CHITRADURGA NEWS | 19 JANUARY 2026
ಚಿತ್ರದುರ್ಗ: ಜಿಲ್ಲೆಯ ರೈತರ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಪಂಚಾಯಿತಿ ಸಭಾಂಗಣಕ್ಕೆ ಆಗಮಿಸುವ ವೇಳೆ ರೈತರು ಸಚಿವ ಡಿ.ಸುಧಾಕರ್ ಅವರನ್ನು ಮುತ್ತಿಗೆ ಹಾಕಲು ಯತ್ನಿಸಿದರು.
ಇದನ್ನೂ ಓದಿ: ಅಡಿಕೆ ಧಾರಣೆ | 19 ಜನವರಿ | ಚನ್ನಗಿರಿ, ಭೀಮಸಮುದ್ರ ಇತರೆ ಅಡಿಕೆ ಮಾರುಕಟ್ಟೆ ವಿವರ
ಜಿಲ್ಲೆಯಲ್ಲಿ ಅತಿವೃಷ್ಟಿಗೆ ಈರುಳ್ಳಿ ಸಂಪೂರ್ಣ ನಾಶವಾಗಿದ್ದು, ಬೆಳೆ ಪರಿಹಾರ ಕೇವಲ ಬೆರಳಣಿಕೆಯಷ್ಟು ಕೊಟ್ಟಿದ್ದು, ರೈತರಿಗೆ ಬಹಳ ಅನ್ಯಾಯವಾಗಿದೆ. ಅಲ್ಪಸ್ವಲ್ಪ ಬೆಳೆಗೆ ಬೆಲೆ ಇಲ್ಲದಿರುವುದದರಿಂದ ಖರೀಧಿ ಕೇಂದ್ರ ತೆರೆಯಬೇಕೆಂದು ಮನವಿ ಕೊಟ್ಟಿದ್ದರೂ ಸಹ ಸರ್ಕಾರ, ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ. ಬೆಳೆ ವಿಮೆಯು ಸಹ ಭಾರದೇ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಿಲ್ಲೆಯಲ್ಲಿ ಅನಾವೃಷ್ಟಿಗೆ ಶೇಂಗಾ, ತೊಗರಿ ಸಂಪೂರ್ಣ ಬೆಳೆ ಹಾನಿಯಾಗಿದ್ದರೂ ಸಹ ಪರಿಹಾರವನ್ನು ಕೊಟ್ಟಿರುವುದಿಲ್ಲ. ಬೆಳೆ ವಿಮೆಯು ಸಹ ಬಂದಿರುವುದಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಮೆಕ್ಕೆಜೋಳ ಬೆಳೆದಿದ್ದರೂ ಸಹ ಸರಿಯಾದ ಸಮಯಕ್ಕೆ ಬೆಂಬಲ ಬೆಲೆಯಲ್ಲಿ ಖರೀಧಿ ಕೇಂದ್ರಗಳನ್ನು ತೆರೆಯದೆ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಬಹಳ ಅನ್ಯಾಯವಾಗುತ್ತಿದ್ದು, ಸ್ಯಾಂಪಲ್ ತೆಗೆಯುವ ನೆಪದಲ್ಲಿ 50ರಿಂದ ಕ್ವಿಂಟಲ್ ರಾಗಿಯನ್ನು ಸ್ಯಾಂಪಲ್ ರಾಗಿಯನ್ನು ತೆಗೆಯುತ್ತಾರೆ ಇದು ತಪ್ಪಬೇಕು, ಬೆಸ್ಕಾಂ ಇಲಾಖೆಯಲ್ಲಿ ರೈತರಿಗೆ ಸರ್ಕಾರ ಬಂದಾಗಿನಿಂದ ಅಕ್ರಮ ಸಕ್ರಮದಡಿಯಲ್ಲಿ ಮೂಲ ಭೂತ ಸೌಕರ್ಯ ನಿಲ್ಲಿಸಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇದನ್ನೂ ಓದಿ: ಸಚಿವ ಕೆ.ಹೆಚ್.ಮುನಿಯಪ್ಪ ಚಿತ್ರದುರ್ಗ ಜಿಲ್ಲಾ ಪ್ರವಾಸ
ಸ್ವಯಂ ವೆಚ್ಚದಲ್ಲಿ ಮಾಡಬೇಕಾದರೆ ಎರಡರಿಂದ ಮೂರು ಲಕ್ಷ ಖರ್ಚಾಗುತ್ತಿರುವುದರಿಂದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಆರ್ಥಿಕ ಹೊರೆಯಾಗಿದ್ದು, ಇದನ್ನು ನಿಲ್ಲಿಸಿ ಅಕ್ರಮ ಸಕ್ಷಮದಡಿಯಲ್ಲಿ ರೈತರ ಪಂಪ್ಸೆಟ್ಗಳಿಗೆ ಮೂಲಭೂತ ಸೌಕರ್ಯ ಮೊದಲಿನಂತೆ ಒದಗಿಸಬೇಕು ಮತ್ತು ಭರಮಸಾಗರ ಸಿರಿಗೆರೆ ಹೊಳಲ್ಕೆರೆಯ ಕೆಲವು ಭಾಗದಲ್ಲಿ 7 ಗಂಟೆ ರೈತರ ಪಂಪಸೆಟ್ಗಳಿಗೆ ವಿದ್ಯುತ್ ಕೊಡಬೇಕೆಂದು ನಿಯಮವಿದ್ದರೂ ಸಹ 5 ಗಂಟೆ ವಿದ್ಯುತ್ ಕೊಡುತ್ತಿದ್ದ, ಬೇಸಿಗೆ ಶುರುವಾಗಿರುವುದರಿಂದ ತಕ್ಷಣ ಗುಣಮಟ್ಟದ 7 ಗಂಟೆ ವಿದ್ಯುತ್ ಅನ್ನು ರೈತರ ಪಂಪ್ಸೆಟ್ಗಳಿಗೆ ಕೊಡಬೇಕು ಎಂದು ಆಗ್ರಹಿಸಿದರು.
ಹಳ್ಳಿಗಳಲ್ಲಿ ರಸ್ತೆಗಳು ಗುಂಡಿಗಳಾಗಿದ್ದು, ಇದರಿಂದ ಸಾಕಷ್ಟು ಜನ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ಗುಂಡಿಗಳನ್ನು ಮುಚ್ಚಿ ರಸ್ತೆಗಳನ್ನು ತಕ್ಷಣ ಸರಿಪಡಿಸಬೇಕು. ಜಿಲ್ಲೆಯಲ್ಲಿ ಕಳ್ಳತನದ ಪ್ರಕರಣಗಳು ಜಾಸ್ತಿಯಾಗಿದ್ದು, ರೈತರು ಮತ್ತು ಸಾಮಾನ್ಯ ಜನರು ಭಯಭೀತರಾಗಿದ್ದು, ರೈತರು ತಮ್ಮ ತೋಟದ ಪಂಪ್ ಸೆಟ್ನ ಕೇಬಲ್, ಮೋಟಾರ್ ಪೈಪುಗಳನ್ನು ಕಾಯುವುದೇ ಕೆಲಸವಾಗಿದೆ. ರೈತರು ಹಗರಲಿರುಳು ದುಡಿದು ರಾತ್ರಿ ಇಡೀ ತೋಟಗಳನ್ನು ಕಾಯುವುದು ತಪ್ಪಿಸಬೇಕು ಎಂದು ಅಗ್ರಹಿಸಿದರು.
ಜಿಲ್ಲೆಯಲ್ಲಿ 2024-25ರ ಹವಮಾನ ಆಧಾರಿತ ಬೆಳೆ ವಿಮೆ ಎಲ್ಲಾ ಅಕ್ಕಪಕ್ಕದ ಜಿಲ್ಲೆಗಳಲ್ಲಿ ರೈತರ ಖಾತೆಗೆ ಹವಮಾನ ಆಧಾರಿತ ಬೆಳೆ ವಿಮೆ ಜಮೆ ಆಗಿದ್ದರೂ ಸಹ ಚಿತ್ರದುರ್ಗ ಜಿಲ್ಲೆಯಲ್ಲಿ ಇದುವರೆಗೂ ಸಹ ರೈತರ ಖಾತೆಗೆ ಜಮಾ ಆಗಿರುವುದಿಲ್ಲ. ಇದನ್ನು ತಕ್ಷಣ ಸರಿಪಡಿಸಬೇಕು. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಿ ರೈತರ ಸಾಲ ಮನ್ನಾ ಮಾಡಬೇಕೆಂದು ಸಚಿವ ಡಿ.ಸುಧಾಕರ್ ಅವರಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜನವರಿ 19 | ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಜಿಲ್ಲಾಧ್ಯಕ್ಷ ಡಿಎಸ್ ಹಳ್ಳಿ ಮಲ್ಲಿಕಾರ್ಜುನ್, ಕಬ್ಗೆರೆ ನಾಗರಾಜ್, ಕಾಂತರಾಜ್, ಮುದ್ದಾಪುರ ನಾಗಣ್ಣ, ಸಿದ್ದಣ್ಣ, ಮಲ್ಲಿಕಾರ್ಜುನ್, ರವಿಕುಮಾರ್, ವೀರಣ್ಣ, ವೆಂಕಟರೆಡ್ಡಿ, ಪ್ರಕಾಶ್ ರೆಡ್ಡಿ, ಸತೀಶ್ ರೆಡ್ಡಿ, ಕಲ್ಲೇಶಪ್ಪ, ಅಂಜಿನಪ್ಪ, ಸಂಜೀವಪ್ಪ, ಕಾಟಪ್ಪ, ಮಾರುತಿ, ಲಕ್ಷ್ಮಣ, ನಾಗರಾಜ್ ರೆಡ್ಡಿ ಸೇರಿದಂತೆ ಇತರರು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

