ಮುಖ್ಯ ಸುದ್ದಿ
ಇನ್ನೊಂದು ವಾರದಲ್ಲಿ ಕೋಡಿ ಬೀಳಲಿದೆ ವಿವಿ ಸಾಗರ
CHITRADURGA NEWS | 02 JANUARY 2024
ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ಜಲಾಶಯದಿಂದ ಒಳಹರಿವು ಮುಂದುವರೆದಿದ್ದು, ಇದೇ ಪ್ರಮಾಣದಲ್ಲಿ ಒಂದು ವಾರ ನೀರು ಬಂದರೆ ಮುಂದಿನ ಏಳೆಂಟು ದಿನಗಳಲ್ಲೇ ಜಲಾಶಯ ಕೋಡಿ ಹರಿಯಲಿದೆ. ವಾಣಿವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ 129.65 ಅಡಿ ತಲುಪಿದೆ.
ಕ್ಲಿಕ್ ಮಾಡಿ ಓದಿ: ಆಡುಮಲ್ಲೇಶ್ವರ ಮೃಗಾಲಯದಲ್ಲಿ ಹೊಸ ದಾಖಲೆ | ಹೊಸ ವರ್ಷದ ದಿನ ಎಷ್ಟು ಕಲೆಕ್ಷನ್ ನೋಡಿ..
ಜನವರಿ 2 ಗುರುವಾರ ಬೆಳಗ್ಗೆ ನಡೆಸಿದ ಮಾಪನದ ವೇಳೆ ಜಲಾಶಯಕ್ಕೆ 693 ಕ್ಯೂಸೆಕ್ ನೀರು ಹರಿದು ಬಂದಿದೆ.
135 ಅಡಿ ಎತ್ತರ ಇರುವ ಮಾರಿಕಣಿವೆ ಡ್ಯಾಂ 131 ಅಡಿ ದಾಟುವ ಮೊದಲೇ ನೀರು ಬಂದ ತಕ್ಷಣ ಕೋಡಿ ಬೀಳಲಿದೆ.
30 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯಕ್ಕೆ ಈವರೆಗೆ 30.12 ಟಿಎಂಸಿ ಅಡಿ ನೀರು ಬಂದಿದೆ.
ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | ಜನವರಿ 02 | ಉದ್ಯೋಗದಲ್ಲಿ ಬದಲಾವಣೆ, ಆರ್ಥಿಕ ಲಾಭ, ಹೊಸ ವಾಹನ ಖರೀದಿ
ಇನ್ನೂ ಅರ್ಧ ಅಡಿ ನೀರು ಬರುವುದು ಬಾಕಿಯಿದ್ದು, ಒಂದು ವಾರದಲ್ಲಿ ಕೋಡಿ ಬೀಳಲಿದೆ.