
CHITRADURGA NEWS | 13 MARCH 2024
ಚಿತ್ರದುರ್ಗ: ಕತ್ತಲ ರಾತ್ರಿ…ಹೆಗಲ ಮೇಲೆ ಬಂದೂಕು..ಕೈಯಲ್ಲಿ ಉದ್ದನೆಯ ಲಾಠಿ ಹೋಲುವ ಕೋಲು…ತಲೆಗೆ ಟಾರ್ಚ್.. ಇದು ಸಿನಿಮಾದ ದೃಶ್ಯವಲ್ಲ. ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆಯಲ್ಲಿ ರಾತ್ರಿ ವೇಳೆ ಆತಂಕ ಮೂಡಿಸಿರುವ ವ್ಯಕ್ತಿಗಳ ಸಂಚಾರ.
ಸಿರಿಗೆರೆ ಸಮೀಪದ ಲಕ್ಷ್ಮೀಸಾಗರ ರಾಷ್ಟ್ರೀಯ ಹೆದ್ದಾರಿ 48ರ ಸಮೀಪದ ಬಳ್ಳಿಗಟ್ಟೆ ಗ್ರಾಮದ ತೋಟದ ಆಸುಪಾಸಿನಲ್ಲಿ ರಾತ್ರಿ ವೇಳೆ ಬಂದೂಕುಧಾರಿಗಳು ಓಡಾಡುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.
ಬಳಿಗಟ್ಟೆ ಗ್ರಾಮದ ಸಮೀಪದಲ್ಲಿ ಬೆಂಗಳೂರಿನಲ್ಲಿ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ರಾಜಪ್ಪ ಅವರ ತೋಟವಿದೆ. ಈ ತೋಟ ನೋಡಿಕೊಳ್ಳಲು ಅಜ್ಜಿಯೊಬ್ಬರನ್ನು ಅವರು ನೇಮಿಸಿದ್ದು, ತೋಟದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ತೋಟದ ಸುತ್ತ ಜಾಲಿ ಮುಳ್ಳು ಬೆಳೆದಿದ್ದು, ಓಡಾಡುವುದೇ ಕಷ್ಟ.
ಕ್ಲಿಕ್ ಮಾಡಿ ಓದಿ: https://chitradurganews.com/victory-yatra-of-karataka-damanaka/
ಇಂತಹ ಜಾಗದಲ್ಲಿ ಸೋಮವಾರ ರಾತ್ರಿ 5 ಜನ ಆಗಂತುಕರು ಈ ದಾರಿಯಲ್ಲಿ ಓಡಾಡಿರುವುದು ತೋಟದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಆಗಂತುಕರು ತಲೆಗೆ ಟಾರ್ಚ್ ಕಟ್ಟಿಕೊಂಡಿದ್ದರೆ, ಈ ಪೈಕಿ ಒಬ್ಬನು ಹೆಗಲ ಮೇಲೆ ಬಂದೂಕು ಹೊತ್ತಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಉಳಿದವರು ಉದ್ದನೆಯ ಲಾಠಿ ಹಿಡಿದು ಓಡಾಡುತ್ತಿದ್ದಾರೆ.
ಕ್ಲಿಕ್ ಮಾಡಿ ಓದಿ: https://chitradurganews.com/former-mp-bn-chandrappa-is-upset/
ಈ ವಿಷಯ ತಿಳಿದ ತಕ್ಷಣ ಭರಮಸಾಗರ ಪೊಲೀಸ್ ಠಾಣೆಗೆ ವಿಜಾಪುರ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೇತ್ತ ಪೊಲೀಸ್ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ರಾತ್ರಿ ಓಡಾಡಿದವರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ ಅವರು ಸುತ್ತಮುತ್ತಲಿನ ಗ್ರಾಮದ ಜನರನ್ನು ಹೋಲುತ್ತಿಲ್ಲ ಎಂಬುದು ಆತಂಕಕ್ಕೆ ಕಾರಣವಾಗಿದೆ. ರಾತ್ರಿ ವೇಳೆಯಲ್ಲಿ ಪ್ರಾಣಿ ಪಕ್ಷಿಗಳ ಬೇಟೆಗಾಗಿ ಬಂದಿರಬಹುದು ಎಂದು ಶಂಕಿಸಲಾಗಿದೆ ಎನ್ನುತ್ತಾರೆ ಭರಮಸಾಗರ ಠಾಣೆಯ ಇನ್‌ಸ್ಪೆಕ್ಟರ್ ರವಿನಾಯಕ್.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

