CHITRADURGA NEWS | 21 JUNE 2025
ಚಿತ್ರದುರ್ಗ: ಯೋಗಶಾಸ್ತ್ರದ ನಿರಂತರವಾದ ಅನುಷ್ಠಾನದಿಂದ ಜೀವನೋತ್ಸಾಹ, ಸಾಹಸ, ಧೈರ್ಯ, ಬುದ್ಧಿಶಕ್ತಿ, ಪರಾಕ್ರಮಗಳು ವರ್ಧಿಸುತ್ತವೆ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
Also Read: ಮಾಹಿತಿ ಹಕ್ಕು ಕಾಯ್ದೆ | ಶುಲ್ಕ ಪರಿಷ್ಕರಣೆಗೆ ಪ್ರಸ್ತಾವನೆ | ಆಯುಕ್ತ ರುದ್ರಣ್ಣ ಹರ್ತಿಕೋಟೆ
ಭೋವಿ ಗುರುಪೀಠದ ಎಸ್.ಜೆ.ಎಸ್ ಸಮೂಹ ಸಂಸ್ಥೆಗಳಿಂದ ನಡೆದ ಯೋಗ ದಿನಾಚರಣೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಯೋಗಶಾಸ್ತ್ರವು ಪ್ರಾಯೋಗಿಕವಾಗಿದ್ದು, ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ರಕ್ಷಣೆಯಲ್ಲಿ ಸಹಕಾರಿಯಾಗಿದೆ.
ಆಸನಗಳ ಅಭ್ಯಾಸವೊಂದೇ ಯೋಗವಲ್ಲ. ದೇಹದಲ್ಲಿರುವ ಸಪ್ತಧಾತುಗಳಾದ ರಸ, ರಕ್ತ, ಮಾಂಸ ಮೇಧ, ಅಸ್ತಿ, ಮಜ್ಜ ಮತ್ತು ವೀರ್ಯಗಳ ಅಸಮತೋಲನವನ್ನು ಹೋಗಲಾಡಿಸಿ ದೇಹಾರೋಗ್ಯ ಕಾಪಾಡುವುದು ಆಸನಗಳ ಗುರಿ.
ದೇಹದಲ್ಲಿರುವ ರೋಗಗಳ ನಿರ್ಮೂಲನ ಮತ್ತು ಆಗಾಮಿ ರೋಗಗಳ ಪ್ರತಿಬಂಧವು ಆಸನಾಭ್ಯಾಸದಿಂದ ಸಾಧ್ಯವಾಗುತ್ತದೆ. ಅಂತೆಯೇ ಪ್ರಾಣಾಯಾಮವು ಶ್ವಾಸೋಚ್ಛಾಸದ ಗತಿಯನ್ನು ನಿಯಂತ್ರಿಸಿ ಆಹಾರದ ಪಚನ ಕ್ರಿಯೆಯನ್ನು ಸರಿಪಡಿಸಿ ಚಂಚಲವಾದ ಚಿತ್ತವನ್ನು ನಿಶ್ಚಲಗೊಳಿಸುತ್ತದೆ.
Also Read: ನಾಳೆ ವಿದ್ಯುತ್ ವ್ಯತ್ಯಯ | ಚಿತ್ರದುರ್ಗ ಸೇರಿದಂತೆ ಈ ತಾಲೂಕಿನಲ್ಲಿ ಕರೆಂಟ್ ಇರಲ್ಲ..
ದೈನಂದಿನ ಜೀವನದಲ್ಲಿ ಯೋಗವು ಮನಸ್ಸನ್ನು ಶಾಂತ ಮತ್ತು ಸ್ಥಿರವಾಗಿರಿಸುತ್ತದೆ, ಒತ್ತಡವನ್ನು ತೆಗೆದುಹಾಕುತ್ತದೆ. ಆಲೋಚನಾ ಸಾಮರ್ಥ್ಯ, ಆತ್ಮವಿಶ್ವಾಸ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ನಿಯಮಿತ ಯೋಗ ಅಭ್ಯಾಸದಿಂದ ನಮ್ಮ ದೇಹ ಹಾಗೂ ಮನಸ್ಸಿಗೆ ಸಂತೋಷ-ಶಕ್ತಿಯನ್ನು ನೀಡುತ್ತದೆ. ಆಹಾರ ಮತ್ತು ನಿದ್ರೆಗಳಂತೆ ಈ ಅಭ್ಯಾಸಕ್ಕೂ ನಿಗದಿತವಾದ ಸಮಯವನ್ನು ಮೀಸಲಿಡುವುದು ಅಗತ್ಯ ಎಂದು ಹೇಳಿದರು.
ಸಂಸ್ಥೆಯ ಮುಖ್ಯ ಶಿಕ್ಷಕರಾದ ಶ್ರೀಧರ, ದಿನೇಶ, ಎಸ್ ಜೆ ಎಸ್ ಸಮೂಹ ಸಂಸ್ಥೆಗಳ ಶಿಕ್ಷಕರು, ಶಿಕ್ಷಕೇತರ ಸಿಬ್ಬಂಧಿ ಪೋಷಕರು ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

