. ಅಲ್ಲಿ ಜನರ ಕೊರತೆ ಎದ್ದು ಕಾಣುತ್ತದೆ. ಆಗಾಗಬಾದು ಎಂದರು.

ಕುರುಬರ ಸಂಸ್ಕೃತಿ, ಪರಂಪರೆ ಅತ್ಯಂತ ದೊಡ್ಡದು. ಅದನ್ನು ನಾವೆಲ್ಲರೂ ಆಸ್ವಾದಿಸಬೇಕು. ಆ ನಿಟ್ಟಿನಲ್ಲಿ ಉಪನ್ಯಾಸಕರು ತಿಳಿಸುವ ವಿಚಾರಧಾರೆಗಳನ್ನು ಮನನ ಮಾಡಿಕೊಳ್ಳಬೇಕು ಎಂದರು.

ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಭಾರತದ ಇತಿಹಾಸದಲ್ಲಿ ಭವ್ಯ ಪರಂಪರೆಯನ್ನು ಹೊಂದಿರುವಂತಹ ಸಮುದಾಯ ಯಾವುದಾದರೂ ಇದೆ ಎಂದರೆ ಅದು ಹಾಲುಮತ ಸಮುದಾಯ.

Also Read: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ? 

ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ನಂತರದಲ್ಲಿ ಇತಿಹಾಸದ ಪುಟಗಳಲ್ಲಿ ಈ ನೆಲಕ್ಕೆ, ಈ ಸಂಸ್ಕೃತಿಗೆ , ಜನರಿಗೆ ಎಲ್ಲಾ ರಂಗಗಳಲ್ಲಿಯೂ ಕೂಡ ಬಹುದೊಡ್ಡ ಕೊಡುಗೆ ಕೊಟ್ಟಿರುವಂತಹ ಸಮುದಾಯ ಹಾಲುಮತಸ್ಥ ಸಮುದಾಯ. ವಿಜಯನಗರ ಸಾಮ್ರಾಜ್ಯದಿಂದ ಹಿಡಿದು, ಉತ್ತರ ಭಾರತದ ಅಹಲ್ಯ ಬಾಯಿ ಹೋಳ್ಕರ್ ಅವರವರೆಗೆ ಚಿಂತನೆಯನ್ನು ಮಾಡಿದಾಗ ಬಹುದೊಡ್ಡ ತ್ಯಾಗ, ಬಲಿದಾನಗಳನ್ನು ನೀಡಿದ ಕೀರ್ತಿ ಹಾಲುಮತ ಸಮುದಾಯಕ್ಕೆ ಸಲ್ಲುತ್ತದೆ ಎಂದರು.

ಇದೇ ಸಂದರ್ಭದಲ್ಲಿ ವಿಚಾರ ಸಂಕಿರಣದಲ್ಲಿ ಲಿಂಗದಹಳ್ಳಿ ಹಾಲಪ್ಪ ಹಾಲು ಮತದ ಸಾಂಸ್ಕೃತಿಕ ಇತಿಹಾಸ ಕುರಿತು , ಹಂಪಿ ವಿಶ್ವವಿದ್ಯಾಲಯದ ಎಫ್ .ಟಿ. ಹಳ್ಳಿಕೆರೆ ತಾಳಿಕಟ್ಟೆಯ ಪರಿಸರದ ಶಾಸನ , ಶಿಲ್ಪಕಲೆ ಕುರಿತು, ವಡ್ಡಗೆರೆ ನಾಗರಾಜ್ ಹಾಲುಮತ ಮತ್ತು ಇತರೆ ಬುಡಕಟ್ಟುಗಳ ಕುರಿತು ಉಪನ್ಯಾಸ ನೀಡಿದರು.

Also Read: ಬೈಕ್‍ಗೆ ಲಾರಿ ಡಿಕ್ಕಿ | ಸ್ಥಳದಲ್ಲೇ ಪತಿ ಸಾವು, ಪತ್ನಿಗೆ ಗಾಯ

ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಮಾತನಾಡಿದರು.

ಮಾಜಿ ಸಚಿವ ರುದ್ರಪ್ಪ ಲಮಾಣಿ, ಅಬಕಾರಿ ಜಂಟಿ ಆಯುಕ್ತ ಟಿ.ನಾಗರಾಜಪ್ಪ, ಓಂಕಾರಯ್ಯ ಓಡೆಯರ್, ಗುಡಿಗೌಡ ಪುಟ್ಟಪ್ಪ, ಮಾಜಿ ಗುಡಿಗೌಡ ನಾಗರಾಜಪ್ಪ, ನಿವೃತ್ತ ಬಿಇಓ ಯು.ಬಸವರಾಜಪ್ಪ, ಡಿವೈಎಸ್ಪಿ ವಿ.ಶೇಖರಪ್ಪ, ಕೆ.ಸೋಮಶೇಖರಪ್ಪ ಮತ್ತಿತರರಿದ್ದರು.

ನಾಳೆ ತೋಪು ಜಾತ್ರೆಯಲ್ಲಿ: 

ಮಾ.21 ರಂದು ಬೆಳಗ್ಗೆ 9 ಗಂಟೆಗೆ ಸಾಮೂಹಿಕ ವಿವಾಹ ನಂತರ ದೇವರುಗಳಿಗೆ ಉಯ್ಯಾಲೆ ಸೇವೆ ಮತ್ತು ಓಕಳಿ ಸೇವೆ ನಡೆಯುವುದು.

ಮಧ್ಯಾಹ್ನ 2 ಗಂಟೆಗೆ ಧಾರ್ಮಿಕ ಕಾರ್ಯಕ್ರಮ : 

ಕನಕ ಗುರು ಪೀಠ ಕಾಗಿನೆಲೆ ಮಹಾ ಸಂಸ್ಥಾನದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳು , ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿಗಳು, ಕನಕ ಗುರು ಪೀಠ ಸಿಂಧನೂರು ಶಾಖಾ ಮಠದ ಸಿದ್ದರಾಮಾನಂದ ಪುರಿ ಸ್ವಾಮೀಜಿ, ಕನಕ ಗುರುಪೀಠ ಕೆ ಆರ್ ನಗರ ಶಾಖಾ ಮಠದ ಶಿವಾನಂದ ಪುರಿ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಸಂಸ್ಥಾನ ಮಠದ ಶ್ರೀ ಶಾಂತವೀರ ಮಹಾಸ್ವಾಮಿಗಳು , ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ, ಶಾಸಕ ಡಾ. ಎಂ ಚಂದ್ರಪ್ಪ ಮತ್ತಿತರರು ಭಾಗವಹಿಸಲಿದ್ದಾರೆ.

 ಸಂಜೆ 8 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ : 

ಜೀ ಕನ್ನಡ ಕಲರ್ಸ್ ಕನ್ನಡ ಮುಂತಾದ ಕಿರುತೆರೆಯ ಕಲಾವಿದರಿಂದ ಹಾಸ್ಯ, ನೃತ್ಯ, ಸಂಗೀತ ಸಂಜೆ ಕಾರ್ಯಕ್ರಮ ಹಾಗೂ ಕನ್ನಡ ಚಲನಚಿತ್ರ ನಟರಾದ ಯೋಗೇಶ್ ( ಲೂಸ್ ಮಾದ) ದುನಿಯಾ ವಿಜಯ್ ಭಾಗವಹಿಸಲಿದ್ದಾರೆ.

Click to comment

Leave a Reply

Your email address will not be published. Required fields are marked *

More in ಹೊಳಲ್ಕೆರೆ

To Top
Exit mobile version