ಮುಖ್ಯ ಸುದ್ದಿ
ಆಡುಮಲ್ಲೇಶ್ವರ ಮೃಗಾಲಯದಲ್ಲಿ ಹೊಸ ದಾಖಲೆ | ಹೊಸ ವರ್ಷದ ದಿನ ಎಷ್ಟು ಕಲೆಕ್ಷನ್ ನೋಡಿ..
CHITRADURGA NEWS 02 JANUARY 2024
ಚಿತ್ರದುರ್ಗ: ನಗರಕ್ಕೆ ಹೊಂದಿಕೊಂಡಿರುವ ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ 2025 ಹೊಸ ವರ್ಷ ಅದೃಷ್ಟದ ವರ್ಷವಾಗಿದೆ. ಈ ಹೊಸ ವರ್ಷದಂದು ಹೊಸ ದಾಖಲೆಯೇ ನಿರ್ಮಾಣವಾಗಿದೆ.
ಆಡುಮಲ್ಲೇಶ್ವರ ಕಿರು ಮೃಗಾಲಯ ಸ್ಥಾಪನೆಯಾದ 37 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ದಾಖಲೆ ನಿರ್ಮಾಣವಾಗಿದ್ದು, ಇದು ಈವರೆಗೆ ಭೇಟಿ ನೀಡಿದ ಪ್ರವಾಸಿಗರು ಹಾಗೂ ಸಂಗ್ರಹವಾದ ಮೊತ್ತದಲ್ಲಿ ಅತ್ಯಧಿಕವಾಗಿದೆ.
ಇದನ್ನೂ ಓದಿ: ಹೊಸ ವರ್ಷದ ಮೊದಲ ದಿನದ ಅಡಿಕೆ ರೇಟ್
ಜನವರಿ 1 ರಂದು ಒಂದೇ ದಿನ ಮೃಗಾಲಯಕ್ಕೆ ಬರೋಬ್ಬರಿ 5400ಕ್ಕೂ ಹೆಚ್ಚು ಜನ ಭೇಟಿ ನೀಡಿದ್ದು, ಒಂದೇ ದಿನ ಬರೋಬ್ಬರಿ 2,44,145 ರೂ. ಸಂಗ್ರಹವಾಗಿದೆ.
ಮೃಗಾಲಯಕ್ಕೆ 825 ಬೈಕುಗಳು, 216 ಆಟೋಗಳು, 233 ಕಾರುಗಳು ಬಂದು ಹೋಗಿವೆ. ಇದೆಲ್ಲದರಿಂದ ಒಂದೇ ದಿನ 2.44 ಲಕ್ಷ ರೂ. ಸಂಗ್ರಹವಾಗಿದೆ ಎಂದು ಆಡುಮಲ್ಲೇಶ್ವರ ಮೃಗಾಲಯದ ಸಹಾಯಕ ಅರಣ್ಯಾಧಿಕಾರಿ ಅಕ್ಷತಾ ಮಾಹಿತಿ ನೀಡಿದ್ದಾರೆ.
ಇಲ್ಲಿದೆ ನೋಡಿ ಆಡುಮಲ್ಲೇಶ್ವರ ಕಿರುಮೃಗಾಲಯದ ವೀಡಿಯೋ..
ಮುರುಘಾ ವನ, ಮುರುಘಾಶ್ರೀ ಮ್ಯೂಸಿಯಂ ಭರ್ಜರಿ ಕಲೆಕ್ಷನ್:
ಹೊಸ ವರ್ಷದ ಸಂಭ್ರಮಾಚರಣೆ ನೆಪದಲ್ಲಿ ಐತಿಹಾಸಿಕ ಮುರುಘಾ ಮಠಕ್ಕೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು, ಭಕ್ತರು ಆಗಮಿಸಿದ್ದರು.
ಇದನ್ನೂ ಓದಿ: ಆಡುಮಲ್ಲೇಶ್ವರ ಮೃಗಾಲಯ | ಪ್ರಾಣಿ ದತ್ತು ಪಡೆಯಲು ಸುವರ್ಣಾವಕಾಶ | ಯಾವ ಪ್ರಾಣಿಗೆ ಎಷ್ಟು ರೇಟ್ ?
ಮುರುಘಾ ಮಠದ ಆವರಣದಲ್ಲಿರುವ ಮುರುಘಾ ವನ, ಮ್ಯೂಸಿಯಂ ಸೇರಿದಂತೆ ಮಠವನ್ನು ಸಾವಿರಾರು ಪ್ರವಾಸಿಗರು ವೀಕ್ಷಣೆ ಮಾಡಿದ್ದಾರೆ.
ಮುರುಘಾ ವನಕ್ಕೆ ಟಿಕೇಟ್ ಪಡೆದು ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಬರೋಬ್ಬರಿ 18 ಸಾವಿರ. ಇಂದು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ ಪರಿಣಾಮ ಸಂಗ್ರಹವಾದ ಮೊತ್ತ 4.30 ಲಕ್ಷ ರೂ.ಗಳು ಸಂಗ್ರಹವಾಗಿದೆ.