ಮುಖ್ಯ ಸುದ್ದಿ
ಆಪರೇಷನ್ ಸಿಂಧೂರ | ಪಾಕಿಸ್ತಾನಕ್ಕೆ ತಕ್ಕ ಉತ್ತರ | ಕೆ.ಎಸ್.ನವೀನ್
CHITRADURGA NEWS | 07 MAY 2025
ಚಿತ್ರದುರ್ಗ: ಕಾಶ್ಮೀರದ ಪೆಹಲ್ಗಾಂನಲ್ಲಿ ಪಾಕಿಸ್ತಾನದ ಉಗ್ರಗಾಮಿ ಸಂಘಟನೆ ಅಮಾಯಕ ಪ್ರವಾಸಿಗರನ್ನು ಧರ್ಮವನ್ನು ಕೇಳಿ 27ಕ್ಕೂ ಹೆಚ್ಚು ಜನರನ್ನು ಕೊಂದು ದ್ವೇಷದ ಕೃತ್ಯ ನಡೆಸಿದ್ದು. ದೇಶ ಅಲ್ಲದೆ ಅಂತರಾಷ್ಟ್ರೀಯ ಸಮುದಾಯಗಳು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದವು.
Also Read: ಕುರಿ ಮೈ ತೊಳೆಯಲು ಹಳ್ಳಕ್ಕೆ ಇಳಿದಿದ್ದ ದಂಪತಿ ಸಾವು | ಕಾನಿಹಳ್ಳದಲ್ಲಿ ಘಟನೆ
ಇಂದು ಪಾಕಿಸ್ತಾನದಲ್ಲಿರುವ ಸುಮಾರು 9 ಉಗ್ರಗಾಮಿಗಳ ಹಡಗು ತಾಣಗಳನ್ನು ಗುರಿಯಾಗಿಸಿಕೊಂಡು ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮುಖಾಂತರ ಭಾರತದ ಸೈನಿಕರು ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನು ನೀಡಿದ್ದಾರೆ.
ದೇಶದ ಭದ್ರತೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ, ಪ್ರಧಾನಿ ನರೇಂದ್ರ ಮೋದಿ ಮತ್ತು ನಮ್ಮ ದೇಶದ ಸೈನಿಕರು ನುಡಿದಂತೆ ನಡೆದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದ್ದಾರೆ.