
CHITRADURGA NEWS | 14 AUGUST 2024
ಚಿತ್ರದುರ್ಗ: ಬುಧವಾರ ಸುರಿದ ಮಳೆ ವಿವರ (Rain Report) ದನ್ವಯ ಚಿತ್ರದುರ್ಗ ತಾಲ್ಲೂಕಿನಲ್ಲಿ 53 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯಲ್ಲಿ ಸುರಿದ ಅಧಿಕ ಮಳೆಯಾಗಿದೆ.

ಚಳ್ಳಕೆರೆ ತಾಲ್ಲೂಕಿನಲ್ಲಿ 25.6 ಮಿ.ಮೀ, ಹಿರಿಯೂರು ತಾಲ್ಲೂಕು 15.4 ಮಿ.ಮೀ, ಹೊಳಲ್ಕೆರೆ ತಾಲ್ಲೂಕು 45.6 ಮಿ.ಮೀ, ಹೊಸದುರ್ಗ ತಾಲ್ಲೂಕು 21.4 ಮಿ.ಮೀ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 32.3 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ: ತಡರಾತ್ರಿ ಸುರಿದ ಭಾರೀ ಮಳೆ | ತುಂಬಿ ಹರಿಯುತ್ತಿರುವ ಗುಂಡಿಹಳ್ಳ
ಹೋಬಳಿವಾರು ಮಳೆ ವಿವರ: ಚಳ್ಳಕೆರೆಯಲ್ಲಿ 17.5 ಮಿ.ಮೀ, ನಾಯಕನಹಟ್ಟಿ 36 ಮಿ.ಮೀ, ಪರಶುರಾಂಪುರ 15.8 ಮಿ.ಮೀ, ತಳಕು 20.3 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗದಲ್ಲಿ 36.4 ಮಿ.ಮೀ, ಭರಮಸಾಗರ 24.1 ಮಿ.ಮೀ, ಹಿರೇಗುಂಟನೂರು 37.9 ಮಿ.ಮೀ, ತುರುವನೂರು 37.9 ಮಿ.ಮೀ ಮಳೆಯಾಗಿದೆ.
ಹಿರಿಯೂರಿನಲ್ಲಿ 12 ಮಿ.ಮೀ, ಐಮಂಗಲ 16.2 ಮಿ.ಮೀ, ಧರ್ಮಪುರ 8.8 ಮಿ.ಮೀ, ಜೆ.ಜೆ.ಹಳ್ಳಿ 4.4 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ: ಬಟ್ಟೆ ಅಂಗಡಿಗೆ ನುಗ್ಗಿದ ಮಳೆ ನೀರು | ಒದ್ದೆ, ಮುದ್ದೆಯಾದ ಬಟ್ಟೆಗಳು
ಹೊಳಲ್ಕೆರೆಯಲ್ಲಿ 33.5 ಮಿ.ಮೀ, ಬಿ.ದುರ್ಗ 40.1 ಮಿ.ಮೀ, ರಾಮಗಿರಿ 22.3 ಮಿ.ಮೀ, ತಾಳ್ಯ 27 ಮಿ.ಮೀ ಮಳೆಯಾಗಿದೆ.
ಹೊಸದುರ್ಗದಲ್ಲಿ 23.1 ಮಿ.ಮೀ, ಮಾಡದಕೆರೆ 19.5 ಮಿ.ಮೀ, ಮತ್ತೋಡು 9.4 ಮಿ.ಮೀ, ಶ್ರೀರಾಂಪುರ 5.7 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮುರುನಲ್ಲಿ 27.7 ಮಿ.ಮೀ ಹಾಗೂ ದೇಮಸಮುದ್ರದಲ್ಲಿ 33.7 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ: ವಿವಿ ಸಾಗರ ಡ್ಯಾಂ ಎಷ್ಟು ಸುರಕ್ಷಿತ | ತಪಾಸಣೆ ನಡೆಸಿದ ಅಧಿಕಾರಿಗಳು ಏನು ಹೇಳಿದ್ರು
ಬುಧವಾರ ಸುರಿದ ಮಳೆಗೆ ಚಳ್ಳಕೆರೆ ತಾಲ್ಲೂಕಿನಲ್ಲಿ 4 ಮನೆಗಳು ಭಾಗಶಃ ಹಾನಿಯಾಗಿವೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 7 ಮನೆಗಳಿಗೆ ನೀರು ನುಗ್ಗಿದ ಪ್ರಕರಣಗಳು ವರದಿಯಾಗಿದ್ದು, ಚಿತ್ರದುರ್ಗ ತಾಲ್ಲೂಕಿನಲ್ಲಿ 14 ಮನೆಗಳು ಭಾಗಶಃ ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ವರದಿ ತಿಳಿಸಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
