ಮುಖ್ಯ ಸುದ್ದಿ
ಚಿತ್ರದುರ್ಗ ನಗರಸಭೆ ಬಜೆಟ್ | ಸಾರ್ವಜನಿಕರ ಸಲಹೆಗಳ ಆಹ್ವಾನ | ಫೆ.6ರಂದು ಸಮಾಲೋಚನಾ ಸಭೆ
CHITRADURGA NEWS | 04 FEBRUARY 2024
ಚಿತ್ರದುರ್ಗ: ನಮ್ಮ ಕನಸಿನ ಚಿತ್ರದುರ್ಗ ನಗರ ಹೇಗಿರಬೇಕು. ನಗರಸಭೆಯ ಬಜೆಟ್‍ನಲ್ಲಿ ಯಾವುದಕ್ಕೆ ಪ್ರಾಶಸ್ತ್ಯ ಸಿಗಬೇಕು. ನಗರದ ಅಭಿವೃದ್ದಿಗೆ, ಸೌಂದರ್ಯ ಹೆಚ್ಚಿಸಲು ಇನ್ನೂ ಏನೆಲ್ಲಾ ಕೆಲಸ ಆಗಬೇಕು ಎಂಬ ಕಲ್ಪನೆ ಎಲ್ಲರಲ್ಲೂ ಇರುತ್ತದೆ.
ಇಂತಹ ಕೆಲಸಗಳಿಗಾಗಿಯೇ ಪ್ರತಿ ವರ್ಷ ನಗರಸಭೆಯಲ್ಲಿ ಆಯವ್ಯಯ(ಬಜೆಟ್) ಸಿದ್ಧಪಡಿಸಿ ಮಂಡಿಸಲಾಗುತ್ತದೆ. ಆನಂತರ ಅದನ್ನು ಅನುಷ್ಠಾನ ಮಾಡಲಾಗುತ್ತದೆ.
ಇದನ್ನೂ ಓದಿ: ದೇವಮೂಲೆಯಿಂದ ಚುನಾವಣಾ ಪ್ರಚಾರ ಆರಂಭಿಸಿದ ಎಂ.ಸಿ.ರಘುಚಂದನ್
ನಾವು-ನೀವು ಅಂದುಕೊಂಡ ಎಷ್ಟೋ ಕೆಲಸಗಳು ಬಜೆಟ್‍ನಲ್ಲಿ ಸೇರುವುದೇ ಇಲ್ಲ. ನಮಗೆ ಹೊಳೆದದ್ದು ಬಜೆಟ್ ಸಿದ್ಧಪಡಿಸುವವರಿಗೆ ಹೊಳೆಯುವುದಿಲ್ಲ. ಹೀಗೆ ವ್ಯತ್ಯಾಸಗಳಿರುತ್ತವೆ.
ಐತಿಹಾಸಿಕ ಕೋಟೆನಗರಿ ಚಿತ್ರದುರ್ಗ ಸುಂದರವಾಗಿ ಕಾಣಬೇಕು. ನಗರದ ಅಭಿವೃದ್ಧಿಯಾಗಬೇಕು. ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು. ಕಾಲ ಕಾಲಕ್ಕೆ ನೀರು ಬರಬೇಕು. ಕೆಟ್ಟು ಹೋಗಿರುವ ವಿದ್ಯುತ್ ದೀಪಗಳು ಸರಿಯಾಗಬೇಕು. ಗುಂಡಿ ಬಿದ್ದ ರಸ್ತೆಗಳ ರಿಪೇರಿ ಆಗಬೇಕು. ಹಾಳಾಗಿರುವ ಉದ್ಯಾನಗಳನ್ನು ಅಭಿವೃದ್ಧಿ ಮಾಡಿಸಬೇಕು ಎನ್ನುವ ಕನಸು ಪ್ರತೊಯೊಬ್ಬರಲ್ಲೂ ಇರುತ್ತದೆ.
ಇದನ್ನೂ ಓದಿ: ಗರ್ಭಗುಡಿ ಪ್ರವೇಶಕ್ಕೆ ಮಠಾಧೀಶರು ಪ್ರವೇಶ ಕೋರಿರಲಿಲ್ಲ
ಇದಕ್ಕಾಗಿ ಆಗಾಗ ನಿಮ್ಮ ವಾರ್ಡ್‍ನ ಕೌನ್ಸಿಲರ್, ನಗರಸಭೆಯ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿಯನ್ನೂ ಕೊಟ್ಟಿರುತ್ತೀರಿ. ಆದರೂ, ಕೆಲ ಕೆಲಸಗಳು ನನೆಗಿದಿಗೆ ಬಿದ್ದಿರುತ್ತವೆ.
ಈ ವ್ಯತ್ಯಾಸ ಸರಿಮಾಡಿಕೊಂಡು, ಚಿತ್ರದುರ್ಗ ನಗರಸಭೆಯ ಬಜೆಟ್ ಹೇಗಿರಬೇಕು. ಯಾವುದಕ್ಕೆಲ್ಲಾ ಆಧ್ಯತೆ ಕೊಡಬಹುದು ಎನ್ನುವ ಬಗ್ಗೆ ನೀವು ಕೂಡಾ ಸಲಗೆ ನೀಡಬಹುದು.
ಚಿತ್ರದುರ್ಗ ನಗರಸಭೆಯ 2024-25 ನೇ ಸಾಲಿನ ಆಯ-ವ್ಯಯ ತಯಾರಿ ಬಗ್ಗೆ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಇದೇ ಫೆ.06ರಂದು ಬೆಳಿಗ್ಗೆ 11.30ಕ್ಕೆ ನಗರಸಭೆ ಸಭಾಂಗಣದಲ್ಲಿ ಕರೆಯಲಾಗಿದೆ.
ಇದನ್ನೂ ಓದಿ: 126 ಹೋಂ ಗಾಡ್ರ್ಸ್ ಸ್ಥಾನಗಳಿಗೆ ಅರ್ಜಿ ಆಹ್ವಾನ
ನಗರದ ಗಣ್ಯ ವ್ಯಕ್ತಿಗಳು, ವರ್ತಕರು, ಹಿರಿಯ ನಾಗರೀಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ನಿವೃತ್ತ ಅಧಿಕಾರಿ, ನೌಕರರು, ಪತ್ರಿಕಾ ಮಾಧ್ಯಮದವರು, ಸಾರ್ವಜನಿಕರು ಆಗಮಿಸಿ ಸಲಹೆ ಸೂಚನೆಗಳನ್ನು ತಿಳಿಸಲು ನಗರಸಭೆ ಪೌರಾಯುಕ್ತರು ಮನವಿ ಮಾಡಿದ್ದಾರೆ.
ಹಾಗಿದ್ದರೆ ಇನ್ನೇಕೆ ತಡ, ನಗರಸಭೆ ವ್ಯಾಪ್ತಿಯಲ್ಲಿ ಯಾವ ಕೆಲಸ ಆಗಬೇಕು ಎನ್ನುವ ಬಗ್ಗೆ ಆಲೋಚನೆ ಮಾಡಿ, ಫೆಬ್ರವರಿ 6 ರಂದು ಬೆಳಗ್ಗೆ 11.30ಕ್ಕೆ ನಗರಸಭೆಗೆ ಬಂದು ನಿಮ್ಮ ಸಲಹೆ ಕೊಟ್ಟು ಹೋಗಿ.