CHITRADURGA NEWS | 02 JULY 2025
ಚಿತ್ರದುರ್ಗ: ನಂದಿ ಬೆಟ್ಟದಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಬಂಪರ್ ಕೊಡುಗೆ ಲಭಿಸಿದೆ.
ಚಳ್ಳಕೆರೆ ಶಾಸಕರಾದ ಟಿ.ರಘುಮೂರ್ತಿ ಅವರ ಅಭಿವೃದ್ಧಿಯ ಹಾದಿಗೆ ಮತ್ತಷ್ಟು ಮೈಲುಗಲ್ಲುಗಳು ಈ ಮೂಲಕ ಸೇರ್ಪಡೆಯಾಗುತ್ತಿವೆ.
ಇದನ್ನೂ ಓದಿ: ಚಳ್ಳಕೆರೆ ನಗರಸಭೆ ಚುನಾವಣೆ | ಕಾಂಗ್ರೆಸ್ನ ಶಿಲ್ಪ ಮುರಳಿ ಅವಿರೋಧ ಆಯ್ಕೆ
ನಂದಿ ಬೆಟ್ಟದಲ್ಲಿ ನಡೆದ ಸಂಪುಟ ಸಭೆಯಲ್ಲಿ ಚಳ್ಳಕೆರೆ ತಾಲೂಕಿಗೆ ಮೂರು ಬ್ಯಾರೇಜ್ಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ.
ಚಳ್ಳಕೆರೆ ತಾಲೂಕಿನ ಗೋಸಿಕೆರೆ ಗ್ರಾಮದ ಸಮೀಪ ವೇದಾವತಿ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ 34.50 ಕೋಟಿ ವೆಚ್ಚದ ಕಾಮಗಾರಿ ಇದಾಗಿದೆ.
ಇದನ್ನೂ ಓದಿ: ಬೆಳೆ ಸಮೀಕ್ಷೆ | ರೈತರೇ Mobile App ಮೂಲಕ ಮಾಹಿತಿ ಅಪ್ಲೋಡ್ ಮಾಡಬಹುದು | ಅದು ಹೇಗೆ ಎಂದು ತಿಳಿಯಿರಿ

ಇದರಿಂದ ಬ್ಯಾರೇಜ್ ಸುತ್ತಮುತ್ತಲಿನ ವಡೇರಹಳ್ಳಿ, ಬೊಂಬೇರಹಳ್ಳಿ, ಕಸ್ತೂರಿ ತಿಮ್ಮನಹಳ್ಳಿ, ದ್ಯಾವರಹಳ್ಳಿ, ದೇವರ ಮರಿಕುಂಟೆ ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ, ಸಂಪರ್ಕ, ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಅನುಕೂಲವಾಗಲಿದೆ.
ತೊರೆಬೀರೆನಹಳ್ಳಿ ಮತ್ತು ಬೆಳಗೆರೆ ಗ್ರಾಮಗಳ ನಡುವೆ ವೇದಾವತಿ ನದಿಗೆ ಅಡ್ಡವಾಗಿ 28 ಕೋಟಿ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಸಂಪುಟ ನಿರ್ಣಯಿಸಿದೆ.
ಇದನ್ನೂ ಓದಿ: ಹೊಸದುರ್ಗಕ್ಕೆ ನೀರು ಹರಿಸಲು IISC ಗ್ರೀನ್ ಸಿಗ್ನಲ್ | ನಾಲೆ, ಜಲಾಶಯಕ್ಕೆ ತೊಂದರೆ ಇಲ್ಲ
ಇದರಿಂದ ನಾರಾಯಣಪುರ, ಕೋನಿಗರಹಳ್ಳಿ, ರಂಗನಾಥಪುರ ಗ್ರಾಮಗಳ ವ್ಯಾಪ್ತಿಗೆ ನೀರಾವರಿ ಸೌಲಭ್ಯ ಹಾಗೂ ಅಂತರ್ಜಲ ಹೆಚ್ಚಳಕ್ಕೆ ಅನುಕೂಲವಾಗಲಿದೆ.
ಚಳ್ಳಕೆರೆ ತಾಲೂಕು ಮೊಳಕಾಲ್ಮೂರು ಮತಕ್ಷೇತ್ರ ವ್ಯಾಪ್ತಿಯ ಗುಡಿಹಳ್ಳಿ ಮತ್ತು ತಪ್ಪಗೊಂಡನಹಳ್ಳಿ ನಡುವೆ ವೇದಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಗೆ 31.40 ಕೋಟಿ ರೂ. ಮೊತ್ತದ ಯೋಜನಾ ವರದಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಇದನ್ನೂ ಓದಿ: ಫಸಲ್ ಭೀಮಾ ಯೋಜನೆ | ನೋಂದಣಿ ಆರಂಭ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಂದಿ ಬೆಟ್ಟದಲ್ಲಿ ನಡೆದ ಸಚಿವ ಸಂಪುಟದ ಸಭೆ ಈ ಮೂಲಕ ಚಿತ್ರದುರ್ಗ ಜಿಲ್ಲೆಯ ಗಡಿ ಭಾಗಕ್ಕೆ ಬಂಪರ್ ಕೊಡುಗೆ ನೀಡಿದಂತಾಗಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

