ತಾಲೂಕು
ಚಿತ್ರದುರ್ಗ-ಹಿರಿಯೂರು ತಾಲೂಕಿನ ಸ್ಥಿರಾಸ್ತಿ ಮಾರುಕಟ್ಟೆ ಮೌಲ್ಯ ಪರಿಷ್ಕರಣೆ ಸಬ್‍ರಿಜಿಸ್ಟ್ರಾರ್ ಕಚೇರಿಗಳಲಿ ನೂತನ ದರಪಟ್ಟಿ
ಚಿತ್ರದುರ್ಗ ಹಾಗೂ ಹಿರಿಯೂರು ತಾಲೂಕು ವ್ಯಾಪ್ತಿಗೆ ಸೇರಿರುವ ಸ್ಥಿರಾಸ್ತಿಗಳ ಮೌಲ್ಯವನ್ನು 2023-24ನೇ ಸಾಲಿಗೆ ಪರಿಷ್ಕರಿಸುವ ಕುರಿತು ತಹಶೀಲ್ದಾರ್‍ಗಳ ನೇತೃತ್ವದಲ್ಲಿ ಮಾರುಕಟ್ಟೆ ಮೌಲ್ಯಮಾಪನ ಉಪ ಸಮಿತಿ ಸಭೆಗಳನ್ನು ನಡೆಸಲಾಗಿದೆ.
ಸಭೆಯಲ್ಲಿ ಸಭೆಯಲ್ಲಿ ಸ್ಥಿರಾಸ್ತಿಗಳ ತಾತ್ಕಾಲಿಕ ಅಂದಾಜು ದರ ಪಟ್ಟಿಯನ್ನು ಸರ್ವಾನುಮತದಿಂದ ಅಂಗೀಕರಿಸಿದ್ದು, ಸಾರ್ವಜನಿಕರ ಮಾಹಿತಿಗಾಗಿ ಚಿತ್ರದುರ್ಗ ಹಾಗೂ ಹಿರಿಯೂರು ತಾಲ್ಲೂಕು ಉಪನೋಂದಣಾಧಿಕಾರಿ ಕಚೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
ಪರಿಷ್ಕøತ ಮಾರುಕಟ್ಟೆ ಮೌಲ್ಯಮಾಪನ ಅಂದಾಜು ಪಟ್ಟಿಗೆ ಸಾರ್ವಜನಿಕರ ಅಹವಾಲು, ಆಕ್ಷೇಪಣೆ, ಸಲಹೆ, ಸೂಚನೆಗಳು ಇದ್ದಲ್ಲಿ, ಸೂಕ್ತ ದಾಖಲೆಗಳೊಂದಿಗೆ 15 ದಿನಗಳ ಒಳಗಾಗಿ ಆಯಾ ತಹಶೀಲ್ದಾರ್ ಅಥವಾ ಉಪನೋಂದಣಾಧಿಕಾರಿಗಳ ಕಚೇರಿಗೆ ಲಿಖಿತವಾಗಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: