ಮುಖ್ಯ ಸುದ್ದಿ
ಲೋಕಸಭೆ ಚುನಾವಣೆ | ದೇವಮೂಲೆಯಿಂದ ಪ್ರಚಾರ ಆರಂಭಿಸಿದ ಎಂ.ಸಿ.ರಘುಚಂದನ್
CHITRADURGA NEWS | 04 FEBRUARY 2024
ಚಿತ್ರದುರ್ಗ: ಬೇಸಿಗೆ ಹತ್ತಿರವಾಗುತ್ತಿದ್ದಂತೆ ಬಿಸಿಲ ಬೇಗೆಯೂ ಹೆಚ್ಚಾಗುತ್ತಿದೆ. ಅದೇ ರೀತಿ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಚುನಾವಣಾ ಕಾವು ಕೂಡಾ ಏರುತ್ತಲೇ ಇದೆ.
ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳಲ್ಲಿ ಯಾರು ಅಭ್ಯರ್ಥಿ ಎನ್ನುವ ದೊಡ್ಡ ಕೌತುಕ ಮನೆ ಮಾಡಿದೆ. ಎರಡೂ ಪಕ್ಷಗಳಲ್ಲಿ ಆಕಾಂಕ್ಷಿಗಳ ಪಟ್ಟಿ ಬೆಳೆದಿದೆ.
ಇದನ್ನೂ ಓದಿ: ಲೋಕಸಭೆಗೆ ಟಿಕೇಟ್ ಕೇಳಿದ್ದೇನೆ | ಎಂ.ಸಿ.ರಘುಚಂದನ್
ಎಸ್ಸಿ ಮೀಸಲಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಸದ್ಯ ಬಿಜೆಪಿ ಹಿಡಿತದಲ್ಲಿದ್ದರೂ, ಹಾಲಿ ಸಂಸದರಾಗಿರುವ ಎ.ನಾರಾಯಣಸ್ವಾಮಿ ನಾನೇ ಮುಂದಿನ ಚುನಾವಣೆಗೂ ಅಭ್ಯರ್ಥಿ ಎಂದು ನೇರವಾಗಿ ಹೇಳದ ಕಾರಣ ಬಿಜೆಪಿಯಲ್ಲಿ ಯಾರು ಬೇಕಾದರೂ ಅಭ್ಯರ್ಥಿ ಆಗಬಹುದು ಎನ್ನುವ ವಾತಾವರಣ ಮನೆ ಮಾಡಿದೆ.
ನಾರಾಯಣಸ್ವಾಮಿ ಅವರ ರಾಜಕೀಯ ವೈರಾಗ್ಯ ಆಕಾಂಕ್ಷಿಗಳಲ್ಲಿ ಆಸೆ ಗರಿಗೆದರಿಸಿದೆ. ಈ ನಿಟ್ಟಿನಲ್ಲಿ ಬಿಜೆಪಿಯಲ್ಲಿ ಎಂಟು ಜನ ಆಕಾಂಕ್ಷಿಗಳು ಹೈಕಮಾಂಡ್ ಎಡತಾಕುತ್ತಿದ್ದಾರೆ.
ಇದನ್ನೂ ಓದಿ: ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಲು 2 ಡಜನ್ ಆಕಾಂಕ್ಷಿಗಳು
ಇದರಲ್ಲಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ, ದೇವರಾಜ್ ಅರಸು ಶಿಕ್ಷಣ ಸಂಸ್ಥೆಯ ಸಿಇಓ ಎಂ.ಸಿ.ರಘುಚಂದನ್ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.
ಚಿತ್ರದುರ್ಗ ಜಿಲ್ಲೆಗೆ ದೇವಮೂಲೆಯಾಗಿರುವ ಮೊಳಕಾಲ್ಮೂರು ತಾಲೂಕಿನಿಂದ ಪ್ರಚಾರವನ್ನೇ ಆರಂಭಿಸಿದ್ದಾರೆ.
ಕಳೆದ ಚುನಾವಣೆಯಲ್ಲೇ ಪಕ್ಷದ ಟಿಕೇಟ್ ಕೇಳಿದ್ದೆ. ಆದರೆ, ವರಿಷ್ಠರು ಮುಂದಿನ ಸಲ ಕೊಡುವ ಭರವಸೆ ನೀಡಿದ್ದರು. ಇದನ್ನು ಒಪ್ಪಿ ಪಕ್ಷದ ಕೆಲಸ ಮುಂದುವರೆಸಿಕೊಂಡು ಬಂದಿದ್ದೆ. ಈ ಚುನಾವಣೆಯಲ್ಲಿ ಟಿಕೇಟ್ ಸಿಗುವ ಭರವಸೆಯೊಂದಿಗೆ ಓಡಾಡುತ್ತಿದ್ದೇನೆ ಎಂದು ಜನರಿಗೆ ತಿಳಿಸುತ್ತಿದ್ದಾರೆ.
ಪಕ್ಷದ ಟಿಕೇಟ್ ಯಾರಿಗೆ ಸಿಕ್ಕಿದರೂ, ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು, ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡುತ್ತೇನೆ. ನಾನೂ ಕೂಡಾ ಆಕಾಂಕ್ಷಿಯಾಗಿದ್ದು, ಅವಕಾಶ ಸಿಕ್ಕಿದರೆ ಜನರ ಸೇವೆ ಮಾಡಲು ಮುಂದಾಗಿದ್ದೇನೆ ಎಂದು ಎಂಸಿಆರ್ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಹಾಗೂ ಶನಿವಾರ ನಾಯಕನಹಟ್ಟಿ ಹಾಗೂ ಮೊಳಕಾಲ್ಮುರು ಮಂಡಲಗಳಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ರಘುಚಂದನ್ ಮಾಡಿದ್ದಾರೆ.
ಇದನ್ನೂ ಓದಿ: 120 ಗೃಹರಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
ವರಿಷ್ಠರು ನನಗೆ ನೀಡಲಿ ಅಥವಾ ಬೇರೆಯವರಿಗೆ ಅವಕಾಶ ನೀಡಲು ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಹಾಗಾಗಿ ಪಕ್ಷವನ್ನು ಈಗಿನಿಂದಲೇ ಗಟ್ಟಿಗೊಳಿಸಬೇಕಿದೆ ಎಂದು ತಿಳಿಸಿದ್ದಾರೆ.
ನಿಮಗೆ ಯಾವುದೇ ಸಮಸ್ಯೆಯಾದರೂ ನಡು ರಾತ್ರಿ ಪೋನ್ ಮಾಡಿದರೂ ಸ್ಪಂದಿಸುತ್ತೇನೆ. ಕಾರ್ಯಕರ್ತರ ನೋವು ನನ್ನ ನೋವು ಅಂದುಕೊಂಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟಸಿ ಭಾರತೀಯರ 500 ವರ್ಷಗಳ ಕನಸನ್ನು ನನಸುಗೊಳಿಸಿ ಭಾವನೆಗಳನ್ನು ಎತ್ತಿ ಹಿಡಿದಿದ್ದಾರೆ.
ಇದನ್ನೂ ಓದಿ: ಕೋಟೆನಾಡಲ್ಲಿ ಚಂದ್ರಯಾನ-3 ಲ್ಯಾಂಡರ್ ವಿಕ್ರಮ್ ಲ್ಯಾಂಡಿಂಗ್
ಆರ್ಥಿಕ ವಹಿವಾಟಿನಲ್ಲಿ ಭಾರತ ಈಗ 5ನೇ ಸ್ಥಾನದಲ್ಲಿರುವುದರಿಂದ ನರೇಂದ್ರ ಮೋದಿ ಅವರ ಕೈ ಬಲಪಡಿಸೋಣ ಎಂದು ಹೇಳಿದ್ದಾರೆ.
ಶುಕ್ರವಾರ ನಾಯಕನಹಟ್ಟಿ, ಬಿ.ಜಿ.ಕೆರೆ, ಕೊಂಡ್ಲಹಳ್ಳಿ, ನೇರಲಹಳ್ಳಿ, ತುಮಕೂರ್ಲಹಳ್ಳಿ, ರಾಯಾಪುರ, ಮೊಳಕಾಲ್ಮುರು, ಹಾನಗಲ್, ನುಂಕೆಮಲೆ, ಹಿರೇಹಳ್ಳಿ, ಚಿಕ್ಕೇರಹಳ್ಳಿ, ನಾಗಸಮುದ್ರ, ಸಿದ್ದಾಪುರ, ದೇವಸಮುದ್ರ, ರಾಂಪುರ, ಗೌರಸಮುದ್ರ, ಉಳ್ಳಾರ್ತಿ ಗ್ರಾಮಗಳಿಗೆ ಎಂ.ಸಿ.ರಘುಚಂದನ್ ಭೇಟಿ ನೀಡಿದ್ದಾರೆ.