Connect with us

ಯುವನಿಧಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಬಳಕೆ | ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಪಾಲಯ್ಯ ಖಂಡನೆ

ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಕಾಲುವೇಹಳ್ಳಿ ಆರ್.ಪಾಲಯ್ಯ

ಮುಖ್ಯ ಸುದ್ದಿ

ಯುವನಿಧಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಬಳಕೆ | ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಪಾಲಯ್ಯ ಖಂಡನೆ

CHITRADURGA NEWS | 12 JANUARY 2024

ಚಿತ್ರದುರ್ಗ: ಶಿವಮೊಗ್ಗದಲ್ಲಿ ನಡೆದ ರಾಜ್ಯ ಸರ್ಕಾರದ ಯುವನಿಧಿ ಉದ್ಘಾಟನಾ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ದಿರುವ ಸರ್ಕಾರದ ಕ್ರಮವನ್ನು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಕಾಲುವೇಹಳ್ಳಿ ಆರ್.ಪಾಲಯ್ಯ ಖಂಡಿಸಿದ್ದಾರೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ‘ಯುವನಿದಿ’ü ಉದ್ಘಾಟನಾ ಕಾರ್ಯಕ್ರಮಕ್ಕೆ ಬಸ್ಸಿನ ವ್ಯವಸ್ಥೆ ಮಾಡಿಕೊಂಡು ಪದವಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲಾಗಿದೆ, ಈ ಕ್ರಮವನ್ನು ಬಿಜೆಪಿ ಯುವಮೋರ್ಚಾ ಖಂಡಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪದವಿ/ಡಿಪ್ಲಮೋ ಮುಗಿಸಿ 6 ತಿಂಗಳಾದ ನಂತರ ನಿರುದ್ಯೋಗಿ ಫಲಾನುಭವಿಗಳಿಗೆ ಈ ಯೋಜನೆ ಇದೆ. ಆದರೆ, ಪ್ರಸ್ತುತ ಪದವಿ ಕಾಲೇಜಿನ ವಿಧ್ಯಾರ್ಥಿಗಳನ್ನು ಕರೆದುಕೊಂಡು ಹೋಗುವುದರಿಂದ ಅವರನ್ನು ನಿರುದ್ಯೋಗಿಯನ್ನಾಗಿಸುವ ಚಿಂತನೆ ಇದೆಯೇ ಎನ್ನುವ ಅನುಮಾನ ಮೂಡುತ್ತದೆ ಎಂದು ಪಾಲಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ: ಹೊಸದುರ್ಗಕ್ಕೆ ‘ಕ್ಲೀನ್‍ಸಿಟಿ’ ಗೌರವ

ಶೈಕ್ಷಣಿಕ ವರ್ಷದ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳನ್ನು ರಾಜಕೀಯ ಕಾರ್ಯಕ್ರಮಕ್ಕೆ ಉಪಯೋಗಿಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

‘ಕೋಮುಲ್ ನೇಮಕಾತಿ;ಯಲ್ಲಿ ಭ್ರμÁ್ಟಚಾರ ನೆಡೆದು ಮಾಲೂರು ಕಾಂಗ್ರೇಸ್ ಶಾಸಕ ನಂಜೇಗೌಡ ಪ್ರತಿ ನೇಮಕಾತಿಗೆ 30 ಲಕ್ಷ ಪಡೆದಿರುವುದು ಇ.ಡಿ ದಾಳಿಯಿಂದ ತಿಳಿದಿದೆ.

ಇದರೊಂದಿಗೆ ಬಡವರ ಮಕ್ಕಳಿಗೆ 2000 ರೂ. ಯುವನಿಧಿ ಆಸೆ ತೋರಿಸಿ ನೇಮಕಾತಿಯಲ್ಲಿ ಸಿರಿವಂತರಿಗೆ – ಭ್ರμÁ್ಟಚಾರಿಗಳಿಗೆ ಮಣೆ ಹಾಕುವುದು ಇದು ಕಾಂಗ್ರೇಸ್ ಸಂಸ್ಕøತಿಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version