ಅಡಕೆ ಧಾರಣೆ
ಅಡಕೆ ಬೆಳೆಗಾರ ರೈತರೇ ಇಲ್ಲಿ ಗಮನಿಸಿ | ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆ ಪಾಲಿಸಿ
ಅಡಕೆ ಬೆಳೆಗಾರ ರೈತರೇ ಇಲ್ಲಿ ಗಮನಿಸಿ | ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆ ಪಾಲಿಸಿ
ಚಿತ್ರದುರ್ಗ ನ್ಯೂಸ್:
ಅಡಕೆ ಬೆಳೆ ಹೆಚ್ಚಾಗಿರುವ ಚಿತ್ರದುರ್ಗ ತಾಲೂಕಿನಲ್ಲಿ, ಅಲ್ಲಲ್ಲಿ ಎಲೆ ಚುಕ್ಕೆ ರೋಗ ಕಂಡು ಬರುತ್ತಿದ್ದು, ಇದರ ನಿರ್ವಹಣೆಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ.
ಎಲೆ ಚುಕ್ಕೆ ರೋಗ ತೀವ್ರವಾಗಿ, ಸೋಂಕಿತವಾಗಿರುವ ಕೆಳಗಿನ ಎಲೆಗಳನ್ನು ಸಾಧ್ಯವಿರುವಲ್ಲೆಲ್ಲಾ ತೆಗೆದು ಸುಟ್ಟು ಹಾಕಬೇಕು. ಮಳೆಗಾಲದಲ್ಲಿ ಅಂದರೆ ಆಗಸ್ಟ್-ಸೆಪ್ಟಂಬರ್ ತಿಂಗಳವರಗೆ ಕೊಳೆ ರೋಗಕ್ಕೆ ಅಡಿಕೆ ಗೊಂಚಲುಗಳಿಗೆ ಸಿಂಪಡಿಸಿದ ಬೋರ್ಡ್ ದ್ರಾವಣವನ್ನು ಶೇ.1 ಎಲೆ ಚುಕ್ಕೆ ರೋಗವಿರುವ ಗರಿಗಳಿಗೂ ಸಿಂಪಡಿಸಬೇಕು. ಸೆಪ್ಟೆಂಬರ್-ಅಕ್ಟೋಬರ್ ತಿಂಗಳಿನಲ್ಲಿ ರೋಗ ಕಂಡುಬಂದರೆ ಮೊದಲು ಸುತ್ತಿನ ಪ್ರೊಪಿಕೊನಜೋಲ್ ಶೇ.25 ಇ.ಸಿ 01 ಮಿ.ಲೀ ಪ್ರತಿ ಲೀಟರ್ ನೀರಿಗೆ ಅಥವಾ ಟೆಬುಕೊನಜೋಲ್ 01 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು, ರೋಗದ ತೀವ್ರತೆಗೆ ಅನುಗುಣವಾಗಿ 25 ರಿಂದ 30 ದಿನಗಳ ನಂತರ ಎರಡನೆ ಬಾರಿಗೆ ಪ್ರೋಪಿನೆಬ್ ಶೇ.70 ಡಬ್ಲ್ಯೂಪಿಯನ್ನು ಪ್ರತಿ ಲೀಟರ್ ನೀರಿಗೆ 2 ಗ್ರಾಂ ನಷ್ಟು ಬೆರೆಸಿ ಸಿಂಪಡಿಸಬೇಕು. ಶಿಲೀಂಧ್ರನಾಶಕ ದ್ರಾವಣವನ್ನು ತಯಾರಿಸಿದ ನಂತರ ಅಂಟು ದ್ರಾವಣವನ್ನು ಪ್ರತಿ ಲೀಟರ್ ನೀರಿಗೆ 01 ಮಿ.ಲೀ. ಸೇರಿಸಿ ಸಿಂಪಡಿಸಬೇಕು.
ಇದನ್ನೂ ಓದಿ: ಕೋಟೆನಾಡಿನ ಜನರ ಅಭಿಮಾನದ ಸಂಗತಿ | ಚಂದ್ರಯಾನಕ್ಕೂ-ಚಿತ್ರದುರ್ಗಕ್ಕೂ ಇರುವ ನಂಟೇನು ಗೊತ್ತಾ..?
ಪೋಷಕಾಂಶಗಳ ನಿರ್ವಹಣೆಗಾಗಿ, ಮಣ್ಣಿನ ಪರೀಕ್ಷೆಯ ದತ್ತಾಂಶದ ಆಧಾರದ ಮೇಲೆ ಶಿಫಾರಸು ಮಾಡಲಾದ ರಸಗೊಬ್ಬರಗಳು 100 ಗ್ರಾಂ ಸಾರಜನಕ, 40 ಗ್ರಾಂ ರಂಜಕ, 140 ಗ್ರಾಂ ಪೊಟ್ಯಾಶ್ ಗೊಬ್ಬರವನ್ನು ಒಂದು ವರ್ಷಕ್ಕೆ ಪ್ರತಿ ಗಿಡಕ್ಕೆ ಬಳಸಬಹುದು. ಸುಣ್ಣದ ಅನ್ವಯದೊಂದಿಗೆ ಮಣ್ಣಿನ ಪಿಹೆಚ್ ಅನ್ನು ತಟಸ್ಥವಾಗಿ ಹೊಂದಿಸಬಹುದು ಎಂದು ಚಿತ್ರದುರ್ಗ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.