
ಚಿತ್ರದುರ್ಗ ನ್ಯೂಸ್.ಕಾಂ: ರೇಷ್ಮೆ ಇಲಾಖೆಯಿಂದ 2022-23ನೇ ಸಾಲಿನ ರೇಷ್ಮೆ ಕೃಷಿ ಪ್ರಶಸ್ತಿಗಾಗಿ ಉತ್ತಮ ಪ್ರಗತಿ ಸಾಧಿಸಿರುವ ರೇಷ್ಮೆ ಬೆಳೆಗಾರರಿಂದ ಅರ್ಜಿ ಆಹ್ವಾನಿಸಿದೆ. ಅಕ್ಟೋಬರ್ 17 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಪ್ರಶಸ್ತಿಗಾಗಿ ರೇಷ್ಮೆ ಬೆಳೆಗಾರರ ಅರ್ಹತೆಗಳು: ಕನಿಷ್ಟ 1 ಎಕರೆ ಹಿಪ್ಪುನೆರಳೆ ತೋಟ ಹಾಗೂ ಪ್ರತ್ಯೇಕ ಹುಳು ಸಾಕಾಣಿಕಾ ಮನೆ ಹೊಂದಿರಬೇಕು. 100 ಮೊಟ್ಟೆಗೆ ಸರಾಸರಿ ರೇಷ್ಮೆ ಗೂಡಿನ ಇಳುವರಿ 65 ಕೆ.ಜಿ ಹಾಗೂ 1 ಎಕರೆಗೆ ರೇಷ್ಮೆ ಗೂಡಿನ ಉತ್ಪಾದನೆ 500 ಕೆ.ಜಿ.ಗಿಂತ ಕಡಿಮೆ ಇರಬಾರದು.
ರೇಷ್ಮೆ ಬೆಳೆಗಾರರು ರೇಷ್ಮೆ ಪಾಸ್ ಬುಕ್, ರೇಷ್ಮೆ ಮೊಟ್ಟೆ, ಚಾಕಿ ಖರೀದಿಸಿರು ಬಗ್ಗೆ ಹಾಗೂ ರೇಷ್ಮೆ ಗೂಡು ಮಾರಾಟ ಮಾಡಿರುವ ಬಗ್ಗೆ ದಾಖಲಾತಿಗಳನ್ನು ಹೊಂದಿರಬೇಕು.
ಇದನ್ನೂ ಓದಿ: ಜನ ಅಯ್ಯೋ ಅಂದ್ರೆ ನಿಮಗೆ ಒಳ್ಳೆಯದಾಗಲ್ಲ
ಈ ಮೇಲ್ಕಂಡ ಅರ್ಹತೆ ಹೊಂದಿರುವ ರೇಷ್ಮೆ ಬೆಳೆಗಾರರು ಸ್ಥಳೀಯ ರೇಷ್ಮೆ ವಿಸ್ತರಣಾಧಿಕಾರಿಗಳು, ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಅಗತ್ಯ ಮಾಹಿತಿಗಳನ್ನು ದಾಖಲಾತಿಗಳೊಂದಿಗೆ ಒದಗಿಸಿ ಅರ್ಜಿ ಪಡೆಯುವುದು.
ಭರ್ತಿ ಮಾಡಿದ ಅರ್ಜಿಗಳನ್ನು ಅಕ್ಟೋಬರ್ 17ರ ಒಳಗೆ ಅರ್ಜಿಯನ್ನು ಪಡೆದು ಕಚೇರಿಗೆ ಸಲ್ಲಿಸಬೇಕು ಎಂದು ರೇಷ್ಮೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
