By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ನಟ ಶಾರುಖ್ ಖಾನ್ ಫಿಟ್ ಆಗಿರಲು ಈ 5 ಆರೋಗ್ಯಕರ ಆಹಾರಗಳನ್ನು ತಿನ್ನುತ್ತಾರಂತೆ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ನಟ ಶಾರುಖ್ ಖಾನ್ ಫಿಟ್ ಆಗಿರಲು ಈ 5 ಆರೋಗ್ಯಕರ ಆಹಾರಗಳನ್ನು ತಿನ್ನುತ್ತಾರಂತೆ

Life Style

ನಟ ಶಾರುಖ್ ಖಾನ್ ಫಿಟ್ ಆಗಿರಲು ಈ 5 ಆರೋಗ್ಯಕರ ಆಹಾರಗಳನ್ನು ತಿನ್ನುತ್ತಾರಂತೆ

News Desk Chitradurga News
Last updated: 25 April 2025 19:50
News Desk Chitradurga News
2 months ago
Share
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 26 April 2025

ಬಾಲಿವುಡ್ ಬಾದ್ ಶಾ ಎಂದೆ ಕರೆಯುವ ನಟ ಶಾರುಖ್ ಖಾನ್ ಭಾರತದ ಚಲನಚಿತ್ರೋದ್ಯಮದಲ್ಲಿ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ ಮತ್ತು ಇವರು ಪ್ರಪಂಚದಾದ್ಯಂತ ಅನೇಕ ಅಭಿಮಾನಿಗಳು ಮತ್ತು ಅನುಯಾಯಿಗಳನ್ನು ಹೊಂದಿದ್ದಾರೆ.

ನಟ ಅಭಿನಯದಲ್ಲಿ ಮಾತ್ರವಲ್ಲ ಫಿಟ್ ಲುಕ್‍ಗೂ ಹೆಸರುವಾಸಿಯಾಗಿದ್ದಾರೆ. ಶಾರುಖ್ ಖಾನ್ ವಾರದ ಹೆಚ್ಚಿನ ದಿನಗಳಲ್ಲಿ ಆರೋಗ್ಯಕರವಾದ ಆಹಾರವನ್ನು ತಿನ್ನುತ್ತಾರಂತೆ. ಹಾಗಾಗಿ ಅವರು ಈಗಲೂ ಫಿಟ್ ಆಗಿ ಇದ್ದಾರೆ. ನಟ ಶಾರುಖ್ ಖಾನ್ ಫಿಟ್ ಆಗಿರಲು ಪ್ರತಿದಿನ ಈ 5 ಆರೋಗ್ಯಕರ ಆಹಾರಗಳನ್ನು ಸೇವಿಸುತ್ತಾರಂತೆ

ತೆಳ್ಳಗಿನ ಮಾಂಸ:

ಶಾರುಖ್ ಖಾನ್ ಅವರು ಕೆಲವೊಮ್ಮೆ ಬೆಳಗ್ಗಿನ ಉಪಾಹಾರವನ್ನು ಬಿಟ್ಟುಬಿಡುತ್ತಾರೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಆದರೆ ಪ್ರೋಟೀನ್ ವಿಷಯಕ್ಕೆ ಬಂದಾಗ, ಅವರು ಸ್ಕಿನ್‍ಔಟ್ ಚಿಕನ್‍ ಮತ್ತು ಟರ್ಕಿಯಂತಹ ತೆಳ್ಳಗಿನ ಮಾಂಸದ ಪೀಸ್‍ಗಳನ್ನು ತಿನ್ನುತ್ತಾರಂತೆ.

ಮೊಟ್ಟೆಯ ಬಿಳಿಭಾಗ:

ಶಾರುಖ್ ಅವರ ಆಹಾರದಲ್ಲಿ ಪ್ರೋಟೀನ್‍ಗಳು ಸಮೃದ್ಧವಾಗಿದ್ದು, ಕಾರ್ಬೋಹೈಡ್ರೇಟ್‍ಗಳು ಕಡಿಮೆ ಇರುತ್ತದೆಯಂತೆ. ಹಾಗಾಗಿ ಇದು ಅವರಿಗೆ ತೆಳ್ಳಗೆ ಮತ್ತು ಸದೃಢವಾಗಿರುವ ಮೈಕಟ್ಟು ಹೊಂದಲು ಅನುವು ಮಾಡಿಕೊಡುತ್ತದೆ. ಮೊಟ್ಟೆಯ ಬಿಳಿಭಾಗವು ದೇಹದಲ್ಲಿ ಪ್ರೋಟೀನ್ ಅನ್ನು ಹೆಚ್ಚಿಸುವ ಆರೋಗ್ಯಕರ ಪದಾರ್ಥವಾಗಿದೆ. ಏಕೆಂದರೆ ಅವು ಹಲವಾರು ಅಗತ್ಯ ಖನಿಜಗಳು ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿವೆ.

ಹಣ್ಣಿನ ರಸಗಳು: 

ಶಾರುಖ್ ಅವರ ತರಬೇತುದಾರ ಮತ್ತು ಪೌಷ್ಟಿಕತಜ್ಞ ಪ್ರಶಾಂತ್ ಸಾವಂತ್ ನಟ 25 ವರ್ಷದ ವ್ಯಕ್ತಿಯಂತೆ ಶಕ್ತಿಯುತವಾಗಿದ್ದಾರೆ ಎಂದು ಹೇಳುತ್ತಾರೆ. ಇದಕ್ಕೆ ಕಾರಣ ಅವರು ಹಣ್ಣಿನ ರಸಗಳನ್ನು ಕುಡಿಯುತ್ತಾರಂತೆ. ಇದು ನೈಸರ್ಗಿಕ ಸಕ್ಕರೆಗಳು ಮತ್ತು ಪೋಷಕಾಂಶಗಳಿಂದ ತುಂಬಿದ್ದು, ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.

ದ್ವಿದಳ ಧಾನ್ಯಗಳು:

ಶಾರುಖ್ ಖಾನ್ ಪ್ರೋಟೀನ್ ಅನ್ನು ಹೆಚ್ಚಿಸುವ ಮತ್ತೊಂದು ಮಾರ್ಗವೆಂದರೆ ದ್ವಿದಳ ಧಾನ್ಯಗಳನ್ನು ಸೇವಿಸುವುದು. ಈ ಆಹಾರಗಳಲ್ಲಿ ಬಿ-ಗ್ರೂಪ್ ಜೀವಸತ್ವಗಳು, ಕಬ್ಬಿಣ, ಕ್ಯಾಲ್ಸಿಯಂ, ಸತು, ಮೆಗ್ನೀಸಿಯಮ್, ಫೋಲೇಟ್, ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಆ್ಯಂಟಿ ಆಕ್ಸಿಡೆಂಟ್‍ಗಳು ಸಹ ಸಮೃದ್ಧವಾಗಿವೆ. ನಿಮ್ಮ ದೇಹದ ವಿವಿಧ ವ್ಯವಸ್ಥೆಗಳು ಸೂಕ್ತ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಇವು ಅನುವು ಮಾಡಿಕೊಡುತ್ತದೆ.

ಗ್ರಿಲ್ಡ್ / ಹಸಿ ತರಕಾರಿಗಳು: 

ತರಕಾರಿಗಳು ನಾರಿನಂಶದಿಂದ ತುಂಬಿರುತ್ತವೆ. ಇದು ಸದೃಢವಾಗಿರಲು ಬಯಸುವ ಜನರಿಗೆ ಪ್ರಮುಖ ಪೋಷಕಾಂಶಗಳಲ್ಲಿ ಒಂದಾಗಿದೆ. ತರಕಾರಿಗಳು ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರಿಂದ ನೀವು ಹೆಚ್ಚಾಗಿ ತಿನ್ನುವ ಅಗತ್ಯವಿರುವುದಿಲ್ಲ. ತರಕಾರಿಗಳನ್ನು ಗ್ರಿಲ್ ಮಾಡುವುದರಿಂದ ಪೋಷಕಾಂಶಗಳನ್ನು ನಾಶಮಾಡದೆ ಅವುಗಳನ್ನು ದೇಹವು ಹೀರಿಕೊಳ್ಳಲು ಸುಲಭವಾಗುತ್ತದೆ.

ಈ ಆಹಾರಗಳನ್ನು ಸೇವಿಸುವ ಮೂಲಕ ನಟ ಶಾರುಖ್‍ಖಾನ್‍ ಫಿಟ್ ಆಗಿದ್ದಾರೆ. ಹಾಗಾಗಿ ನೀವು ನಟ ಶಾರುಖ್‍ ಖಾನ್‍ನಂತೆ ಫಿಟ್ ಆಗಿರಲು ಈ ಆಹಾರಗಳನ್ನು ಸೇವಿಸಿ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:Actor Shah Rukh KhanChitradurgaChitradurga newsChitradurga UpdatesFoodKannada Latest NewsKannada Newspitಆಹಾರಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ನಟ ಶಾರುಖ್ ಖಾನ್ಪಿಟ್
Share This Article
Facebook Email Print
Previous Article today bhavishya Astrology: ದಿನ ಭವಿಷ್ಯ | ಏಪ್ರಿಲ್ 26 | ಉದ್ಯೋಗಗಳಲ್ಲಿ ಬಡ್ತಿ, ಆರ್ಥಿಕವಾಗಿ ಅನುಕೂಲಕರ ವಾತಾವರಣ
Next Article ಹೆಚ್ಚಿನ ಈಸ್ಟ್ರೊಜೆನ್ ಮಟ್ಟವನ್ನು ಹೊಂದಿರುವರು ಈ ಆಹಾರಗಳನ್ನು ತಪ್ಪಿಸಬೇಕು
Leave a Comment

Leave a Reply Cancel reply

Your email address will not be published. Required fields are marked *

arecanut price list
ಅಡಿಕೆ ಧಾರಣೆ | ಜೂನ್‌ 16 | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್‌
ಅಡಕೆ ಧಾರಣೆ
UPSC ಪರೀಕ್ಷೆ ತರಬೇತಿಗೆ ಅರ್ಜಿ ಆಹ್ವಾನ
ಮುಖ್ಯ ಸುದ್ದಿ
ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಪಾಪೇಶ್ ಅವಿರೋಧ ಆಯ್ಕೆ
ಮುಖ್ಯ ಸುದ್ದಿ
ಖಾಸಗಿ ಕಂಪನಿಗಳಲ್ಲಿ ಉದ್ಯೋಗ | ಜೂ.19 ರಂದು ನೇರ ನೇಮಕಾತಿ ಸಂದರ್ಶನ
ಮುಖ್ಯ ಸುದ್ದಿ
© Chitradurga News. Ruby Design Company. All Rights Reserved.
Welcome Back!

Sign in to your account

Username or Email Address
Password

Lost your password?

Not a member? Sign Up