CHITRADURGA NEWS | 29 JUNE 2026
ಚಿತ್ರದುರ್ಗ: ನಗರದ ಹೊರ ವಲಯದ ಭೋವಿ ಗುರುಪೀಠದಲ್ಲಿ ಜುಲೈ 18 ರಂದು ನಡೆಯಲಿರುವ ಭೋವಿ ಜನೋತ್ಸವ ಕಾರ್ಯಕ್ರಮದ ಅಂಗವಾಗಿ ಭಾನುವಾರ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: ಮೆಹೆಂದಿಗೆ ಶುಭ ಸಮಾರಂಭಗಳಲ್ಲಿ ಭಾರೀ ಬೇಡಿಕೆ | ಬಸವಕುಮಾರ ಶ್ರೀ
ಈ ವೇಳೆ ಸಮಾಜದ ಪ್ರಸ್ತುತ ಸ್ಥಿತಿಗತಿಯ ಕುರಿತು ಶ್ರೀಗಳು ಮಾತನಾಡಿ, ಭೋವಿ ಜನೋತ್ಸವವು ಕೇವಲ ಒಂದು ಆಚರಣೆಯಾಗದೇ, ಭೋವಿ, ವಡ್ಡರ ಜನರ ಸಾಂಸ್ಕೃತಿಕ ಬದುಕನ್ನು ಬಿಂಬಿಸುವ ಮತ್ತು ಎತ್ತಿಹಿಡಿಯುವ ಪ್ರಮುಖ ಉತ್ಸವವಾಗಬೇಕು. ಪ್ರಸ್ತುತ ನಮ್ಮ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಮತ್ತು ಅನಕ್ಷರತೆ ಹೆಚ್ಚಾಗಿ ಕಂಡುಬರುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಆದರೆ, ಈ ಪರಿಸ್ಥಿತಿಯನ್ನು ಹೀಗೆಯೇ ಮುಂದುವರಿಯಲು ಬಿಡಬಾರದು ಎಂದು ತಿಳಿಸಿದರು.
ಮುಂಬರುವ ದಿನಗಳಲ್ಲಿ ಸಮುದಾಯದಲ್ಲಿರುವ ಅನಕ್ಷರತೆಯನ್ನು ಸಂಪೂರ್ಣವಾಗಿ ತೊಲಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕಿದೆ. ಈ ನಿಟ್ಟಿನಲ್ಲಿ ಹಮ್ಮಿಕೊಳ್ಳುವ ಪ್ರತಿಯೊಂದು ಸಕಾರಾತ್ಮಕ ಪ್ರಕ್ರಿಯೆ ಮತ್ತು ಯೋಜನೆಗಳಿಗೆ ಸಮಾಜದ ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸಿ ಯಶಸ್ವಿಗೊಳಿಸಬೇಕು.
ಜಾತಿ ನಮ್ಮ ಶಕ್ತಿಯಾಗಿದೆ, ಜಾತಿ ಬಲವಾದಷ್ಟು ಅದರಲ್ಲಿ ಜನತೆ ಬಲಿಷ್ಠರಾಗುತ್ತಾರೆ, ಬಲಿಷ್ಠರಾದವರ ಬೇರೆಯವರನ್ನು ಬಲಿಷ್ಠರನ್ನಾಗಿ ಮಾಡಿದಾಗ, ಸಮಾಜ ಮತ್ತಷ್ಟು ಬಲಿಷ್ಠವಾಗುತ್ತದೆ. ನಮ್ಮ ಹಿರಿಯರು ಹಾಕಿ ಕೊಟ್ಟ ದಾರಿ ಇಂದು ನಮಗೆ ಮಾರ್ಗದರ್ಶನವಾಗಿದೆ.
ಇದನ್ನೂ ಓದಿ: ಉಪರಾಷ್ಟ್ರಪತಿಗಳಿಂದ ಮಾದಾರ ಚನ್ನಯ್ಯ ಶ್ರೀಗಳಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ
ಸಮಾಜದ ಮುಖಂಡರು, ದೇವರಾಜು ವಿದ್ಯಾ ಸಂಸ್ಥೆಯ ಸಿಇಒ ರಘುಚಂದನ್ ಮಾತನಾಡಿ, ಸಮುದಾಯ ಒಗ್ಗಟ್ಟು ಇಲ್ಲದಿರುವುದರಿಂದ ಯಾವುದೇ ರಾಜಕೀಯ ಪಕ್ಷದವರು ನಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಸಮುದಾಯ ಒಟ್ಟಾಗಿ ಇದ್ದಾಗ ಮಾತ್ರ ಏನನ್ನಾದರೂ ಸಾಧನೆಯನ್ನು ಮಾಡಲು ಸಾಧ್ಯವಿದೆ.
ಸಮುದಾಯದಲ್ಲಿ ಒಂದು ಕೆಟ್ಟ ಅಭಿಪ್ರಾಯ ಇದೆ ನಾನು ಏಕೆ ಅವರ ಮನೆ ಹತ್ತಿರ ಹೋಗಬೇಕು, ಅವರೇ ನನ್ನ ಹತ್ತಿತರ ಬರಲಿ ಎಂದು. ಇದು ಸಮಾಜದಲ್ಲಿ ಮೇಲೆ ಬೆಳೆಯುತ್ತಿರುವವರಿಗೆ ಪ್ರೋತ್ಸಾಹವನ್ನು ನೀಡದೆ ಅವರ ಕಾಲನ್ನು ಎಳೆಯುವ ಕಾರ್ಯ ಆಗಿದೆ. ಇದರಿಂದ ನಮ್ಮ ಸಮಾಜವನ್ನು ರಾಜಕೀಯ ಪಕ್ಷದವರು ಕೀಳಾಗಿ ನೋಡುತ್ತಿದ್ದಾರೆ, ಇದು ಬಿಡಬೇಕು ಸಮಾಜ ಎಂದು ಬಂದಾಗ ಎಲ್ಲರು ಒಟ್ಟಾಗಿ ನಿಲುವಂತೆ ಆಗಬೇಕಿದೆ ಎಂದರು.
ನಮ್ಮ ಸಮುದಾಯಕ್ಕೆ ಶಿಕ್ಷಣ ಆಗತ್ಯವಾಗಿ ಬೇಕಾಗಿದೆ. ಶಿಕ್ಷಣವೇ ನಮ್ಮ ಸಮಾಜದ ಶಕ್ತಿಯಾಗಬೇಕಿದೆ, ಮಕ್ಕಳಿಗೆ 18 ವರ್ಷದವರೆಗೆ ಶಿಕ್ಷಣವನ್ನು ನೀಡಬೇಕು. ತದ ನಂತರ ಅವರಿಗೆ ಶಕ್ತಿಯನ್ನು ತುಂಬವ ಕಾರ್ಯವನ್ನು ಸಮಾಜ ಪೋಷಕರು ಮಾಡಬೇಕು.
ಇತ್ತಿಚಿನ ದಿನಮಾನದಲ್ಲಿ ಎಸ್.ಸಿ. ಸಮುದಾಯ ಎಂದರೆ ಬರೀ ಮಾದಿಗ ಸಮುದಾಯ ಎಂದು ಬಿಂಬಿಸಲಾಗುತ್ತಿದೆ, ಇದು ಹೋಗಬೇಕು. ನಾವು ಸಹಾ ಸಂಗಟಿತರಾಗಿದ್ದೇವೆ ಎಂದು ತೋರಿಸಬೇಕು ಎಂದರು.
ಇದನ್ನೂ ಓದಿ: ಮಳೆಗಾಗಿ ಕತ್ತೆಗಳಿಗೆ ಮದುವೆ, ಮೆರವಣಿಗೆ
ಓಸಿಸಿ ರಾಜ್ಯಾಧ್ಯಕ್ಷರಾದ ಆನಂದಪ್ಪ ಮಾತನಾಡಿ, ನಮ್ಮ ಸಮಾಜದಲ್ಲಿ ಬೆಳೆಯುತ್ತಿದ್ದಾರೆ ಎಂದು ತಿಳಿದರೆ ಆವರ ಕಾಲನ್ನು ಎಳೆಯುವವರು ಇದ್ದಾರೆ. ಇದರ ಅನುಭವ ನನಗೆ ಈಗಾಗಲೇ ಆಗಿದೆ, ನಾನು ಸಹಾ ರಾಜಕೀಯದಲ್ಲಿ ಇದ್ದು ನಾಲ್ಕು ಬಾರಿ ಪಕ್ಷದ ನನಗೆ ಟಿಕೇಟ್ ತಪ್ಪಿದೆ. ನಮ್ಮ ಸಮಾಜದವರೇ ನಮ್ಮನ್ನು ಬೆಳೆಯಲು ಬಿಡುತ್ತಿಲ್ಲ.
ಜು.18 ರಂದು ನಡೆಯಲಿರುವ ಭೋವಿ ಜನೋತ್ಸವ ಕಾರ್ಯಕ್ರಮಕ್ಕೆ ಎಲ್ಲರು ಸೇರಿ ಒಂದಾಗಿ ಯಶಸ್ವಿಗೊಳಿಸಬೇಕು. ಇದು ಭೋವಿ ಜನಗಳ ಹಬ್ಬವಾಗಬೇಕು ಎಂದರು.
ಸಭೆಯಲ್ಲಿ ಭೋವಿ ಮಠದ ಆಡಳಿತಾಧಿಕಾರಿಗಳಾದ ಗೌನಳ್ಳಿ ಗೋವಿಂದಪ್ಪ, ಜಿಲ್ಲಾ ಭೋವಿ ಸಂಘದ ಕಾರ್ಯದರ್ಶಿ ಈ.ಮಂಜುನಾಥ್, ಸದಸ್ಯರಾದ ಕಾಳಘಟ್ಟ ಹನುಮಂತಪ್ಪ, ಅಂಜನೇಯ, ಜಿಲ್ಲಾಧ್ಯಕ್ಷರಾದ ಕೃಷ್ಣಮೂರ್ತಿ ಸೂರೇನಹಳ್ಳಿ, ನಿಕಟ ಪೂರ್ವ ಅಧ್ಯಕ್ಷರಾದ ತಿಪ್ಪೇಸ್ವಾಮಿ, ತಿಮ್ಮಣ್ಣ, ನಿರಂಜನ, ಸಿದ್ದು ಬಂಡಿ, ರಾಮು, ರವಿಪೂಜಾರ್, ತಿಪ್ಪಣ್ಣ ಒಡೆಯರ್, ಜಯ್ಯಪ್ಪ, ರಾಮಾಂಜನೇಯ, ಕೊಲ್ಲಭೋವಿ, ಪರಶುರಾಮ್, ಗುರಪ್ಪ, ಶಿವರುದ್ರಪ್ಪ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಭೋವಿ ಸಮುದಾಯ ಮುಖಂಡರು ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

