Connect with us

ಆಡುಮಲ್ಲೇಶ್ವರ ಮೃಗಾಲಯ | ಪ್ರಾಣಿ ದತ್ತು ಪಡೆಯಲು ಸುವರ್ಣಾವಕಾಶ | ಯಾವ ಪ್ರಾಣಿಗೆ ಎಷ್ಟು ರೇಟ್ ?

ಆಡುಮಲ್ಲೇಶ್ವರ ಮೃಗಾಲಯ

ಮುಖ್ಯ ಸುದ್ದಿ

ಆಡುಮಲ್ಲೇಶ್ವರ ಮೃಗಾಲಯ | ಪ್ರಾಣಿ ದತ್ತು ಪಡೆಯಲು ಸುವರ್ಣಾವಕಾಶ | ಯಾವ ಪ್ರಾಣಿಗೆ ಎಷ್ಟು ರೇಟ್ ?

CHITRADURGA NEWS | 19 DECEMBER 2024

ಚಿತ್ರದುರ್ಗ: ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಿರುವ ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಪ್ರಾಣಿಗಳನ್ನು ದತ್ತು ಸ್ವೀಕರಿಸಲು ಪ್ರಾಣಿಪ್ರಿಯರಿಗೆ ಒಂದು ಸುವರ್ಣಾವಕಾಶ ಒದಗಿಸಲಾಗಿದೆ.

ಈ ಯೋಜನೆ ಮೂಲಕ ಆಡುಮಲ್ಲೇಶ್ವರ ಕಿರು ಮೃಗಾಲಯದ ಅಭಿವೃದ್ಧಿಗೆ ನೆರವಾಗಲು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

ಇದನ್ನೂ ಓದಿ: ಕೋಟೆನಾಡಿಗೆ ಕಿಚ್ಚ ಸುದೀಪ್ | ಡಿ.22 ರಂದು ಮ್ಯಾಕ್ಸ್ ಫ್ರೀ ರಿಲೀಸ್ ಇವೆಂಟ್

ಆಡು ಮಲ್ಲೇಶ್ವರ ಕಿರು ಮೃಗಾಲಯದಲ್ಲಿ 315 ವಿವಿಧ ರೀತಿಯ ಪ್ರಾಣಿ ಪಕ್ಷಿಗಳನ್ನು ಪ್ರದರ್ಶಿಸಲಾಗುತ್ತಿದೆ.

ಮುದ್ದಾದ ಕರಡಿ ಮರಿಗಳ ಆಟ

ಪ್ರಾಣಿ ಪ್ರಿಯರು ಮೃಗಾಲಯದಲ್ಲಿನ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದುಕೊಂಡಲ್ಲಿ ಮೃಗಾಲಯದ ಪ್ರಾಣಿ, ಪಕ್ಷಿಗಳ ಆಹಾರ, ವೈದ್ಯಕೀಯ ವೆಚ್ಚ, ಅಭಿವೃದ್ಧಿ ಕಾಮಗಾರಿ ಹಾಗೂ ಇತ್ಯಾದಿ ವೆಚ್ಚಗಳಿಗೆ ಮತ್ತು ಮೃಗಾಲಯದ ಅಭಿವೃದ್ಧಿಗೆ ಮತ್ತಷ್ಟು ಸಹಾಯಕವಾಗುತ್ತದೆ.

ಇದನ್ನೂ ಓದಿ: ಆದ್ಯತೆ ಮೇರೆಗೆ ಭದ್ರಾ ಮೇಲ್ದಂಡೆ ಯೋಜನೆ ಮೊದಲ ಹಂತ ಪೂರ್ಣ | ಸಚಿವ ಕೃಷ್ಣ ಬೈರೇಗೌಡ

ಅಲ್ಲದೇ ಪ್ರಾಣಿ ದತ್ತು ಪಡೆಯಲು ನೀಡಿದ ಮೊತ್ತಕ್ಕೆ ಆದಾಯ ತೆರಿಗೆ ಕಾಯ್ದೆ 1961ರ ಕಲಂ 80ಜಿ(5)(6)ರನ್ವಯ ಶೇ.50ರಷ್ಟು ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ.

ದತ್ತು ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ಆಡುಮಲ್ಲೇಶ್ವರ ಕಿರು ಮೃಗಾಲಯದ ವಲಯ ಅರಣ್ಯಾಧಿಕಾರಿ ದೂರವಾಣಿ ಸಂಖ್ಯೆ 7795709638 ಹಾಗೂ ಗಸ್ತು ಅರಣ್ಯ ಪಾಲಕ 8722618795 ಗೆ ಸಂಪರ್ಕಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಪ್ರಾಣಿಗಳ ದತ್ತು ವಿವರ:

ಪ್ರಾಣಿಗಳ ದತ್ತು ಪ್ರಕ್ರಿಯೆಯನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದು ಡೈಮಂಡ್, ನಂತರ ಗೋಲ್ಡ್, ನಂತರ ಸಿಲ್ವರ್ ಆನಂತರ ಬ್ರೋನ್ಜ್(ಕಂಚು).

ಇದನ್ನೂ ಓದಿ: ನಗರಸಭೆ ಬಜೆಟ್ | ಸಾರ್ವಜನಿಕರಿಂದ ಸಲಹೆ, ಸೂಚನೆಗೆ ಸಮಾಲೋಚನಾ ಸಭೆ

ಡೈಮಂಡ್: ಹುಲಿ – 2 ಲಕ್ಷ ರೂ.

ಗೋಲ್ಡ್: ಚಿರತೆ ಮತ್ತು ಕರಡಿ – 50 ಸಾವಿರ, ನರಿ – 30 ಸಾವಿರ, ನೀಲ್‍ಗಾಯ್ – 20 ಸಾವಿರ, ಎಮು – 20 ಸಾವಿರ.

ಸಿಲ್ವರ್: ಮೊಸಳೆ, ಚುಕ್ಕೆ ಜಿಂಕೆ, ಕೃಷ್ಣಮೃಗ – 15 ಸಾವಿರ.

ಬೋನ್ಜ್(Bronze): ಪೈಥಾನ್(ಹೆಬ್ಬಾವು), ನವಿಲು, ಹಳದಿ ಗೋಲ್ಡನ್ ಪೆಸೆಂಟ್(ಪಕ್ಷಿ), ಲೇಡಿ ಅಮ್‍ಹೆರಸ್ಟ್, ಗೋಲ್ಡನ್ ಫೆಸೆಂಟ್, ಸಿಲ್ವರ್ ಫೆಸೆಂಟ್, ರೋಸ್ ರಿಂಗಡ್ ಪಾರ್ಕೀಟ್, ಸ್ಟಾರ್ ಟಾರ್ಟ್ಯಾಸ್, ಟಾರ್ಟ್ಯಾಸ್, ಲವ್ ಬಡ್ರ್ಸ್ ಈ ಎಲ್ಲಾ ಪಕ್ಷಿಗಳನ್ನು ಒಂದು ವರ್ಷದ ಅವಧಿಗೆ 5 ಸಾವಿರಕ್ಕೆ ದತ್ತು ಪಡೆಯಬಹುದು.

ಆಡುಮಲ್ಲೇಶ್ವರ ಮೃಗಾಲಯ ಕುರಿತ ಸುಂದರ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ:  https://youtu.be/TZbgGG1j8xA?si=c2r9CEqMbJ83M3yY

ಇದನ್ನೂ ಓದಿ: 129 ಅಡಿ ದಾಟಿದ ವಿವಿ ಸಾಗರ ಜಲಾಶಯ ಮಟ್ಟ

ಕಂಚು ವಿಭಾಗ ಹೊರತುಪಡಿಸಿ ಡೈಮಂಡ್, ಗೋಲ್ಡ್ ಹಾಗೂ ಸಿಲ್ವರ್ ವಿಭಾಗದ ಪ್ರಾಣಿಗಳನ್ನು ದತ್ತು ಪಡೆದವರಿಗೆ ಒಂದು ವರ್ಷದ ಅವಧಿಗೆ ಆಡುಮಲ್ಲೇಶ್ವರ ಮೃಗಾಲಯಕ್ಕೆ ಉಚಿತ ಪಾಸ್ ನೀಡಲಾಗುತ್ತದೆ.

ಈ ಪಾಸ್ ಮೂಲಕ ವರ್ಷದಲ್ಲಿ 5 ಬಾರಿ ಕುಟುಂಬದ 5 ಸದಸ್ಯರೊಂದಿಗೆ ಭೇಟಿ ನೀಡಬಹುದಾಗಿದೆ ಎಂದು ಆಡುಮಲ್ಲೇಶ್ವರ ಕಿರು ಮೃಗಾಲಯದ ಆರ್‍ಎಫ್‍ಓ ಅಕ್ಷತಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಆಹಾ ಬನ್ನಿ ಜೋಗಿಮಟ್ಟಿ – ಆಡುಮಲ್ಲೇಶ್ವರದ ಸೊಬಗ ನೋಡಿ | ವೀಡಿಯೋ ಸ್ಟೋರಿ

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version