ಮುಖ್ಯ ಸುದ್ದಿ
ಗರ್ಭಗುಡಿ ಪ್ರವೇಶಕ್ಕೆ ಮಠಾಧೀಶರು ಕೋರಿಕೊಂಡಿಲ್ಲ | ದೇಗುಲದ ಅರ್ಚಕ ಶ್ರೀನಿವಾಸ್ ಅಯ್ಯಂಗಾರ್ ಸ್ಪಷ್ಟನೆ
CHITRADURGA NEWS | 04 FEBRUARY 2024
ಚಿತ್ರದುರ್ಗ: ‘ಗರ್ಭಗುಡಿ ಹಾಗೂ ಸುಕನಾಸಿಗೆ ಅನ್ಯರಿಗೆ ಪ್ರವೇಶ ಇಲ್ಲ. ಜತೆಗೆ ಇಷ್ಟು ವರ್ಷ ಗರ್ಭಗುಡಿ ಪ್ರವೇಶಿಸು ವುದಾಗಿ ಮಠಾಧೀಶರು ಸೇರಿ ಯಾರೊಬ್ಬರೂ ಕೋರಿಕೊಂಡಿಲ್ಲ’ ಎಂದು ಹೊಸದುರ್ಗ ಬಳಿಯ ಬಾಗೂರು ಚನ್ನಕೇಶವ ದೇಗುಲದ ಅರ್ಚಕ ಶ್ರೀನಿವಾಸ್ ಅಯ್ಯಂಗಾರ್ ಸ್ಪಷ್ಟಪಡಿಸಿದ್ದಾರೆ.
‘ನಾನು ಹೋಗಿದ್ದಕ್ಕೆ ದೇವಾಲಯ ತೊಳೆದರು’ ಎಂಬ ಹೊಸದುರ್ಗ ಕನಕಧಾಮದ ಈಶ್ವರಾನಂದಪುರಿ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ ಬೆನ್ನಲ್ಲೇ ಮಾಧ್ಯಮದವರ ಜತೆ ಮಾತನಾಡಿದ ಅರ್ಚಕ ಶ್ರೀನಿವಾಸ್ ಅಯ್ಯಂಗಾರ್, ಜಾತಿಯ ಕಾರಣಕ್ಕೆ ಗರ್ಭಗುಡಿಗೆ ಬಿಡಲಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಾಗೂರು ದೇವಸ್ಥಾನ ತೊಳೆದ ವಿಚಾರ | ಎಲ್ಲಿ ಗೊಂದಲ ಆಗಿದೆ ಎಂಬುದು ಬಹಿರಂಗವಾಗಲಿ | ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
‘ಬಾಗೂರು ಚನ್ನಕೇಶವ ಸ್ವಾಮಿ ದೇವಸ್ಥಾನಕ್ಕೆ ಮಠಾಧೀಶರು ಆರು ವರ್ಷಗಳಿಂದ ಬರುತ್ತಿದ್ದಾರೆ. ಗರ್ಭಗುಡಿ ಹೊರಗೆ ಕೈಮುಗಿದು ತೆರಳುತ್ತಾರೆ. ಒಳಬರುವ ಇಂಗಿತವನ್ನು ವ್ಯಕ್ತಪಡಿಸಿಲ್ಲ. ಜಾತಿಯ ಕಾರಣಕ್ಕೆ ಗರ್ಭಗುಡಿಗೆ ಬಿಡಲಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ. ಇಲ್ಲಿ, ಜಾತಿ ಕಾರಣಕ್ಕೆ ಭೇದಭಾವ ಮಾಡಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಮುಂದೆಂದೂ ಬಾಗೂರಿನ ಚೆನ್ನಕೇಶವ ಸ್ವಾಮಿ ದೇವಾಲಯಕ್ಕೆ ಹೋಗಲ್ಲ | ಹೊಸದುರ್ಗ ಕನಕಧಾಮದ ಈಶ್ವರಾನಂದಪುರಿ ಸ್ವಾಮೀಜಿ