
CHITRADURGA NEWS | 04 JANUARY 2026
ಚಿತ್ರದುರ್ಗ: ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ 2025-26ನೇ ಸಾಲಿಗೆ ಅಲೈಡ್ ಹೆಲ್ತ್ ಸೈನ್ಸ್ ಹಾಗೂ ಫಿಜಿಯೋಥೆರಪಿ ಕೋರ್ಸ್ನಡಿ ಬಿ.ಎಸ್.ಸಿ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನದಲ್ಲಿ 40, ಬಿ.ಎಸ್.ಸಿ ಅರಿವಳಿಕೆ ಮತ್ತು ಅಪರೇಷನ್ ಥಿಯೇಟರ್ ತಂತ್ರಜ್ಞಾನದಲ್ಲಿ 30, ಸಾರ್ವಜನಿಕ ಆರೋಗ್ಯದಲ್ಲಿ ಪದವಿದಲ್ಲಿ 30 ಹಾಗೂ ಬ್ಯಾಚುಲರ್ ಆಫ್ ಫಿಸಿಯೋಥೆರಪಿಯಲ್ಲಿ 40 ಸೀಟುಗಳನ್ನು ವಾಕ್ ಇನ್ ಆಡ್ಮಿಷನ್ ಮೂಲಕ ಮೆರಿಟ್ ಅಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುವುದು.
ಇದನ್ನೂ ಓದಿ: ಹೊಳಲ್ಕೆರೆ, ಭರಮಸಾಗರಕ್ಕೆ ಬಿಜೆಪಿ ಮಂಡಲ ಅಧ್ಯಕ್ಷರ ನೇಮಕ

ಜಿ.ಆರ್.ಹಳ್ಳಿಯ ದಾವಣಗೆರೆ ವಿ.ವಿ. ಜ್ಞಾನಗಂಗೋತ್ರಿ ಸ್ನಾತಕೋತ್ತರ ಕೇಂದ್ರದಲ್ಲಿರುವ ನಿರ್ದೇಶಕರ ಕೊಠಡಿಯಲ್ಲಿ ಜ.7 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸೀಟುಗಳ ಹಂಚಿಕೆ ಮಾಡಲಾಗುವುದು.
ಕೆ.ಇ.ಎ ನಲ್ಲಿ ನೊಂದಾಯಿತಿ ಅಭ್ಯರ್ಥಿಗಳ ಮೆರಿಟ್, ಕೆ.ಇ.ಎಯಿಂದ ಸೀಟು ಹಂಚಿಕೆಯಾಗದವರಿಗೆ ಸೀಟ್ ಮ್ಯಾಟ್ರಿಕ್ಸ್ ಹಾಗೂ ರೋಸ್ಟರ್ ಆಧಾರದಲ್ಲಿ ಸೀಟು ಹಂಚಿಕೆ ಮಾಡಲಾಗುವುದು. ಇದಕ್ಕಾಗಿ ಕೆ.ಇ.ಎ. ನಲ್ಲಿ ಹಂಚಿಕೆ ಮಾಡಿ ಉಳಿಕೆಯಾಗಿರುವ ಆಲೈಡ್ ಹೆಲ್ತ್ ಸೈನ್ಸ್ ಹಾಗೂ ಪಿಜಿಯೊಥೆರಪಿ ಸೀಟುಗಳನ್ನು ಮಾತ್ರ ಪರಿಣಗಿಸಲಾಗುವುದು.
ಪ್ರವೇಶ ಪಡೆಯಲು ಇಚ್ಛಿಸುವರು ವೆಬ್ ಸೈಟ್ https://cmcrichitradurga.karnataka.gov.in ಅರ್ಜಿ ಸಲ್ಲಿಸಬಹುದು. ವಾಕ್ ಇನ್ ಅಡ್ಮಿಷನ್ ವೇಳೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಸೂಚಿಸಿರುವ ಅವಶ್ಯಕ ಮೂಲ ದಾಖಲೆಗಳನ್ನು ಹಾಜರುಪಡಿಸಿ, ಒಂದು ಸೆಟ್ ಜೆರಾಕ್ಸ್ ಪ್ರತಿ ಸಲ್ಲಿಸಬೇಕು.
ಇದನ್ನೂ ಓದಿ: ಕೈಗಾರಿಕೋದ್ಯಮಿಗಳಿಗೆ ಜಾಗೃತಿ ಕಾರ್ಯಕ್ರಮ
ಜ.8 ರಂದು ವೆಬ್ ಸೈಟ್‌ನಲ್ಲಿ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುವುದು. ಜ.9 ರಂದು ಸಂಜೆ 5 ಗಂಟೆಯ ಒಳಗಾಗಿ ಅಭ್ಯರ್ಥಿಗಳು ಕಡ್ಡಾಯವಾಗಿ ದಾಖಲಾತಿಯನ್ನು ಪಡೆಯಬೇಕು ಎಂದು ಪ್ರಕಟಣೆ ತಿಳಿಸಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
