Connect with us

ಸೈನ್ಸ್‌ಸಿಟಿಯಲ್ಲಿ ಕರಡಿ ಹಾವಳಿ | ಮುಂಜಾನೆಯೇ ರಸ್ತೆಯಲ್ಲೇ ವಾಕಿಂಗ್

ಚಳ್ಳಕೆರೆ

ಸೈನ್ಸ್‌ಸಿಟಿಯಲ್ಲಿ ಕರಡಿ ಹಾವಳಿ | ಮುಂಜಾನೆಯೇ ರಸ್ತೆಯಲ್ಲೇ ವಾಕಿಂಗ್

CHITRADURGA NEWS | 15 JANUARY 2024

ಚಿತ್ರದುರ್ಗ (CHITRADURGA): ವಿಜ್ಞಾನ ನಗರಿ ಎಂದೇ ಖ್ಯಾತಿಗಳಿಸಿರುವ ಚಳ್ಳಕೆರೆಯಲ್ಲಿ ಇದೀಗ ಕರಡಿ ಹಾವಳಿ ಹೆಚ್ಚಾಗಿದೆ. ತಾಲ್ಲೂಕಿನ ಯಾದಲಗಟ್ಟೆ ಗ್ರಾಮದ ಬಳಿ ರಸ್ತೆಯಲ್ಲಿ ಬೆಳ್ಳಂಬೆಳಿಗ್ಗೆ ಕರಡಿ ಪ್ರತ್ಯಕ್ಷವಾಗಿರುವ ದೃಶ್ಯವನ್ನು ಬೈಕ್ ಸವಾರರು ಸೆರೆ ಹಿಡಿದಿದ್ದು, ಆ ವಿಡಿಯೊ ಈಗ ಎಲ್ಲೆಡೆ ಹರಿದಾಡುತ್ತಿದೆ.

ಇದನ್ನೂ ಓದಿ: ಅನಂತ ಕುಮಾರ್‌ ಹೆಗಡೆ ಒಬ್ಬ ಹುಚ್ಚ | ಮಾಜಿ ಸಚಿವ ಎಚ್‌.ಆಂಜನೇಯ ಏಕವಚನದಲ್ಲೇ ವಾಗ್ದಾಳಿ

ಕರಡಿ ಸಂಚಾರದಿಂದ ಯಾದಲಗಟ್ಟೆ, ಕ್ಯಾತಗೊಂಡನಹಳ್ಳಿ, ಕಾಲುವೆಹಳ್ಳಿ, ಗೌಡರಹಟ್ಟಿ, ಚಿತ್ರನಾಯಕನಹಳ್ಳಿ, ಕರಿಕೆರೆ, ವಿಶ್ವೇಶ್ವಪುರ ಸುತ್ತಲಿನ ಗ್ರಾಮದ ಜನರಲ್ಲಿ ಆತಂಕ ಉಂಟಾಗಿದೆ.

ವಿಡಿಯೋ ಹರಿದಾಡುತ್ತಿದ್ದಂತೆ ಗಡಿ ಭಾಗ್ರದ ಕ್ಯಾದಿಗುಂಟೆ, ಓಬಳಾಪುರ, ಪುಟ್ಲರಹಳ್ಳಿ, ಜಾಜೂರು, ತಿಪ್ಪರೆಡ್ಡಿಹಳ್ಳಿ, ದೊಡ್ಡಚೆಲ್ಲೂರು, ಪಿಲ್ಲಹಳ್ಳಿ, ಕಾಮಸಮುದ್ರ ಮುಂತಾದ ಗ್ರಾಮಗಳಿಗೆ ಅರಣ್ಯ ಸಿಬ್ಬಂದಿ ಹೋಗಿ ಸಂಜೆ ಮತ್ತು ಬೆಳಿಗ್ಗೆ ಮಬ್ಬುಗತ್ತಲಲ್ಲಿ ಹೊಲಗಳಿಗೆ ಒಂಟಿಯಾಗಿ ಹೋಗದಂತೆ ಜನರಿಗೆ ತಿಳಿವಳಿಕೆ ನೀಡುತ್ತಿದ್ದಾರೆ.

ಇದನ್ನೂ ಓದಿ: ಜನರ ನೆಮ್ಮದಿ ಕೆಡಿಸಿದ ಚಿರತೆ | ಆಹಾರಕ್ಕೆ ಕುರಿಹಟ್ಟಿಗಳ ಮೇಲೆ ದಾಳಿ

ಕರಡಿ ಸಂಚರಿಸುತ್ತಿದೆ ಎಂಬ ವಿಡಿಯೊದಲ್ಲಿ ಅದು ಕರಡಿ ಅಂತ ಸರಿಯಾಗಿ ಗೊತ್ತಾಗುತ್ತಿಲ್ಲ. ಆದರೂ, ಆ ಸ್ಥಳಕ್ಕೆ ಸಿಬ್ಬಂದಿಯನ್ನು ಕಳುಹಿಸಿಕೊಟ್ಟಿದ್ದೇನೆ. ಜನರು ಆತಂಕ ಪಡುವ ಅಗತ್ಯವಿಲ್ಲ ಎನ್ನುತ್ತಾರೆ ಎಂದು ಸಾಮಾಜಿಕ ಅರಣ್ಯಾಧಿಕಾರಿ ಬಹುಗುಣ ಹೇಳಿದರು. ಕೆಲ ದಿನಗಳ ಹಿಂದೆ ದೊಡ್ಡಉಳ್ಳಾರ್ತಿ ಗ್ರಾಮದ ಮಹಿಳೆ ಮೇಲೆ ಕರಡಿ ಹಾಗೂ ಮರಿಗಳು ದಾಳಿ ನಡೆಸಿ ಗಾಯಗೊಳಿಸಿದ್ದವು.

Click to comment

Leave a Reply

Your email address will not be published. Required fields are marked *

More in ಚಳ್ಳಕೆರೆ

To Top
Exit mobile version