CHITRADURGA NEWS | 29 MAY 2026
ಚಿತ್ರದುರ್ಗ: ತ್ಯಾಗ ಬಲಿದಾನಗಳ ಸಂಕೇತ ಬಕ್ರೀದ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ನಗರದ ಎ.ಪಿ.ಎಂ.ಸಿ. ಬಳಿಯಿರುವ ದೊಡ್ಡ ಈದ್ಗಾ ಮೈದಾನದಲ್ಲಿ ಗುರುವಾರ ಸಾಮೂಹಿ ಪ್ರಾರ್ಥನೆ ಸಲ್ಲಿಸಿದರು.
ಇದನ್ನೂ ಓದಿ: ವಿಕಲಚೇತನರ ರಾಷ್ಟ್ರ ಪ್ರಶಸ್ತಿ | ಅರ್ಜಿ ಆಹ್ವಾನ
ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರತನಕ ಎಲ್ಲರೂ ಬಿಳಿ ವಸ್ತ್ರಗಳನ್ನು ಧರಿಸಿ ತಲೆಗೆ ಟೋಪಿ ಹಾಕಿಕೊಂಡಿದ್ದರು. ಟೋಪಿ ಇಲ್ಲದವರು ಕರವಸ್ತ್ರಗಳನ್ನು ತಲೆಗೆ ಸುತ್ತಿಕೊಂಡು ಅಲ್ಲಾನನ್ನು ಪ್ರಾರ್ಥಿಸಿದರು.
ಮನೆಯಿಂದಲೆ ಚಾಪೆ, ಜಮಖಾನಗಳನ್ನು ಬಗಲಲ್ಲಿ ಸುತ್ತಿಕೊಂಡು ಪ್ರಾರ್ಥನೆಗೆ ಹೋಗುತ್ತಿದ್ದುದು ಕಂಡು ಬಂದಿತು. ಗಾಂಧಿವೃತ್ತ, ಹೊಳಲ್ಕೆರೆ ರಸ್ತೆ ಹಾಗೂ ದಾವಣಗೆರೆ ರಸ್ತೆಯಲ್ಲಿ ಬ್ಯಾರಿಕೇಡ್ಗಳನ್ನು ಅಡ್ಡವಿಟ್ಟು ವಿಟ್ಟಿದ್ದರ ಪರಿಣಾಮ ಭಾರಿ ಗಾತ್ರದ ವಾಹನಗಳು ಹೆದ್ದಾರಿ ಮೂಲಕ ಸಂಚರಿಸಿದವು.
ನಗರ ಪೊಲೀಸ್ ಠಾಣೆ, ಕೋಟೆ ಹಾಗೂ ಸಂಚಾರಿ ಪೊಲೀಸ್ನವರು ವಾಹನಗಳ ದಟ್ಟಣೆಯನ್ನು ನಿಯಂತ್ರಿಸಿ ಸಾಮೂಹಿಕ ಪ್ರಾರ್ಥನೆಗೆ ಅಡಚಣೆಯಾಗದಂತೆ ಎಚ್ಚರ ವಹಿಸಿದ್ದರು.
ಇದನ್ನೂ ಓದಿ: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ | ಬಳಿಕ PRESS MEET | ಸಂವಿಧಾನವೇ ಧರ್ಮ | ಮತದಾರರೇ ದೇವರು ಎಂದು ಭಾವುಕ
ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ, ಸೈಯದ್ ಅಲ್ಲಾಭಕ್ಷಿ, ಎಂ.ಸಿ.ಓ.ಬಾಬು, ಜಾಮಿಯಾ ಮಸೀದಿ ಕಮಿಟಿ ಅಧ್ಯಕ್ಷ ಸಾಧಿಕ್, ಹೆಚ್.ಆರ್.ಮಹಮದಿ ಜಮೀರ್, ಜಾಕೀರ್ಹುಸೇನ್, ವಕ್ಪ್ ಬೋರ್ಡ್ ಮಾಜಿ ಚೇರ್ಮನ್ ಅನ್ವರ್ಭಾಷ ಸೇರಿದಂತೆ ಮುಸ್ಲಿಂ ಸಮಾಜದ ಅನೇಕ ಮುಖಂಡರುಗಳು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

