CHITRADURGA NEWS | 24 AUGUST 2024
ಮೇಷ ರಾಶಿ: ಕುಟುಂಬದೊಂದಿಗೆ ತೀರ್ಥ ಯಾತ್ರೆ ತೆರಳುವ ಬಗ್ಗೆ ಆಲೋಚನೆ ಮಾಡುವಿರಿ. ಹೆಂಡತಿ, ಮಕ್ಕಳೊಂದಿಗೆ ಸಂತಸದ ಸಮಯ ಕಳೆಯುವಿರಿ. ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವಕಾಶಗಳು ಹುಡುಕಿ ಬರಲಿವೆ.
ವೃಷಭ ರಾಶಿ: ಮನೆ ಕಟ್ಟುವ ನಿಮ್ಮ ಯೋಚನೆಗೆ ಸಹೋಧರರಿಂದ ಸಹಕಾರ ಸಿಗಲಿದೆ. ಶೀಘ್ರದಲ್ಲೇ ಯೋಜನೆಯೊಂದನ್ನು ಕಾರ್ಯಗತಗೊಳಿಸುವ ನಿಮ್ಮ ಯೋಚನೆ ಕನಸಾಗಿಯೇ ಉಳಿಯಲಿದೆ.
ಮಿಥುನ ರಾಶಿ: ನಿಮ್ಮ ಪ್ರಯತ್ನ ಬಲಕ್ಕೆ ಖಂಡಿತ ಯಶಸ್ಸು ಸಿಗಲಿದೆ. ಆದರೆ, ಮೇಲಾಧಿಕಾರಿಗಳಿಂದ ಕಿರುಕುಳ ಇದ್ದೇ ಇದೆ. ಧೀರ್ಘ ಕಾಲದ ನಂತರ ಮನೆಗೆ ಸಹೋಧರನ ಆಗಮನವಾಗಲಿದೆ.
ಕಟಕ ರಾಶಿ: ನ್ಯಾಯಾಂಗ ಇಲಾಖೆಯಲ್ಲಿರುವವರಿಗೆ ಸೌಲಭ್ಯ ದೊರೆಯಲಿದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ನಿಷ್ಠೆ, ಪ್ರಾಮಾಣಿಕತೆಗೆ ಗೌರವಾಧರಗಳು ದೊರೆಯಲಿವೆ. ರಾಜಕೀಯ ವಿಭಾಗದಲ್ಲಿ ನಿಮ್ಮ ಸೇವೆ ಮನಸ್ಸಿಗೆ ತೃಪ್ತಿ ನೀಡಲಿದೆ.
ಸಿಂಹ ರಾಶಿ: ಬದುಕನ್ನು ಅರ್ಥಪೂರ್ಣವಾಗಿ ನಡೆಸುವ ಆಲೋಚನೆ ರೂಢಿಸಿಕೊಳ್ಳಿ. ಶೈಕ್ಷಣಿಕ ಕ್ಷೇತ್ರದಲ್ಲಿರುವವರಿಗೆ ಅಧಿಕ ಒತ್ತಡ. ಶಿಕ್ಷಣ ರಂಗದಲ್ಲಿ ಉತ್ತಮ ಹೆಸರು ಸಂಪಾದಿಸುವಿರಿ.
ಕನ್ಯಾ ರಾಶಿ: ನಿರುದ್ಯೋಗಿಗಳಿಗೆ ಖಾಸಗಿ ಉದ್ಯೋಗ ದೊರೆಯಲಿದೆ. ಉದ್ಯೋಗ ಬದಲಾವಣೆಗೂ ಪೂರಕ ಸನ್ನಿವೇಶ ಒದಗಿ ಬರಲಿದೆ. ವಿದೇಶದಲ್ಲಿ ಉದ್ಯೋಗಕ್ಕೂ ಅರ್ಜಿ ಹಾಕಬಹುದು.
ಇದನ್ನೂ ಓದಿ: ಕೋರ್ಟ್ ಆವರಣದಲ್ಲಿ ಆರೋಪಿ ಹೈಡ್ರಾಮ | ಕಿಟಕಿ ಗುದ್ದಿದ ಸಮ್ಮು
ತುಲಾ ರಾಶಿ: ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ನಿಮ್ಮ ಹಠಮಾರಿ ಸ್ವಭಾವ ಕಡಿಮೆ ಮಾಡಿಕೊಂಡರೆ ಅಭಿವೃದ್ಧಿ ಸಾಧ್ಯ. ವೃತ್ತಿ ಬದುಕಿನ ಅಭಿವೃದ್ಧಿ ಮನಸ್ಸಿಗೆ ಸಮಾಧಾನ ನೀಡಲಿದೆ.
ವೃಶ್ಚಿಕ ರಾಶಿ: ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಗೊಂದಲ ಕಾಡಲಿದೆ. ಮದುವೆಯ ತೀರ್ಮಾನ ಮಾಡಿದವರು ಮನಸ್ಸಿನಲ್ಲಿ ಗೊಂದಲ ಇಟ್ಟುಕೊಳ್ಳಬಾರದು. ನಿಮ್ಮ ಶತೃಗಳ ವಿರುದ್ಧ ಜಯವಿದೆ.
ಧನು ರಾಶಿ: ಸರ್ಕಾರದಿಂದ ಅನುಕೂಲವಿದೆ. ಸರ್ಕಾರಿ ಉದ್ಯೋಗದಲ್ಲಿರುವವರು ಮುಂಬಡ್ತಿ ಹೊಂದಲು ತಯಾರಿ ಆರಂಭಿಸಿ. ಸಂಘ, ಸಂಸ್ಥೆಗಳ ಹಣಕಾಸಿನ ವ್ಯವಹಾರ ಯಶಸ್ವಿಯಾಗಿ ನಿಭಾಯಿಸುವಿರಿ.
ಮಕರ ರಾಶಿ: ನಿಮ್ಮ ಪಿತ್ರಾರ್ಜಿತ ಆಸ್ತಿತ ವಿವಾದಗಳು ಮಾತುಕತೆ ಮೂಲಕ ಬಗೆಹರಿಯಲಿವೆ. ಮನಸ್ಸಿಗೆ ಹಿತವಾಗುವುದು. ಪಾಲುದಾರಿಕೆಯೊಂದಿಗೆ ವ್ಯವಹಾರ ಅನಿವಾರ್ಯ.
ಕುಂಭ ರಾಶಿ: ನೀವು ಕೊಟ್ಟ ಸಾಲ ಹಿಂದಿರುಗಲಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು. ಸುಗಂಧ ದ್ರವ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಯಶಸ್ಸು ಪ್ರಾಪ್ತಿಯಾಗಲಿದೆ.
ಮೀನಾ ರಾಶಿ: ನೀವು ಸೇವಿಸುವ ಆಹಾರದಿಂದಾಗಿ ಆರೋಗ್ಯ ಹದಗೆಡಬಹುದು. ನ್ಯಾಯಾಲಯ, ಸರ್ಕಾರಿ ಕಚೇರಿ ಕೆಲಸಗಳು ಸಲೀಸಾಗಿ ಸಾಗಲಿವೆ

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
