Connect with us

ವಾಣಿವಿಲಾಸ ಸಾಗರದ ನೀರಿನ ಮಟ್ಟ ಹೆಚ್ಚಳ | ಇಂದಿನ ನೀರಿನ ಮಟ್ಟ

vv sagara full

ಮುಖ್ಯ ಸುದ್ದಿ

ವಾಣಿವಿಲಾಸ ಸಾಗರದ ನೀರಿನ ಮಟ್ಟ ಹೆಚ್ಚಳ | ಇಂದಿನ ನೀರಿನ ಮಟ್ಟ

CHITRADURGA NEWS | 20 DECEMBER 2024

ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯಕ್ಕೆ ಶುಕ್ರವಾರ ಕೂಡಾ 693 ಕ್ಯೂಸೆಕ್ ನೀರು ಹರಿದು ಬಂದಿದೆ.

ಈ ಮೂಲಕ ಜಲಾಶಯ ಮಟ್ಟ ಮತ್ತಷ್ಟು ಹೆಚ್ಚಾಗಿದೆ. 135 ಅಡಿ ಎತ್ತರದ ಜಲಾಶಯದಲ್ಲಿ 130 ಅಡಿಗೆ ನೀರು ಬಂದ ತಕ್ಷಣ ಕೋಡಿ ಬೀಳುತ್ತದೆ.

ಇದನ್ನೂ ಓದಿ: ಭದ್ರಾ ಮೇಲ್ದಂಡೆ ಅನುದಾನಕ್ಕೆ | ಸಂಸದರ ನಿಯೋಗದಿಂದ ಮನವಿ

ಡಿಸೆಂಬರ್ 20 ರಂದು ಬೆಳಗ್ಗೆ 8 ಗಂಟೆಗೆ ನಡೆಸಿದ ಮಾಪನದ ವೇಳೆ ಜಲಾಶಯಕ್ಕೆ 129.10 ಅಡಿವರೆಗೆ ನೀರು ಬಂದಿದೆ.

30 ಟಿಎಂಸಿ ಅಡಿ ಸಾಮಥ್ರ್ಯದ ಜಲಾಶಯದಲ್ಲಿ ಈಗ 29.66 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇದೇ ಪ್ರಮಾಣದಲ್ಲಿ ನೀರು ಹರಿದರೆ ಮುಂದಿನ 20 ದಿನಗಳಲ್ಲಿ ಜಲಾಶಯ ಕೋಡಿ ಬೀಳುವ ಅಂದಾಜು ಮಾಡಲಾಗಿದೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version