
ಚಿತ್ರದುರ್ಗ ನ್ಯೂಸ್.ಕಾಂ: ಚಿತ್ರದುರ್ಗ ನಗರವನ್ನು ಬೆಚ್ಚಿ ಬೀಳಿಸಿರುವ ಅಸ್ಥಿ ಪಂಜರದ ಮಾದರಿಯಲ್ಲಿ ಮೃತ ದೇಹಗಳ ಪತ್ತೆ ಪ್ರಕರಣ ಬಗೆದಷ್ಟು ಅಚ್ಚರಿಗಳ ಆಗರವಾಗುತ್ತಿದೆ.
ಸುಮಾರು ಮೂರ್ನಾಲ್ಕು ವರ್ಷಗಳಿಂದ ಮನೆಯ ಬಾಗಿಲು ತೆಗೆದಿಲ್ಲ. ಇಲ್ಲಿರುವವರು ಮೃತಪಟ್ಟು ಸುಮಾರು 2-3 ವರ್ಷ ಕಳೆದಿರಬಹುದು ಎಂದು ಅಂದಾಜಿಸಲಾಗುತ್ತಿದೆ.
ಈ ವಿಚಾರ ಬೆಳಕಿಗೆ ಬಂದ ನಂತರ ಪೊಲೀಸರು ಮನೆಯನ್ನು ಪ್ರವೇಶಿಸಿದಾಗ ಹಲವು ಸಂಗತಿಗಳು ಕಂಡು ಬಂದಿವೆ.
ಇಡೀ ಮನೆ ಹಸ್ತವ್ಯಸ್ತವಾಗಿದೆ. ಎರಡು ಬೆಡ್‍ಗಳ ಮೇಲೆ ಎರಡು ಮೃತ ದೇಹವಿದೆ. ಪಕ್ಕದಲ್ಲೇ ಇರುವ ಪ್ಯಾಸೇಜ್‍ನಲ್ಲಿ ಮತ್ತೊಂದು ದೇಹವಿದೆ. ರೂಮಿನ ಒಳಗೆ ಮತ್ತೊಂದು ಬಾಡಿ ಇರುವುದಾಗಿ ತಿಳಿದು ಬಂದಿದೆ.
ಇದನ್ನೂ ಓದಿ: ಜೈಲು ರಸ್ತೆ ಬಳಿ ಮನೆಯಲ್ಲಿ ಐದು ಜನರ ನಿಗೂಢ ಸಾವಿನ ಕುರಿತು ದೂರು ದಾಖಲು
ಪೊಲೀಸರು ಮನೆ ಬಾಗಿಲು ಪ್ರವೇಶಿಸುವಾಗ ಬಾಗಿಲ ಬಳಿಯಲ್ಲೇ ಒಂದು ತಲೆ ಬುರುಡೆ ಪತ್ತೆಯಾಗಿದೆ.
ಇಡೀ ಮನೆಯಲ್ಲಿ ಯಾವ ವಸ್ತು ಕೂಡಾ ಇಟ್ಟ ಜಾಗದಲ್ಲಿ ಇಲ್ಲ. ಇಡೀ ಮನೆ ಚೆಲ್ಲಾಡಿದಂತೆ ಇದೆ. ಕಳ್ಳತನದ ಪ್ರಯತ್ನ ನಡೆದಿತ್ತೇ ಅಥವಾ ಸಾಯುವ ಮೊದಲೇ ಮನೆಯಲ್ಲಿದ್ದವರೇ ಹೀಗೆ ಮಾಡಿಕೊಂಡಿದ್ದಾರಾ ಎನ್ನುವ ಅನುಮಾನವಿದೆ.
ಮನೆಯಲ್ಲಿ ಔಷಧಿ, ಮಾತ್ರೆ, ವೀಲ್ ಚೇರ್, ಆಕ್ಸಿಜನ್ ಸಿಲಿಂಡರ್ ಕೂಡಾ ಇರುವುದಾಗಿ ಮಾಹಿತಿ ಸಿಕ್ಕಿದೆ. ಮನೆಯ ಹಿಂದಿನ ಬಾಗಿಲು ತೆರೆದಿತ್ತು ಎನ್ನಲಾಗಿದೆ.
ಇದರಿಂದ ಕೋವಿಡ್ ವೇಳೆ ಮೃತಪಟ್ಟಿದ್ದಾರಾ ಅಥವಾ ಅದಕ್ಕೂ ಮೊದಲೇ ಅವಘಡ ನಡೆದಿದೆಯೇ ಎನ್ನುವ ಬಗ್ಗೆ ತನಿಖೆಯ ನಂತರ ಮಾಹಿತಿ ಲಭ್ಯವಾಗಬೇಕಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

