ಚಿತ್ರದುರ್ಗ ನ್ಯೂಸ್.ಕಾಂ: ಮದಕರಿ ನಾಯಕರ ಜಯಂತೋತ್ಸವ ಕಾರ್ಯಕ್ರಮಕ್ಕೆ ಎಲ್ಲಾ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರ, ಚಿತ್ರದುರ್ಗವನ್ನಾಳಿದವರಲ್ಲಿ ಮದಕರಿ ನಾಯಕರು ಪ್ರಮುಖರು. ಇಂತಹ ಮಹಾನ್ ನಾಯಕರ ಜಯಂತಿಯನ್ನು ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಬಳದವರು ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ನಾನು 1988 ರಿಂದಲೂ ಕೋಟೆಯ ಸಂಪರ್ಕದಲ್ಲಿದ್ದೆನೆ. ಮದಕರಿ ನಾಯಕರು ಚಿತ್ರದುರ್ಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮಠ ಕಟ್ಟಿಸಿದ್ದಾರೆ. ಕೆರೆ ನಿರ್ಮಾಣ ಮಾಡಿದ್ದಾರೆ. ತಾಯಿ ಏಕನಾಥೇಶ್ವರಿ ದೇವಾಲಯ ಕಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸ್ಮರಿಸಿದರು.
ಇದನ್ನೂ ಓದಿ: ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರುವುದು ಪಕ್ಕಾ | ಸಿಎಂ, ಡಿಸಿಎಂ ಜೊತೆ ಚರ್ಚಿಸಿ ಸೇರ್ಪಡೆ ದಿನಾಂಕ ನಿಗಧಿ
ಮದಕರಿನಾಯಕರು ಯುದ್ದ ಪ್ರಿಯರಾಗಿದ್ದರು. ತಮ್ಮ ಆಡಳಿತದ ಸಮಯದಲ್ಲಿ ರಾಜ್ಯವನ್ನು ವಿಸ್ತರಣೆ ಮಾಡಿದ್ದರು. ಮದಕರಿ ನಾಯಕರು ಯಾವ ಜನಾಂಗಕ್ಕೂ ಸಹಾ ಸೇರಿದವರಲ್ಲ. ಎಲ್ಲಾ ಜನಾಂಗದವರನ್ನು ಸ್ನೇಹದಿಂದ ನೋಡುವ ಮೂಲಕ ಆಡಳಿತ ನಡೆಸುತ್ತಿದ್ದರು. ಅವರ ಜಯಂತಿಯನ್ನು ಎಲ್ಲರು ಸೇರಿ ಆಚರಣೆ ಮಾಡಬೇಕಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ನಿರಂಜನಮೂರ್ತಿ ಮಾತನಾಡಿ, ಚಿತ್ರದುರ್ಗ ಆಳಿದವರಲ್ಲಿ ಮದಕರಿ ನಾಯಕರಂತೆ, ಬಿಚ್ಚುಗತ್ತಿ ಭರವಣ್ಣ ನಾಯಕರೂ ಕೆಲಸ ಮಾಡಿದ್ದಾರೆ. ಚಿತ್ರದುರ್ಗದಲ್ಲಿ ಎಲ್ಲಿಯೂ ಅವರ ಪ್ರತಿಮೆ ಇಲ್ಲ. ಆದಷ್ಟು ಬೇಗ ಅವರ ಪ್ರತಿಮೆ ನಿರ್ಮಾಣವಾಗಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಮಂಜಪ್ಪ, ಮಾಜಿ ಸದಸ್ಯರಾದ ಗಾಡಿ ಮಂಜಣ್ಣ, ಮಾಜಿ ಉಪಾಧ್ಯಕ್ಷರಾದ ದುರುಗೇಶಪ್ಪ, ಜಯ್ಯಣ್ಣ ,ಆನಂದ್, ಮಹಾಂತೇಶ್ ಮತ್ತಿತರರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

