ಹೊಸದುರ್ಗ
ಜನರಲ್ಲಿ ಆತಂಕ ಹುಟ್ಟಿಸಿದ್ದ ಚಿರತೆ ಸೆರೆ | ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆ
Published on
CHITRADURGA NEWS | 16 JANUARY 2024
ಹೊಸದುರ್ಗ: ಹೊಸದುರ್ಗ ತಾಲೂಕಿನ ಹಲವು ಭಾಗಗಳಲ್ಲಿ ಆಗಾಗ ಕಾಣಿಸಿಕೊಂಡು ಜನರಲ್ಲಿ ಭಯ ಹುಟ್ಟಿಸಿದ್ದ ಚಿರತೆಯೊಂದು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.
ಹೊಸದುರ್ಗ ತಾಲೂಕು ಕೃಷ್ಣಾಪುರ ಬಳಿ ಜಮೀನಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಚಿರತೆ ಬಂದು ಬಂದಿಯಾಗಿದೆ.
ಇದನ್ನೂ ಓದಿ: ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿ | ಸ್ಥಳದಲ್ಲೇ ಮೃತಪಟ್ಟ ಸುಚಿತ್ರಾ
ಒಂದು ವಾರದಿಂದ ಪದೇ ಪದೇ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಚಿರತೆಯ ಭಯದಿಂದ ಜನ ರಾತ್ರಿ ಹೊತ್ತು ಜಮೀನು, ತೋಟಗಳಿಗೆ ಹೋಗಲು ಹೆದರಿಕೊಂಡಿದ್ದರು.
ಈಗ ಅರಣ್ಯ ಇಲಾಖೆಯ ಬೋನಿಗೆ ಚಿರತೆ ಸಿಕ್ಕಿಬಿದ್ದ ವಿಷಯ ಕೇಳಿ ಜನ ನಿಟ್ಟುಸಿರುವ ಬಿಟ್ಟಿದ್ದಾರೆ. ಚಿgಚಿve ನೋಡಲು ಸಾಕಷ್ಟು ಜನ ಕೂಡಾ ಸ್ಥಳಕ್ಕೆ ಬಂದಿದ್ದರು.
ತಾಲೂಕಿನ ಹೆಬ್ಬಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಚಿರತೆ ಕಾಣಿಸಿಕೊಳ್ಳುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
Continue Reading
Related Topics:Bonige, forest department, Hebballi, Hosdurga, Krishnapur, leopard, ಅರಣ್ಯ ಇಲಾಖೆ, ಕೃಷ್ಣಾಪುರ, ಚಿರತೆ, ಬೋನಿಗೆ, ಹೆಬ್ಬಳ್ಳಿ, ಹೊಸದುರ್ಗ
Click to comment