ನಾಲ್ಕು ದಿನ ವಿದ್ಯುತ್‌ ವ್ಯತ್ಯಯ | ಯಾವ ದಿನಾಂಕ ಗಮನಿಸಿ

ವಿದ್ಯುತ್ ವ್ಯತ್ಯಯ

CHITRADURGA NEWS | 16 APRIL 2025

ಚಿತ್ರದುರ್ಗ: 66/11 ಕೆ.ವಿ ಹೆಚ್.ಡಿ.ಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹಾಲಿ ಅಸ್ತಿತ್ವದಲ್ಲಿರುವ ಕಾರಿಡಾರ್‌ನಲ್ಲಿ ದ್ವಿಮಾರ್ಗ ಟವರ್‍ಗಳಿಂದ ಅಸ್ತಿತ್ವದಲ್ಲಿರುವ ಏಕಮಾರ್ಗ ಟವರ್‍ಗಳನ್ನು ಬದಲಿಸುವ ಮೂಲಕ ಹೆಚ್.ಡಿ ಪುರ ಟ್ಯಾಪ್ ಪಾಯಿಂಟ್‍ನಿಂದ ಹೆಚ್.ಡಿ ಪುರ ವಿವಿ ಕೇಂದ್ರದ ನಡುವೆ 66/11 ಕೆವಿ ಹೆಚ್.ಡಿ ಪುರದಲ್ಲಿ ಲಿಲೋ ವ್ಯವಸ್ಥೆ ಒದಗಿಸಲು ಕೊಯೊಟ್ ಕಂಡಕ್ಟರ್‍ನೊಂದಿಗೆ 9.163 ಕಿಮೀ ದೂರಕ್ಕೆ ಹೆಚ್ಚುವರಿ 66 ಕೆವಿ ಸಕ್ರ್ಯೂಟ್ ಅನ್ನು ಒದಗಿಸಲು 66/11 ಕೆವಿ ಹೆಚ್.ಡಿ ಪುರ ವಿ.ವಿ ಕೇಂದ್ರಕ್ಕೆ ಮಾರ್ಗ ಮುಕ್ತತೆ ನೀಡಬೇಕಾಗಿದೆ.

ಈ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎಲ್ಲಾ 11 ಕೆ.ವಿ ಮಾರ್ಗಗಳಲ್ಲಿ ಇದೇ ಏಪ್ರಿಲ್ 17, 19, 21 ಮತ್ತು 23ರಂದು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಇದನ್ನೂ ಓದಿ: APMC: ಮಾರುಕಟ್ಟೆ ಧಾರಣೆ | ಇಂದಿನ ಸೂರ್ಯಕಾಂತಿ, ಶೇಂಗಾ ರೇಟ್ ಎಷ್ಟಿದೆ?

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: ತಾಳ್ಯ ಕಾವಲು, ಉಪ್ಪರಿಗೇನಹಳ್ಳಿ, ಬೂದಿಪುರ, ನಲ್ಲಿಕಟ್ಟೆ, ತಾಳ್ಯ, ಮತ್ತಿಘಟ್ಟ, ಕೆರೆಯಾಗಲಹಳ್ಳಿ, ಚೌಡಗೊಂಡನಹಳ್ಳಿ, ತೇಕಲವಟ್ಟಿ, ತೋಡರನಾಳ್, ಕೋಳಾಳ್, ಬಿ.ಆರ್ ಗುಡಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಜಿ.ತಿಮ್ಮರಾಯ ತಿಳಿಸಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

Share This Article
Leave a Comment

Leave a Reply

Your email address will not be published. Required fields are marked *

Exit mobile version