ಮುಖ್ಯ ಸುದ್ದಿ
ಇನ್ನರ್‌ವ್ಹೀಲ್ ಕ್ಲಬ್‌ಗೆ ನೂರರ ಸಂಭ್ರಮ | ನೂರು ವಿಶೇಷ ಕಾರ್ಯಕ್ರಮ
CHITRADURGA NEWS | 12 JANUARY 2024
ಚಿತ್ರದುರ್ಗ (CHITRADURGA): ಮಾರ್ಗರೇಟ್ ಅವರು1924 ರಲ್ಲಿ ಸ್ಥಾಪಿಸಿದ ಇನ್ನರ್‌ವ್ಹೀಲ್ ಕ್ಲಬ್ ನೂರು ವರ್ಷದ ಸಂಭ್ರಮಕ್ಕೆ ಕಾಲಿಟ್ಟಿದೆ. ಈ ಕ್ಷಣವನ್ನು ನಗರದ ರೋಟರಿ ಬಾಲ ಭವನದಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಚಿತ್ರದುರ್ಗ ವತಿಯಿಂದ ಸಂಭ್ರಮಿಸಲಾಯಿತು.
ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ನೂರನೇ ವರ್ಷದ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ‘ಸ್ನೇಹ ಮತ್ತು ಸೇವಾ ಗುಣ ಹೊಂದಿರುವ ಇನ್ನರ್‌ವ್ಹೀಲ್ ಕ್ಲಬ್ ಸಮಾಜಮುಖಿ ಕೆಲಸ ಮಾಡಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ. ಏಕಾಂಗಿತನ ಕಾಡುತ್ತಿರುವ ಇಂದಿನ ಸಂದರ್ಭದಲ್ಲಿ ಕ್ಲಬ್ ಮೂಲಕ ಮಹಿಳೆಯರೆಲ್ಲಾ ಒಂದೆಡೆ ಸೇರಿ ಸಂಭ್ರಮಿಸುತ್ತಿರುವುದನ್ನು ನೋಡಿದರೆ ಮನಸ್ಸಿಗೆ ಖುಷಿ ನೀಡುತ್ತದೆ’ ಎಂದು ಹೇಳಿದರು.
ಇದನ್ನೂ ಓದಿ: ಮೈನ್ಸ್ ಲಾರಿ ಚಾಲಕನಿಗೆ ಅಪಘಾತ
ಇನ್ನರ್‌ವ್ಹೀಲ್ ಕ್ಲಬ್ ಚಿತ್ರದುರ್ಗ ಅಧ್ಯಕ್ಷೆ ಮೋಕ್ಷರುದ್ರಸ್ವಾಮಿ ಮಾತನಾಡಿ, ‘1924 ರಲ್ಲಿ ಕೇವಲ ಐವರು ಸದಸ್ಯರಿಂದ ಪ್ರಾರಂಭವಾದ ಇನ್ನರ್‌ವ್ಹೀಲ್ ಕ್ಲಬ್‌ನಲ್ಲಿ ಈಗ ಒಂದು ಲಕ್ಷದ 24 ಸಾವಿರ ಸದಸ್ಯೆಯರಿದ್ದಾರೆ. 108 ದೇಶಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ. ಅನೇಕ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಹ್ಯಾಪಿ ಸ್ಕೂಲ್‍ಗಳನ್ನಾಗಿ ಮಾಡಲಾಗಿದೆ’ ಎಂದರು.
ಇದನ್ನೂ ಓದಿ: ಯುವನಿಧಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಬಳಕೆ | ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಪಾಲಯ್ಯ ಖಂಡನೆ
ಜಂಟಿ ಕಾರ್ಯದರ್ಶಿ ವೀಣ ಜಯರಾಂ, ಪಿಡಿಸಿಗಳಾದ ಜ್ಯೋತಿ ಲಕ್ಷ್ಮಣ್, ವೀಣಾಸ್ವಾಮಿ, ಭಾಗ್ಯಕ್ಕ, ನಂದಿನಿ ಸುಹಾಸ್, ಶೈಲಜಾರೆಡ್ಡಿ, ದೀಪದತ್, ಅಮೃತ ಪಾಲ್ಗೊಂಡಿದ್ದರು.