Connect with us

ಕೋಟೆನಾಡಿನ ಜನರ ಅಭಿಮಾನದ ಸಂಗತಿ | ಚಂದ್ರಯಾನಕ್ಕೂ-ಚಿತ್ರದುರ್ಗಕ್ಕೂ ಇರುವ ನಂಟೇನು ಗೊತ್ತಾ..?

ಚಂದ್ರನ ಅಂಗಳಕ್ಕೆ ಲ್ಯಾಂಡರ್ ಇಳಿಸುವ ತರಬೇತಿ ೨೦೧೭ರಲ್ಲಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿತ್ತು

ಚಳ್ಳಕೆರೆ

ಕೋಟೆನಾಡಿನ ಜನರ ಅಭಿಮಾನದ ಸಂಗತಿ | ಚಂದ್ರಯಾನಕ್ಕೂ-ಚಿತ್ರದುರ್ಗಕ್ಕೂ ಇರುವ ನಂಟೇನು ಗೊತ್ತಾ..?

ಚಿತ್ರದುರ್ಗ ನ್ಯೂಸ್..
ಚಂದಿರನ ಅಂಗಳದಲ್ಲಿ ಲ್ಯಾಂಡರ್ ಇಳಿಸುವ ಪ್ರಕ್ರಿಯೆ ಚಂದ್ರಯಾನ-3 ರಲ್ಲಿ ಅತ್ಯಂತ ಮಹತ್ವದ ಪ್ರಕ್ರಿಯೆ. ಹೀಗೆ ಚಂದ್ರನ ಅಂಗಳಕ್ಕೆ ಲ್ಯಾಂಡರ್ ಇಳಿಸುವ ತರಬೇತಿ 2017ರಲ್ಲಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿತ್ತು ಎನ್ನುವುದು ಹೆಮ್ಮೆಯ ಸಂಗತಿ.

ಹೌದು, ಚಳ್ಳಕೆರೆ ತಾಲೂಕಿನ ದೊಡ್ಡಉಳ್ಳಾರ್ತಿ ಬಳಿ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) 473 ಎಕರೆ ಪ್ರದೇಶದಲ್ಲಿ ನೆಲೆನಿಂತಿದೆ.

ಈ ಪ್ರದೇಶದಲ್ಲಿ ಇಸ್ರೋ ವಿಜ್ಞಾನಿಗಳು ಚಂದ್ರನ ಮೇಲ್ಮೈ ಹೋಲುವಂತೆ ಭೂಮಿಯನ್ನು ಹದಗೊಳಿಸಿ, ಕುಳಿಗಳನ್ನು ನಿರ್ಮಿಸಿ ಅದರಲ್ಲಿ ಲ್ಯಾಂಡರ್ ಇಳಿಸಿ, ಅದರೊಳಗಿನಿಂದ ಪುಟಾಣಿ ರೋವರ್ ಅನ್ನು ಓಡಾಡಿಸಿದ್ದರು. ಚಂದ್ರನ ಮೇಲ್ಮೈ ಹೋಲುವ ಮಣ್ಣನ್ನು ತಮಿಳುನಾಡಿನ ಸೇಲಂನಿಂದ ತಂದು ಇಲ್ಲಿ ಹರಡಿಸಲಾಗಿತ್ತು. ಚಂದ್ರಯಾನ-3 ಸತತ 4 ವರ್ಷಗಳ ಪರಿಶ್ರಮವಾಗಿದೆ. ಇದಕ್ಕೆ ಪೂರಕವಾಗಿ, ಚಳ್ಳಕೆರೆ ತಾಲೂಕಿನಲ್ಲಿರುವ ದೊಡ್ಡುಳ್ಳಾರ್ತಿ ಚಂದ್ರಯಾನಕ್ಕೆ ಪೂರಕವಾಗಿ ಪ್ರಯೋಗಶಾಲೆಯಾಗಿತ್ತು ಎನ್ನುವುದು ಇಡೀ ಚಿತ್ರದುರ್ಗ ಹೆಮ್ಮೆಪಡುವ ಸಂಗತಿಯಾಗಿದೆ.

ಇದನ್ನೂ ಓದಿ: ಕೆನರಾ ಬ್ಯಾಂಕ್‍ನಿಂದ ವಿದ್ಯಾರ್ಥಿ ವೇತನ: ವಿದ್ಯಾಜ್ಯೋತಿ ಯೋಜನೆಯಡಿ 2.77 ಲಕ್ಷ ರೂ. ವಿತರಣೆ

ಇಸ್ರೋ ಮತ್ತು ಇಂಡಿಯಾದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಯಶಸ್ವಿಯಾಗಿದೆ. ವಿಕ್ರಂ ಸಾಫ್ಟ್ ಲ್ಯಾಂಡಿಂಗ್ ಆಗುವ ಮೂಲಕ ಇಡೀ ಯೋಜನೆಗೆ ಗೆಲುವು ಸಿಕ್ಕಿದೆ. ಚಂದಿರನ ಅಂಗಳದಲ್ಲಿ ವಿಕ್ರಂ ಲ್ಯಾಂಡರ್ ನಿಧಾನವಾಗಿ ಇಳಿಯುವ ಪ್ರಕ್ರಿಯೆ ಇಡೀ ಜಗತ್ತಿನ ಗಮನ ಸೆಳೆದಿತ್ತು.

Click to comment

Leave a Reply

Your email address will not be published. Required fields are marked *

More in ಚಳ್ಳಕೆರೆ

To Top
Exit mobile version