Connect with us

ಮುಂದೆಂದೂ ಬಾಗೂರಿನ ಚೆನ್ನಕೇಶವ ಸ್ವಾಮಿ ದೇವಾಲಯಕ್ಕೆ ಹೋಗಲ್ಲ | ಹೊಸದುರ್ಗ ಕನಕಧಾಮದ ಈಶ್ವರಾನಂದಪುರಿ ಸ್ವಾಮೀಜಿ

ಹೊಸದುರ್ಗ

ಮುಂದೆಂದೂ ಬಾಗೂರಿನ ಚೆನ್ನಕೇಶವ ಸ್ವಾಮಿ ದೇವಾಲಯಕ್ಕೆ ಹೋಗಲ್ಲ | ಹೊಸದುರ್ಗ ಕನಕಧಾಮದ ಈಶ್ವರಾನಂದಪುರಿ ಸ್ವಾಮೀಜಿ

CHITRADURGA NEWS | 03 FEBRUARY 2024
ಚಿತ್ರದುರ್ಗ: ‘ನಾನು ಹೋಗಿದ್ದಕ್ಕೆ ದೇವಾಲಯ ತೊಳೆದರು’…ಹೀಗೆ ವಿಷಾದಿಸಿದ್ದು ಹೊಸದುರ್ಗ ಕನಕಧಾಮದ ಈಶ್ವರಾನಂದಪುರಿ ಸ್ವಾಮೀಜಿ.

ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿರುವ ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶುಕ್ರವಾರ ನಡೆದ ‘ಮಠಗಳ ಧಾರ್ಮಿಕ, ಸಾಹಿತ್ಯಕ, ಸಾಂಸ್ಕೃತಿಕ ಕೊಡುಗೆ’ ಗೋಷ್ಠಿಯಲ್ಲಿ ತಮ್ಮ ಮನದ ಬೇಸರ, ವ್ಯವಸ್ಥೆ ಸಾಗುತ್ತಿರುವ ಪರಿಯನ್ನು ಹೊರ ಹಾಕಿದರು.

‘ಹಲವು ವರ್ಷಗಳ ಹಿಂದೆ ತಾಲ್ಲೂಕಿನ ಬಾಗೂರಿನಲ್ಲಿರುವ ಚನ್ನಕೇಶವ ದೇವಾಲಯ ಪ್ರವೇಶಿಸಿದ್ದಕ್ಕೆ ದೇವಸ್ಥಾನವನ್ನೇ ತೊಳೆದಿದ್ದರು. ಇತ್ತೀಚೆಗಷ್ಟೇ ವೈಕುಂಠ ಏಕಾದಶಿಯಂದು ಚನ್ನಕೇಶವ ದೇವಾಲಯ ಸಮಿತಿಯವರ ಆಹ್ವಾನದ ಮೇರೆಗೆ ನಾವು ಮತ್ತು ಶಾಂತವೀರ ಸ್ವಾಮೀಜಿ ದೇವಸ್ಥಾನಕ್ಕೆ ಹೋಗಿದ್ದೇವು. ಆ ವೇಳೆ ದೇವಾಲಯದ ಗರ್ಭಗುಡಿಯ ಮುಂದಿನ ಪ್ರಾಂಗಣದಲ್ಲಿ ನಿಂತಿದ್ದೆವು. ಗರ್ಭಗುಡಿಗೆ ನಮ್ಮ ಪ್ರವೇಶ ತಡೆದರು. ಆದರೆ, ಪೂಜಾರಿಗಳ ಕುಟುಂಬದ ಹೆಣ್ಣುಮಕ್ಕಳಿಗೆ ಅವಕಾಶ ಕಲ್ಪಿಸಿದರು’ ಎಂದರು.

ಇದನ್ನೂ ಓದಿ: ಚಳ್ಳಕೆರೆ ಎಡಿಎಲ್‍ಆರ್ ಲೋಕಾಯುಕ್ತ ಬಲೆಗೆ

‘ಮಠಾಧೀಶರಿಗೂ ಅಸಮಾನತೆಯ ಸೋಂಕು ತಗಲುತ್ತಿರುವುದು ಬೇಸರದ ಸಂಗತಿ. ಮಠಾಧೀಶರಿಗೇ ಹೀಗಾದರೆ ಹೇಗೆ? ಮುಂದೆಂದೂ ಬಾಗೂರಿನ ಚೆನ್ನಕೇಶವ ಸ್ವಾಮಿ ದೇವಾಲಯಕ್ಕೆ ಹೋಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಬಸವಣ್ಣನವರು ಕೊಟ್ಟ ಇಷ್ಟಲಿಂಗ ಪೂಜೆ ಇಂದು ಜಾತಿಯಾಗಿ ಪರಿವರ್ತನೆ ಯಾಗಿದೆ. ಕೆಲವು ಮಠಗಳಲ್ಲಿ ಇನ್ನೂ ಅಸಮಾನತೆ ಎದ್ದು ಕಾಣುತ್ತಿದೆ. ಬಸವಣ್ಣನವರ ತತ್ವ ಆದರ್ಶ ಮತ್ತು ವಚನಗಳನ್ನು ನಾವು ಪಾಲಿಸಿದಾಗ ಮಾತ್ರ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯ’ ಎಂದರು.

‘ಆ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದು ಎಂದು ಮೊದಲೇ ತಿಳಿದಿದ್ದರೆ ಕನಕದಾಸನಂತೆ ಪ್ರತಿಭಟನೆ ಮಾಡಿ ದೇವಾಲಯ ಪ್ರವೇಶಿಸುತ್ತಿದ್ದೆ. ಆದರೆ, ಆ ವಿಷಯ ನಂತರ ತಿಳಿಯುತು. ದೇವಾಲಯ ತೊಳೆಯುವ ಬದಲು ನಿಮ್ಮ ಮನಸ್ಸಿನ ಕೊಳೆಯನ್ನು ತೊಳೆದುಕೊಳ್ಳಿ’ ಎಂದು ಸಲಹೆ ನೀಡಿದರು.

ಇದನ್ನೂ ಓದಿ: ದಿವ್ಯ ಕ್ಷಣಕ್ಕೆ ಸಾಕ್ಷಿಯಾದ ರಂಗಕಾಶಿ ಸಾಣೇಹಳ್ಳಿ | ಸಮಾಗಮವಾಯ್ತು ಮಲೆನಾಡು, ಬಯಲುಸೀಮೆ ಸೊಬಗು

ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ‘ಮೀಸಲಾತಿ ಕೇಳಬೇಕಾದವರು ಸುಮ್ಮನಿದ್ದಾರೆ. ಆದರೆ, ಇಂದು ಉಳ್ಳವರೇ ಮೀಸಲಾತಿ ಕೇಳುತ್ತಿದ್ದಾರೆ. ಮೀಸಲಾತಿಗಾಗಿ ಉಳ್ಳವರು ಮತ್ತು ಬಡವರ ನಡುವೆ ದೊಡ್ಡ ಕಂದಕ ಸೃಷ್ಟಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ, ಸಾಹಿತಿ ಚಟ್ನಳ್ಳಿ ಮಹೇಶ್ ಇದ್ದರು.

Click to comment

Leave a Reply

Your email address will not be published. Required fields are marked *

More in ಹೊಸದುರ್ಗ

To Top
Exit mobile version